ಚೈನಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಗೂಗಲ್

ವಿಶ್ವ ಅತಿ ದೊಡ್ಡ ಅಂತರ್ಜಾಲ ಮಾರುಕಟ್ಟೆಯಾದ ಚೈನಾಗೆ ಗೂಗಲ್ ತನ್ನ ಸೇವೆಗಳೊಂದಿಗೆ ಹಿಂದಿರುಗಲಿದೆ ಎಂಬ ವದಂತಿಗಳು ಹರಡುತ್ತಿದ್ದಂತೆ ಚೈನಾದ ಹಲವು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ವಿಶ್ವ ಅತಿ ದೊಡ್ಡ ಅಂತರ್ಜಾಲ ಮಾರುಕಟ್ಟೆಯಾದ ಚೈನಾಗೆ ಗೂಗಲ್ ತನ್ನ ಸೇವೆಗಳೊಂದಿಗೆ ಹಿಂದಿರುಗಲಿದೆ ಎಂಬ ವದಂತಿಗಳು ಹರಡುತ್ತಿದ್ದಂತೆ ಚೈನಾದ ಹಲವು ಭಾಗಗಳಲ್ಲಿ ಗೂಗಲ್ ಸೇವೆಗಳು ಮತ್ತೆ ಲಭ್ಯವಾಗಿವೆ ಎಂದು ಗುರುವಾರ ಮಾಧ್ಯಮವೊಂದು ವರದಿಮಾಡಿದೆ.

ಈಗಲೂ ಚೈನಾದಲ್ಲಿ ಅಂತರ್ಜಾಲ ಹುಡುಕುವುಕೆಯ ಬೇಡಿಕೆಗಳನ್ನು ತನ್ನ ಹಾಂಕಾಗ್ ಅಂತರ್ಜಾಲ ತಾಣಕ್ಕೆ ಗೂಗಲ್ ವರ್ಗಾಯಿಸುತ್ತಿದ್ದರೂ, ಸಂಸ್ಥೆಯ ಭೂಪಟ ಸೇವೆಗಳು ಈಗ ಮತ್ತೆ ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಪೀಪಲ್ಸ್ ಡೈಲಿ ವರದಿ ಮಾಡಿದೆ.

ಬುಧವಾರದಿಂದ ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಅರ್ಥ್ ನ ಸೇವೆಗಳು ಬೀಜಿಂಗ್ ನಲ್ಲಿ ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಆದರೆ ಗೂಗಲ್ ನ ಜಿಮೇಲ್, ನ್ಯೂಸ್ ಇನ್ನಿತರ ಸೇವೆಗಳು ಚೈನಾದಲ್ಲಿ ಲಭ್ಯವಿಲ್ಲ.

ಚೈನಾದ ಸರ್ಕಾರದ ನಿಯಂತ್ರಣಕ್ಕೆ ಬಾಗದೆ ಗೂಗಲ್ ಸಂಸ್ಥೆ ೨೦೧೦ರಲ್ಲಿ ತನ್ನೆಲ್ಲಾ ಸೇವಗಳನ್ನು ರದ್ದು ಮಾಡಿತ್ತು.

ಆದರೆ ಈ ವರ್ಷ ನೂತನವಾಗಿ ನೇಮಕವಾಗಿರುವ ಗೂಗಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾ ಸುಂದರ್ ಪಿಚ್ಚೈ ಅವರು ಚೈನಾ ನಾಗರಿಕರಿಗೆ ಮತ್ತೆ ಸೇವೆ ನೀಡಲು ಸಂಸ್ಥೆ ಉತ್ಸುಕವಾಗಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com