ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ’ಯೋಗ’ ಎಮೋಜಿ

ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ಯೋಗಾ ಮಾಡುತ್ತಿರುವ ವ್ಯಕ್ತಿ, ಹಿಜಾಬ್ ಧರಿಸಿರುವ ಮಹಿಳೆ ಹಾಗೂ ತಾಯಿ ಮಗುವಿಗೆ ಹಾಲುಣಿಸುತ್ತಿರುವ ಎಮೋಜಿಗಳು ಬರಲಿವೆ.
ಎಮೋಜಿ
ಎಮೋಜಿ
ಲಂಡನ್: ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ಯೋಗಾ ಮಾಡುತ್ತಿರುವ ವ್ಯಕ್ತಿ, ಹಿಜಾಬ್ ಧರಿಸಿರುವ ಮಹಿಳೆ ಹಾಗೂ ತಾಯಿ ಮಗುವಿಗೆ ಹಾಲುಣಿಸುತ್ತಿರುವ ಎಮೋಜಿಗಳು ಬರಲಿವೆ. 
ಎಮೋಜಿಗಳಿಗೆ ಜಾಗತಿಕ ಮಾನದಂಡವನ್ನು ನಿಗದಿಪಡಿಸುವ ಅಂತಾರಾಷ್ಟ್ರೀಯ ಒಕ್ಕೂಟ ಯುನಿಕೋಡ್ ಗೆ 51 ಹೊಸ ಎಮೋಜಿಗಳ ಪ್ರಸ್ತಾವನೆ ನೀಡಿದ್ದು, ಅನುಮೋದನೆ ನೀಡಿದ ಬಳಿಕ ಸ್ಮಾರ್ಟ್ ಫೋನ್ ಗಳಲ್ಲಿ ಶೀಘ್ರವೇ ಯೋಗಾ, ಹಿಜಾಬ್ ಎಮೋಜಿಗಳು ಬರಲಿವೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. 
ಇನ್ನು ವೃದ್ಧರ ಎಮೋಜಿಗಳ ಕೊರತೆ ಇದ್ದು, ವೃದ್ಧರ ಎಮೋಜಿಗಳನ್ನೂ ಸಹ 2017 ರ ವೇಳೆಗೆ ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಜರ್ಮನಿಯ 15 ವರ್ಷದ ಯುವತಿ ರಯೌಫ್ಅಲ್ಹುಮೆಧಿ ಎಂಬ ಯುವತಿ ಮಹಿಳೆ ಹಿಜಾಬ್ ಧರಿಸಿರುವ ಎಮೋಜಿಯನ್ನು ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಬೇಕೆಂಬ ಅಭಿಯಾನ ಕೈಗೊಂಡಿದ್ದರು ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಹಿಜಾಬ್ ಧರಿಸಿದ ಮಹಿಳೆ ಇರುವ ಎಮೋಜಿಯನ್ನು ಅಳಡಿಸುವ ಪ್ರಸ್ತಾವನೆ ನೀಡಲಾಗಿದೆ. ಕೆಲಸದಲ್ಲಿ ನಿರತರಾಗಿರುವ ಮಹಿಳೆಯರ ಎಮೋಜಿಯನ್ನು ಅಳವಡಿಸಲು ಗೂಗಲ್ ಸಹ ಕರೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com