ಜೇನು ಕಚ್ಚಿದ ನೋವು ಶೋಧಕ್ಕೆ ಇಗ್ ನೊಬೆಲ್ ಪ್ರಶಸ್ತಿ..!

ಇದು ನೊಬೆಲ್ ಅಲ್ಲ. ಇದಕ್ಕೂ ನೊಬೆಲ್ ಗೂ ಯಾವ ಸಂಬಂಧವೂ ಇಲ್ಲ. ನೊಬೆಲ್ ಪ್ರಶಸ್ತಿಯ ಅಣಕು ಮಾದರಿಯಲ್ಲಿ ಹೀಗೊಂದು ಪ್ರಶಸ್ತಿಯನ್ನು 24 ವರ್ಷಗಳಿಂದ ಕೊಡಲಾಗುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇದು ನೊಬೆಲ್ ಅಲ್ಲ. ಇದಕ್ಕೂ ನೊಬೆಲ್ ಗೂ ಯಾವ ಸಂಬಂಧವೂ ಇಲ್ಲ. ನೊಬೆಲ್ ಪ್ರಶಸ್ತಿಯ ಅಣಕು ಮಾದರಿಯಲ್ಲಿ ಹೀಗೊಂದು ಪ್ರಶಸ್ತಿಯನ್ನು 24 ವರ್ಷಗಳಿಂದ ಕೊಡಲಾಗುತ್ತಿದೆ. ಪ್ರಶಸ್ತಿ ಹೆಸರು ಇಗ್ ನೊಬೆಲ್! ಈ ಬಾರಿ ಪ್ರಶಸ್ತಿ ಗಳಿಸಿದ ಮೂವರ ಸಾಧನೆ ಏನು ಎಂದು ಕೇಳುವಿರಾ?

ನೂರಾರು ಬಾರಿ ಜೇನ್ನೊಣದಿಂದ ದೇಹದ ಸೂಕ್ಷ್ಮ ಭಾಗಗಳಿಗೆ ಕಚ್ಚಿಸಿಕೊಂಡದ್ದಕ್ಕೊಂದು ಪ್ರಶಸ್ತಿ. 600 ಮಕ್ಕಳಿಗೆ ತಂದೆಯಾಗಲು ಸಾಧ್ಯ ಎಂಬ ಅಧ್ಯಯನ ನಡೆಸಿದ ಗಣಿತ  ಶಾಸ್ತ್ರಜ್ಞನಿಗೊಂದು ಪ್ರಶಸ್ತಿ. ಮೊಟ್ಟೆಯನ್ನು ಬೇಯದಂತೆ ಮಾಡಿದ ರಸಾಯನಶಾಸ್ತ್ರಜ್ಞನಿಗೂ ಇಗ್ ನೊಬೆಲ್! ಗಿನ್ನೆಸ್ ದಾಖಲೆ ಹೋಲುವ ವಿಚಿತ್ರ ಸಾಧನೆಗಳಿಗೆ ಇದೆಂಥ ಇಗ್ ನೊಬೆಲ್  ಪ್ರಶಸ್ತಿ ಎಂದು ಅಚ್ಚರಿಪಡಬೇಡಿ. ಮೊದಮೊದಲು ವಿರೋಧಕ್ಕೊಳಗಾಗಿದ್ದ ಇಗ್ ನೊಬೆಲ್ ಈಗ ತನ್ನದೇ ಸ್ಥಾನ ಗಳಿಸಿಕೊಂಡಿದ್ದು, ಪ್ರತಿವರ್ಷದಂತೆ ಈ ವರ್ಷವೂ ಪ್ರೊಫೆಸರ್‍ಗಳು,  ಸಂಶೋಧಕರು, ವಿದ್ಯಾರ್ಥಿಗಳು, ಜಗತ್ತಿನ ಹಲವು ನೊಬೆಲ್ ವಿಜೇತ ವ್ಯಕ್ತಿಗಳು ಹಾರ್ವರ್ಡ್ ವಿವಿಯಲ್ಲಿ ನಡೆಯುವ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಜೇನ್ನೊಣದ ಕೊಂಡಿಗಳು ಯಾವ ಪರಿ ನೋವು ನೀಡುತ್ತವೆಂದು ಸಂಶೋಧಿಸಿದ ಕೀಟಶಾಸ್ತ್ರಜ್ಞ ಜಸ್ಟಿನ್ ಷಿಮಿಟ್, ಕಾರ್ನೆಲ್ ಮತ್ತು ಮೈಕೆಲ್ ಸ್ಮಿತ್ ಒಬ್ಬರ ಮೇಲೊಬ್ಬರು ಪ್ರಯೋಗ  ನಡೆಸಿಕೊಂಡು ನೀಡಿದ ವರದಿಗೆ ಗೌರವ ದಕ್ಕಿದೆ. 38 ದಿನ ದೇಹದ 25 ಭಾಗಕ್ಕೆ ಜೇನ್ನೊಣದಿಂದ ಕಚ್ಚಿಸಿಕೊಂಡು ಮೂಗಿನ ಹೊಳ್ಳೆ, ಮೇಲ್ದುಟಿ ಮತ್ತು ಶಿಶ್ನದ ತುದಿಭಾಗದಲ್ಲಿ ಜೇನು ಕೊಂಡಿ ಬಿಟ್ಟರೆ ಅತ್ಯಂತಯಾತನೆಯಾಗುತ್ತದೆಂದು ಕಂಡುಹಿಡಿದಿದೆ ಈ ತಂಡ. ದಶಕಕ್ಕಿಂತ ಹೆಚ್ಚು ಅವಧಿ ನಡೆಸಿದ ಅಧ್ಯಯನದಲ್ಲಿ ಹಲವು ಕೀಟಗಳಿಂದ ಕಚ್ಚಿಸಿಕೊಂಡಿರುವ ಸ್ಮಿತ್ ಪ್ರತಿ ನೋವಿಗೂ ಒಂದು ರೇಟಿಂಗ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com