ನಾಸಾ ವಿಜ್ಞಾನಿಗಳೊಂದಿಗೆ ಮಾರ್ಕ್ ಜುಕರ್ ಬರ್ಗ್ ಜೂನ್ 1ರಂದು ನೇರ ಸಂವಾದ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ, ನಾಸಾದಲ್ಲಿ ವಿಮಾನದೊಳಗೆ ಜೀವಿಸಿ ಕೆಲಸ ಮಾಡುತ್ತಿರುವ ಮೂವರು ವಿಜ್ಞಾನಿಗಳೊಂದಿಗೆ...
ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್
ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ, ನಾಸಾದಲ್ಲಿ ವಿಮಾನದೊಳಗೆ ಜೀವಿಸಿ ಕೆಲಸ ಮಾಡುತ್ತಿರುವ ಮೂವರು ವಿಜ್ಞಾನಿಗಳೊಂದಿಗೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಜೂನ್ 1ರಂದು ನೇರ ಸಂವಾದ ನಡೆಸಲಿದ್ದಾರೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಅವರು ಮತ್ತೊಂದು ಮೈಲುಗಲ್ಲನ್ನು ಸಾಧಿಸಲು ಹೊರಟಿದ್ದಾರೆ.

ಭೂಮಿಯಿಂದ ಅಂತರಿಕ್ಷದವರೆಗಿನ ನೇರ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದು ನಾಸಾದ ಫೇಸ್ ಬುಕ್ ಪುಟದಲ್ಲಿ ತಿಳಿಸಲಾಗಿದೆ.

20 ನಿಮಿಷಗಳ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ನಾಸಾದ ಖಗೋಳ ವಿಜ್ಞಾನಿಗಳಾದ ಟಿಮ್ ಕೊಪ್ರಾ, ಜೆಫ್ ವಿಲಿಯಮ್ಸ್ ಮತ್ತು ಯುರೋಪಿಯನ್ ಅಂತರಿಕ್ಷ ಸಂಸ್ಥೆಯ ಟಿಮ್ ಪೀಕ್ ಇರುತ್ತಾರೆ. ನಾಸಾದ ಫೇಸ್ ಬುಕ್ ಪುಟದಲ್ಲಿ ಅದರ ಬಳಕೆದಾರರು ನೀಡಿದ ಪ್ರಶ್ನೆಗಳನ್ನು ಜುಕರ್ ಬರ್ಗ್ ಕೇಳಲಿದ್ದಾರೆ.

ಕೆಲವು ಪ್ರಶ್ನೆಗಳನ್ನು ಈಗಾಗಲೇ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅವುಗಳಲ್ಲಿ ಕೆಲವು ಪ್ರಶ್ನೆಗಳು ಈ ರೀತಿ ಇವೆ, ನಾಸಾದಲ್ಲಿ ಆಹಾರ ಕೊಳೆತು ಹೋಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಅಂತರಿಕ್ಷ ಕೇಂದ್ರ ಸ್ಥಗಿತಗೊಂಡಾಗ ಖಾಸಗಿ ಒಡೆತನಕ್ಕೆ ಬರುತ್ತದೆಯೇ ಎಂದು ಕೇಳಲಾಗಿದೆ.

ಉನ್ನತ ತಂತ್ರಜ್ಞಾನದ ಸೂಕ್ಷ್ಮ ಗುರುತ್ವ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಗೆ,ವಿಜ್ಞಾನ ಸಂಶೋಧನೆಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಸಾ ನೆರವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com