ಮಾರ್ಚ್ 9ರಂದು ಸಂಪೂರ್ಣ ಸೂರ್ಯಗ್ರಹಣ

ಮುಂಬರುವ ಮಾರ್ಚ್ 9 ರಂದು ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದ್ದು, ಆಗ್ನೇಯ ಏಷ್ಯಾ ಭಾಗದಲ್ಲಿ ಇದು ಗೋಚರವಾಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ...
ಸೂರ್ಯ ಗ್ರಹಣ (ಸಂಗ್ರಹ ಚಿತ್ರ)
ಸೂರ್ಯ ಗ್ರಹಣ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಮುಂಬರುವ ಮಾರ್ಚ್ 9 ರಂದು ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದ್ದು, ಆಗ್ನೇಯ ಏಷ್ಯಾ ಭಾಗದಲ್ಲಿ ಇದು ಗೋಚರವಾಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಆಗ್ನೇಯ ಏಷ್ಯಾ ಭಾಗದಲ್ಲಿ ಗೋಚರಿಸುವ ಈ ಸೂರ್ಯ ಗ್ರಹಣ ಬರೊಬ್ಬರಿ 1 ನಿಮಿಷಗಳ ಗೋಚರವಾಗಲಿದ್ದು, ಏಷ್ಯಾ ಭಾಗದ ಜನ ಈ ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು ಎಂದು  ನಾಸಾ ಹೇಳಿದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಪಥದಲ್ಲಿ ಪರಿಭ್ರಮಿಸುವುದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ. ಇನ್ನು ಹವಾಯಿ, ಗುವಾಂ ಮತ್ತು ಅಲಾಸ್ಕಾ ಸೇರಿದಂತೆ ಏಷ್ಯಾ  ಮತ್ತು ಪೆಸಿಫಿಕ್​ನ ಹಲವು ರಾಷ್ಟ್ರಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ.

ಆಗ್ನೇಯ ಏಷ್ಯಾದ ಸುಮಾರು 14,162 ಕಿ.ಮೀ ವ್ಯಾಪ್ತಿಯಲ್ಲಿ ಗ್ರಹಣ ಗೋಚರಿಸುತ್ತದೆಯಾದರೂ, 156 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ  ಸಂಪೂರ್ಣ ಸೌರ ಕರೋನದ ದರ್ಶನವಾಗಲಿದೆ. ಸೂರ್ಯ  ಮತ್ತು ಭೂಮಿಯ ನಡುವೆ ಚಲಿಸುವ ಚಂದ್ರ ಸೂರ್ಯನ ಕಿರಣಗಳು ತಡೆಯುತ್ತದೆ. ಆಗ ಸೂರ್ಯನ ಸೂಕ್ಷ್ಮ ಮೇಲ್ಮೈ ತುಂಬಾ ನಿಖರವಾಗಿ ಗೋಚರಿಸುತ್ತದೆ ಎಂದು ನಾಸಾದ ವಿಜ್ಞಾನಿ ಜಾಗ್ಲಿ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com