

ನವದೆಹಲಿ: ಭಾರತ ಈ ವರ್ಷಾಂತ್ಯಕ್ಕೆ 500 ಮಿಲಿಯನ್(ಅರ್ಧ ಬಿಲಿಯನ್)ಗೂ ಹೆಚ್ಚು ಮೊಬೈಲ್ ಬಳಕೆದಾರರನ್ನು ಹೊಂದಲಿದ್ದು, ಒಳ್ಳೆ ಸಾಧನ, ಸುಲಭ ಸುಂಕ ಮತ್ತು ಡಿಜಿಟಲ್ ಸಾಕ್ಷರತೆಯ ಡ್ರೈವ್‌ಗಳಿಗೊಂದು ಧನ್ಯವಾದ ಎಂದು ಜಿಎಸ್‌ಎಂ ಹೇಳಿದೆ.
ಜಿಎಸ್‌ಎಂ ಅಧ್ಯಯನ ವರದಿ ಪ್ರಕಾರ, ವಿಶ್ವದ ಶೇ.13ರಷ್ಟು ಮೊಬೈಲ್ ಬಳಕೆದಾರರು ಭಾರತದಲ್ಲಿದ್ದಾರೆ. ಮೊಬೈಲ್ ಚಂದಾದಾರರ ಬೆಳವಣಿಗೆ ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಸರಾಸರಿಯನ್ನು ಮೀರಿಸುವ ಸಾಧ್ಯತೆ ಇದೆ ಎಂದಿದೆ.
ಜಗತ್ತಿನಲ್ಲಿ ಚೀನಾ ನಂತರ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ಎರಡನೇ ದೇಶ ಭಾರತ.
ಭಾರತ ಒಂದು ಅತ್ಯುತ್ತಮ ಮೊಬೈಲ್ ಮಾರುಕಟ್ಟೆ. ಮೊಬೈಲ್ ನಾಗರಿಕರ ಜೀವನ ಮಟ್ಟ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಆರ್ಥಿಕ ಬೆಳವಣಿಗೆಗೂ ಕಾರಣವಾಗಿದೆ ಎಂದು ಜಿಎಸ್‌ಎಂ ಪ್ರಧಾನ ನಿರ್ದೇಶಕ ಮತ್ತು ತಂತ್ರಜ್ಞಾನ ಅಧಿಕಾರಿ ಅಲೆಕ್ಸ್ ಸಿಂಕ್ಲೇರ್ ಅವರು ಹೇಳಿದ್ದಾರೆ.
Advertisement