ರೈಲು ನಿಲ್ದಾಣದಲ್ಲಿ ಉಚಿತ ವೈಫೈಗೆ ಗೂಗಲ್ ನೇತೃತ್ವ?

ಅಮೆರಿಕದಲ್ಲಿ ವೇಗದ ಇಂಟರ್ನೆಟ್ ಮತ್ತು ದೂರದರ್ಶನ ಸೇವೆ ನೀಡುತ್ತಿರುವ ಗೂಗಲ್ ಫೈಬರ್ ಈಗ ದೇಶಾದ್ಯಂತ ಪ್ರಮುಖ ನಗರಗಳಲ್ಲಿಯೂ ತನ್ನ ಸೇವೆ...
ಗೂಗಲ್
ಗೂಗಲ್
Updated on
ಹೈದರಾಬಾದ್: ಅಮೆರಿಕದಲ್ಲಿ ವೇಗದ ಇಂಟರ್ನೆಟ್ ಮತ್ತು ದೂರದರ್ಶನ ಸೇವೆ ನೀಡುತ್ತಿರುವ ಗೂಗಲ್ ಫೈಬರ್ ಈಗ ದೇಶಾದ್ಯಂತ ಪ್ರಮುಖ ನಗರಗಳಲ್ಲಿಯೂ ತನ್ನ ಸೇವೆ ವಿಸ್ತರಿಸಲು ಮುಂದಾಗಿದೆ. 
ಹೈದರಾಬಾದ್‍ನಲ್ಲಿ ಇಂಟರ್ನೆಟ್ ಸೇವೆ ಒದಗಿಸುವ ಸಂಬಂಧ ಈಗಾಗಲೇ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ ರಾಮರಾವ್ ಮತ್ತು ಗೂಗಲ್ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು 'ಟೆಲಿಕಾಮ್ ಟಾಕ್' ವರದಿ ಮಾಡಿದೆ. ಗೂಗಲ್ ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ವೈಫೈ ಅಳವಡಿಸುವ ಮೂಲಕ ಗ್ರಾಹಕರಿಗೆ ಅಪರಿಮಿತ ಅಂತರ್ಜಾಲ ಸೌಲಭ್ಯ ನೀಡಲು ಉದ್ದೇಶಿಸಿದೆ.
ಭಾರತೀಯ ರೈಲ್ವೆ ಇಲಾಖೆಯು ಗೂಗಲ್ ಸಹಯೋಗದಲ್ಲಿ ಈಗಾಗಲೇ 'ಪ್ರೊಜೆಕ್ಟ್ ನಿಲಗಿರಿ' ಎಂಬ ಹೆಸರಲ್ಲಿ ಪ್ರಾಯೋಗಿಕ ಯೋಜನೆಯೊಂದನ್ನು ಕೈಗೊಂಡಿದೆ. ಪ್ರಾಯೋಗಿಕ ಯೋಜನೆಯ ಮೊದಲ ಹಂತದಲ್ಲಿ ದೇಶದ ಪ್ರಮುಖ 400 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಹಾಟ್‍ಸ್ಪಾಟ್ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿರುವ ಗೂಗಲ್, ನಾಲ್ಕು ತಿಂಗಳ ಕಾಲ ಪ್ರಯಾಣಿಕರಿಗೆ ಉಚಿತ ಇಂಟರ್‍ನೆಟ್ ಒದಗಿಸಲಿದೆ. ಒಟಿಪಿ (ಒನ್ ಟೈಮ್ ವೇರಿಫಿಕೇಷನ್ ಕೋಡ್) ಮೂಲಕ ಪ್ರಯಾಣಿಕರಿಗೆ ಈ ಸೇವೆ ಉಚಿತವಾಗಿ ದೊರೆಯಲಿದೆ. 
ಪ್ರಯಾಣಿಕರಿಗೆ 30 ನಿಮಿಷಗಳ ಕಾಲ ಅತ್ಯಧಿಕ ವೇಗದ ಇಂಟರ್ನೆಟ್ ಲಭ್ಯವಾಗಲಿದ್ದು, ನಂತರ ಅದರ ವೇಗ ಕಡಿಮೆಯಾಗುತ್ತದೆ. ಇದು ಸಂಪೂರ್ಣ ಉಚಿತ ಎನ್ನಲಾಗಿದೆ. ಪ್ರಸ್ತುತ ರೈಲ್ವೆ ಇಲಾಖೆ ಆಯ್ದ ಕೆಲ ಮಾರ್ಗಗಳಲ್ಲಿ, ಕೆಲ ರೈಲುಗಳಲ್ಲಿ ಮಾತ್ರ ಉಚಿತ ಇಂಟರ್ನೆಟ್ ಸೌಲಭ್ಯ ನೀಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com