ಬಣ್ಣ ಬದಲಿಸಲಿರುವ ಗೂಗಲ್

ಇತ್ತೀಚೆಗೆ ಕಂಪನಿಯಲ್ಲಿ ಭಾರಿ ಬದಲಾವಣೆ ತಂದು ಸುದ್ದಿ ಮಾಡಿದ್ದ ಗೂಗಲ್, ಇದೀಗ ತನ್ನ ಲೋಗೋ ಕೂಡ ಬದಲಾಯಿಸಿಕೊಳ್ಳಲಿದೆ...
ಗೂಗಲ್
ಗೂಗಲ್

ಲಂಡನ್: ಇತ್ತೀಚೆಗೆ ಕಂಪನಿಯಲ್ಲಿ ಭಾರಿ ಬದಲಾವಣೆ ತಂದು ಸುದ್ದಿ ಮಾಡಿದ್ದ ಗೂಗಲ್, ಇದೀಗ ತನ್ನ ಲೋಗೋ ಕೂಡ ಬದಲಾಯಿಸಿಕೊಳ್ಳಲಿದೆ.

ಹೊಸ ಗೂಗಲ್ ಚಿಹ್ನೆ ಇಂಗ್ಲಿಷ್ ನ ಸ್ಯಾನ್ ಸೆರಿಫ್ ಶೈಲಿಯ ಅಕ್ಷರಗಳಲ್ಲಿ ಇರಲಿದ್ದು, ಇನ್ನಷ್ಟು ಅಧುನಿಕವಾಗಿ ಕಾಣಿಸಿಕೊಳ್ಳಲಿದೆ. ಅಕ್ಷರಗಳಿಗೆ ಈ ಮೊದಲು ಬಳಸಿದ್ದ ಬಣ್ಣವನ್ನು ಇನ್ನಷ್ಟು ಲಘುವಾಗಿಸಲಿರುವ ಗೂಗಲ್ ತನ್ನ ಹೊಸ ಮಾತೃಸಂಸ್ಥೆ ಆಲ್ಫಬೆಟ್ ನ ಶೈಲಿ ಅನುಸರಿಸಲಿದೆ.

1999ರ ನಂತರದ ಮಾಡಿದ ಅತಿ ದೊಡ್ಡ ಬದಲಾವಣೆ ಇದಾಗಿದೆ. ಇದಷ್ಟೇ ಅಲ್ಲದೆ ಬ್ರೌಸರ್ ಗಳಲ್ಲಿದ್ದ ಸಣ್ಣಕ್ಷರದ ಜಿ ಇನ್ನು ಮುಂದೆ ಕ್ಯಾಪಿಟಲ್ ಲೆಟರ್ ನಲ್ಲಿ ಕಾಣಿಸಿಕೊಳ್ಳಲಿದೆ.

ಅದಕ್ಕೆ ಗೂಗಲ್ ಲೋಗೋದ ಎಲ್ಲ ನಾಲ್ಕು ಬಣ್ಣಗಳು ಬಳಿಯಲಾಗಿರುತ್ತದೆ. ತಂತ್ರಜ್ಞಾನ ಜಗತ್ತು ಬದಲಾಗಿದೆ. ಗೂಗಲ್ ಕೂಡ ಭಾರಿ ವಿಸ್ತಾರಗೊಂಡಿದೆ. ಹಾಗಾಗಿ ಲೋಗೋ ಬದಲಾಯಿಸಲು ಇದು ಸೂಕ್ತ ಸಮಯ ಎಂದು ಕಂಪನಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com