ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸುವ ವಿವರ ನೀಡುವ ಫೇಸ್ ಬುಕ್

ಕಾರ್ಪೊರೇಟ್ ಸಂಶೋಧನೆಗೆ ಮಾನವ ಅಂಕಿಅಂಶಗಳ ಸಂಗ್ರಹ ಮೇಲೆ ಕಾಳಜಿವಹಿಸಿರುವ ಸಾಮಾಜಿಕ ತಾಣ ಫೇಸ್ ಬುಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಕಾರ್ಪೊರೇಟ್ ಸಂಶೋಧನೆಗೆ ಮಾನವ ಅಂಕಿಅಂಶಗಳ ಸಂಗ್ರಹ ಮೇಲೆ ಕಾಳಜಿವಹಿಸಿರುವ ಸಾಮಾಜಿಕ ತಾಣ ಫೇಸ್ ಬುಕ್, ಸಂಶೋಧನೆ ಉದ್ದೇಶಗಳಿಗೆ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ವೆಬ್ ಸೈಟ್ ಉಪಯೋಗಿಸುತ್ತವೆ ಎಂಬುದನ್ನು ಪ್ರಕಟಿಸಿದೆ.

ಫೇಸ್ ಬುಕ್ ಸುಮಾರು 1.6 ಶತಕೋಟಿ ಬಳಕೆದಾರರ ದಾಖಲೆಗಳನ್ನು ಸಂಗ್ರಹಿಸಿದ್ದು, ಜನರ ವರ್ತನೆಗಳಾದ ಮತ ಚಲಾವಣೆ ಅಭ್ಯಾಸ, ಮನುಷ್ಯ ಸಂಬಂಧಗಳು ಮತ್ತು ಕೆಲ ವಿಷಯಗಳು ಉಂಟುಮಾಡುವ ಪರಿಣಾಮಗಳ ಬಗ್ಗೆ ಫೇಸ್ ಬುಕ್ ಮಾಹಿತಿ ಒದಗಿಸುತ್ತದೆ ಎಂದು wsj.com ವರದಿ ಮಾಡಿದೆ.

ಫೇಸ್ ಬುಕ್ 2014ರಲ್ಲಿ 7 ಲಕ್ಷ ಜನರು ಮಾನಸಿಕ ಅಧ್ಯಯನಕ್ಕೆ ಒಳಗಾಗಿದ್ದು, ಕಂಪೆನಿಯ ನೈತಿಕತೆ ಕುರಿತು ವಿವಾದ ಎದ್ದಿತ್ತು. ಮುಂದಿನ ದಿನಗಳಲ್ಲಿ ಕಂಪೆನಿ ಇನ್ನಷ್ಟು ಮಾಹಿತಿ ಬಿಡುಗಡೆ ಮಾಡಲಿದೆ ಎಂದು ಫೇಸ್ ಬುಕ್ ನ ಸಾರ್ವಜನಿಕ ಯೋಜನೆ ಸಂಶೋಧನೆ ವ್ಯವಸ್ಥಾಪಕ ಮೊಲ್ಲಿ ಜಾಕ್ ಮನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com