ಚಂದ್ರಗ್ರಹಣದ ಜೊತೆಗೆ ಸೂಪರ್ ಮೂನ್ ಧಮಾಕಾ

ಆಕಾಶ ಲೋಕದಲ್ಲಿ ಹೊಸದೊಂದು ವರ್ಣಸಂಭ್ರಮಕ್ಕೆ ವೇದಿಕೆಸಜ್ಜಾಗುತ್ತಿದೆ. ಇದೇ ಭಾನುವಾರದಂದು(ಸೆ.27) ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದಂದು ಭವ್ಯವಾದ ಅಪರೂಪದ ಬಣ್ಣದ ಸೂಪರ್ ಮೂನ್ ನೋಡಲು ಸಿಗಲಿದೆ...
ಸೂಪರ್ ಮೂನ್ (ಸಂಗ್ರಹ ಚಿತ್ರ)
ಸೂಪರ್ ಮೂನ್ (ಸಂಗ್ರಹ ಚಿತ್ರ)

ನವದೆಹಲಿ: ಆಕಾಶ ಲೋಕದಲ್ಲಿ ಹೊಸದೊಂದು ವರ್ಣಸಂಭ್ರಮಕ್ಕೆ ವೇದಿಕೆಸಜ್ಜಾಗುತ್ತಿದೆ. ಇದೇ ಭಾನುವಾರದಂದು(ಸೆ.27) ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದಂದು ಭವ್ಯವಾದ ಅಪರೂಪದ ಬಣ್ಣದ ಸೂಪರ್ ಮೂನ್ ನೋಡಲು ಸಿಗಲಿದೆ.

ಸಂಪೂರ್ಣ ಚಂದ್ರಗ್ರಹಣ ಮತ್ತು ಸೂಪರ್ ಮೂನ್  ಒಟ್ಟೊಟ್ಟಿಗೆ ಸಂಭವಿಸುವುದು ತೀರಾ ಅಪರೂಪ. ಕಳೆದ 115 ವರ್ಷಗಳಲ್ಲಿ ಕೇವಲ ನಾಲ್ಕು ಬಾರಿ ಈ ವಿಸ್ಮಯ ಜರುಗಿದ್ದು, 33 ವರ್ಷಗಳ  ನಂತರ ಮತ್ತೊಮ್ಮೆ ಈ ದೃಶ್ಯವೈಭವ ಕಾಣಬಹುದಾಗಿದೆ. ಕಡುಕೆಂಪು ರಕ್ತವರ್ಣದಲ್ಲಿ ಕಾಣಿಸಿಕೊಳ್ಳಲಿರುವ ಈ ಚಂದ್ರನನ್ನು ನೋಡಲು ಭಾರತೀಯರಿಗೆ ಸಾಧ್ಯವಿಲ್ಲ. ಏಕೆಂದರೆ ಗ್ರಹಣ  ಸಂಭವಿಸುವ ಹೊತ್ತಿನಲ್ಲಿ ಭಾರತದಲ್ಲಿ ಹಗಲಿರುತ್ತದೆ. ಅಮೆರಿಕ ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳು ಇದನ್ನು ನೇರಾನೇರ ನೋಡಬಹುದು.

ಸೆ.27ರಂದು ಸಂಪೂರ್ಣ ಚಂದ್ರಗ್ರಹಣ
- ಅಂದೇ ಸೂಪರ್ ಬ್ಲಡ್ ಮೂನ್
- 115 ವರ್ಷಗಳಲ್ಲಿ ಇದು 5ನೇ ಬಾರಿ
- ಪ್ರಳಯದ ಮುನ್ಸೂಚನೆಯೆಂಬ ನಂಬಿಕೆ
- ಭಾರತೀಯರಿಗೆ ನೋಡುವ ಅವಕಾಶವಿಲ್ಲ
- ಇಂಟರ್‍ನೆಟ್ಟಲ್ಲಿ ನೇರಪ್ರಸಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com