

ತನ್ನದೇ ಜಾಲತಾಣದಲ್ಲಿ ತಾಜಾ ಸುದ್ದಿ, ಲೇಖನಗಳನ್ನು ಪ್ರಕಟಿಸುವ ಯೋಜನೆಗೆ ಸಾಮಾಜಿಕ ಜಾಲತಾಣದ ಅಗ್ರಗಣ್ಯ ಫೇಸ್ ಬುಕ್ ಸಂಸ್ಥೆ ಬುಧವಾರ ಚಾಲನೆ ನೀಡಿದೆ( http://media.fb.com/).
ಲೇಖನಗಳನ್ನು ಪ್ರಕಟಿಸುವುದಕ್ಕಾಗಿ, ನ್ಯೂಯಾರ್ಕ್ ಟೈಮ್ಸ್, ನ್ಯಾಷನಲ್ ಜಿಯೋಗ್ರಾಫಿಕ್ ಸೇರಿದಂತೆ 9 ಸುದ್ದಿ ಸಂಸ್ಥೆಗಳೊಂದಿಗೆ ಫೇಸ್ ಬುಕ್ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಫೇಸ್ ಬುಕ್ ನ ಈ ಯೋಜನೆಯಿಂದ, ಜಾಲತಾಣಗಳಲ್ಲಿ ಲೇಖನಗಳನ್ನು ಓದುವ ಹವ್ಯಾಸವುಳ್ಳವರು, ವೆಬ್ ಸೈಟ್ ಲೋಡ್ ಆಗುವವರೆಗು ಕಾಯುವ ಅಗತ್ಯವಿರುವುದಿಲ್ಲ.
ಫೇಸ್ ಬುಕ್ ಪ್ರಾರಂಭಿಸಿರುವ ನೂತನ ವೆಬ್ ಸೈಟ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಒಪ್ಪಂದ ಮಾಡಿಕೊಂಡಿ ಸುದ್ದಿ ಸಂಸ್ಥೆಗಳ ಲೇಖನಗಳು ಅಪ್ ಡೇಟ್ ಆಗಲಿವೆ. ಗೂಗಲ್ ವೆಬ್ ಸೈಟ್ ಇಣುಕದೆಯೆ ಲೇಖನ, ತಾಜಾ ಸುದ್ದಿಗಳ ಅಪ್ ಡೇಟ್ ಪಡೆಯಬಹುದಾಗಿರುವುದರಿಂದ ಫೇಸ್ ಬುಕ್ ನ ಈ ಹೊಸ ಪ್ರಯೋಗ, ಮುಂದಿನ ದಿನಗಳಲ್ಲಿ ಗೂಗಲ್ ಗೆ ಪೈಪೋಟಿ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Advertisement