2020 ರ ವೇಳೆಗೆ ಭಾರತದ ಇಂಟರ್ ಬಳಕೆದಾರರ ಸಂಖ್ಯೆ 730 ಮಿಲಿಯನ್!

ಗ್ರಾಮೀಣ ಭಾರತದಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, 2020 ರ ವೇಳೆಗೆ ವೆಬ್ ಬಳಕೆದಾರರ ಸಂಖ್ಯೆ 730 ಮಿಲಿಯನ್ ದಾಟುವ ಸಾಧ್ಯತೆ ಇದೆ
2020 ರ ವೇಳೆಗೆ ಭಾರತದ ಇಂಟರ್ ಬಳಕೆದಾರರ ಸಂಖ್ಯೆ 730 ಮಿಲಿಯನ್!
2020 ರ ವೇಳೆಗೆ ಭಾರತದ ಇಂಟರ್ ಬಳಕೆದಾರರ ಸಂಖ್ಯೆ 730 ಮಿಲಿಯನ್!

ನವದೆಹಲಿ: ಗ್ರಾಮೀಣ ಭಾರತದಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, 2020 ರ ವೇಳೆಗೆ ವೆಬ್ ಬಳಕೆದಾರರ ಸಂಖ್ಯೆ 730 ಮಿಲಿಯನ್ ದಾಟುವ ಸಾಧ್ಯತೆ ಇದೆ ಎಂದು ನಾಸ್ಕಾಮ್  ವರದಿ ಮೂಲಕ ತಿಳಿದುಬಂದಿದೆ.

2015 ರ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 350 ಮಿಲಿಯನ್ ನಷ್ಟಾಗಿದೆ. ಇಂಟರ್ ನೆಟ್ ಬಳಕೆದಾರರ ವಿಷಯದಲ್ಲಿ ಚೀನಾ ನಂತರದ ಸ್ಥಾನದಲ್ಲಿರುವ ಭಾರತ, ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆಯಾಗಿದ್ದು ಹೊಸ ಬಳಕೆದಾರರ ಪೈಕಿ ಶೇ.75 ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದು ನಾಸ್ಕಾಮ್ ವರದಿ ತಿಳಿಸಿದೆ.

ಶೇ.75 ರಷ್ಟಿರುವ ಹೊಸ ಬಳಕೆದಾರರು ಸ್ಥಳೀಯ ಭಾಷೆಯಲ್ಲಿ ಡೇಟಾ ಬಳಕೆ ಮಾಡಲಿದ್ದು, ಇಂಟರ್ ನೆಟ್ ಬಳಕೆದಾರರ ವಿಷಯದಲ್ಲಿ ಈಗಾಗಲೇ ಭಾರತ ಅಮೆರಿಕವನ್ನು ಹಿಂದಿಕ್ಕಿದ್ದು 2020 ರ ವೇಳೆಗೆ 730 ಮಿಲಿಯನ್ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಹೆಚ್ಚುತ್ತಿರುವ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಇ-ಕಾಮರ್ಸ್, ಆನ್ ಲೈನ್ ಶಾಪಿಂಗ್ ಬೆಳವಣಿಗೆಗೂ ಕಾರಣವಾಗಲಿದ್ದು 2015 ರಲ್ಲಿ 17 ಬಿಲಿಯನ್ ಡಾಲರ್ ನಷ್ಟು ಮೌಲ್ಯವಿದ್ದ ಇ-ಕಾಮರ್ಸ್ ಮಾರುಕಟ್ಟೆ  2020 ವೇಳೆಗೆ 34 ಬಿಲಿಯನ್ ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು 2020 ರ ವೇಳೆಗೆ ಶೇ.70 ರಷ್ಟು ಜನತೆ ಆನ್ ಲೈನ್ ಮೂಲಕ ಶಾಪಿಂಗ್ ಮಾಡಿದರೆ ಶೇ.50 ರಷ್ಟು ಜನತೆ ಆನ್ ಲೈನ್ ಮೂಲಕ ಪ್ರಯಾಣ ಟಿಕೆಟ್ ಗಳನ್ನು ಕಾಯ್ದಿರಿಸುತ್ತಾರೆ ಎಂದು ನಾಸ್ಕಾಮ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com