
ಒತ್ತಡಗಳ ಮಧ್ಯೆ ಮಲಗಿದ ಪ್ರತಿಯೊಬ್ಬರಿಗೆ ಬೆಳ್ಳಂಬೆಳಗ್ಗೆ ಏಳುವುದೆಂದರೆ ಚಿತ್ರ ಹಿಂಸೆ. ಹೀಗಾಗಿ ಬೆಳಗ್ಗೆ ಏಳಬೇಕೆನ್ನುವರು ಆಲಾರಾಂ ಇಟ್ಟುಕೊಳ್ಳುತ್ತಾರೆ. ಅದರಂತೆ ಬೆಳಿಗ್ಗೆ ಆಲಾರಾಂ ಹೊಡೆದುಕೊಂಡಾಗ ಸುಖ ನಿದ್ರೆಯಿಂದ ಏಳುವ ಬದಲು ಅಲಾರಾಂ ಆಫ್ ಮಾಡಿ ಮತ್ತೆ ಮಲಗಿಕೊಳ್ಳುತ್ತಾರೆ.
ಇಂತವರಿಗಾಗಿ ವಿಶೇಷ ಆ್ಯಪ್ ನ್ನು ಸಿದ್ದಪಡಿಸಲಾಗಿದೆ. ಆ್ಯಂಡ್ರಾಯ್ಡ್ ಮೊಬೈಲ್ಗಗಳಿಗೆ ಬಳಕೆಯಾಗುವ Snap Me Up app ಎಂಬ ಆ್ಯಪ್ ನಲ್ಲಿ ಅಲಾರಾಂ ಇಟ್ಟರೆ ಬೆಳಿಗ್ಗೆ ಆ ವೇಳೆಗೆ ಹೊಡೆದುಕೊಳ್ಳುವ ಇದು ನೀವು ಎದ್ದು ನಗುಮುಖದಲ್ಲಿ ಸೆಲ್ಫಿ ತೆಗೆದುಕೊಳ್ಳುವವರೆಗೂ ನಿರಂತರವಾಗಿ ಶಬ್ದ ಮಾಡುತ್ತಲೇ ಇರುತ್ತದೆ.
ಈ ಆ್ಯಪ್ ನಲ್ಲಿ ನಿಮ್ಮ ಮುಖ ಮೊಬೈಲಿನಲ್ಲಿ ಸ್ಪಷ್ಟವಾಗಿ ಕಾಣುವವರೆಗೂ ಶಬ್ದ ಮಾಡುವ ಇದು ಸೆಲ್ಫಿ ಸ್ಪಷ್ಟವಾಗಿ ಬಂದ ಮೇಲೆಯೇ ತನ್ನ ಶಬ್ದವನ್ನು ನಿಲ್ಲಿಸುತ್ತದೆ. ಸೆಲ್ಫಿ ತೆಗೆದುಕೊಳ್ಳದೇ ಆಲಾರಾಂ ಶಬ್ದ ನಿಲ್ಲುವುದಿಲ್ಲ. ಈ ಆ್ಯಪ್ ಅಳವಡಿಸಿಕೊಳ್ಳಿ ಬೆಳ್ಳಂ ಬೆಳಿಗ್ಗೆಯೇ ಸುಂದರ ಮುಖದೊಂದಿಗೆ ಸೆಲ್ಫಿ ತೆಗೆದುಕೊಳ್ಳಿ.
ನಿಮ್ಮ ಸೆಲ್ಫಿಯನ್ನು ಸುರಕ್ಷಿತವಾಗಿ ಪೋಲ್ಡರ್ ವೊಂದರಲ್ಲಿ ಸಂರಕ್ಷಿಸಿಡಲಿದ್ದು, ಬೆಳಗಿನ ವೇಳೆ ನಮ್ಮ ಮುಖ ಹೇಗಿರುತ್ತದೆಂಬುದನ್ನು ಆಗಾಗ ನೋಡಿಕೊಳ್ಳುತ್ತಿರಬಹುದು.
Advertisement