ಮಧ್ಯರಾತ್ರಿ ನಂತರ 'ಆನ್ಲೈನ್ ಗೇಮಿಂಗ್' ನಿಷಿದ್ಧ; ಚೈನಾದಲ್ಲಿ ವ್ಯಸನಿಗಳಿಗೆ ಪರಿವರ್ತಾನಾ ಕೇಂದ್ರಗಳು

ಯುವಜನಾಂಗದಲ್ಲಿ ಅಂತರ್ಜಾಲ ಗೇಮಿಂಗ್ ವ್ಯಸನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೈನಾ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಮಧ್ಯರಾತ್ರಿಯ ನಂತರ 18 ವರ್ಷದ ಕೆಳಗಿನವರು ಆನ್ಲೈನ್ ಗೇಮ್ಸ್ ಗಳನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಯುವಜನಾಂಗದಲ್ಲಿ ಅಂತರ್ಜಾಲ ಗೇಮಿಂಗ್ ವ್ಯಸನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೈನಾ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಮಧ್ಯರಾತ್ರಿಯ ನಂತರ 18 ವರ್ಷದ ಕೆಳಗಿನವರು ಆನ್ಲೈನ್ ಗೇಮ್ಸ್ ಗಳನ್ನು ಆಡದಂತೆ ನಿಷೇಧಿಸಲು ಚಿಂತಿಸುತ್ತಿದೆ. 
ಈ ಬಗ್ಗೆ ಕಳವಳ ಆತಂಕಕಾರಿಯಾಗಿದ್ದು, ಗೇಮಿಂಗ್ ವ್ಯಸನಿಗಳಿಗೆ ಪರಿವರ್ತನಾ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ಕೂಡ ಸರ್ಕಾರ ನಡೆಸುತ್ತಿದೆ. 
ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಾಲ ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೈನಾ. ಆ ಸಂಖ್ಯೆ ಸದ್ಯಕ್ಕೆ 750 ದಶಲಕ್ಷ ದಾಟಿದೆ. ಇದರಲ್ಲಿ 10 ರಿಂದ 39 ವಯಸ್ಸಿನ ನಡುವೆ ಇರುವವರು 74% ಇದ್ದರೆ, 20% ಸಂಖ್ಯೆ 10 ರಿಂದ 19 ವರ್ಷದ ನಡುವಿನವರಾಗಿದ್ದಾರೆ. 
ಚೈನಾದ ಜನಸಂಖ್ಯೆ ಗಣನೀಯ ಸಮಯವನ್ನು ಅಂತರ್ಜಾಲದಲ್ಲಿ, ಅದರಲ್ಲೂ ಆನ್ಲೈನ್ ಗೇಮಿಂಗ್ ನಲ್ಲಿ ಕಳೆಯುತ್ತಿದೆ. ನಾಯಿಕೊಡೆಗಳ ರೀತಿ ಗೇಮ್ ಪಾರ್ಲರ್ ಗಳು ಹಬ್ಬಿದ್ದು ಚೈನಾ ಸರ್ಕಾರವನ್ನು ಆತಂಕಕ್ಕೆ ನೂಕಿದೆ. 
ಇದರ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸುವಂತೆ ಚೈನಾ ಸರ್ಕಾರ ಮನವಿ ಮಾಡಿದೆ. ಈ ನಿಷೇಧ ಜಾರಿಯಾದರೆ ಮಧ್ಯರಾತ್ರಿ 12 ಘಂಟೆಯಿಂದ ಬೆಳಗಿನ ಜಾವ 8 ಘಂಟೆಯವರೆಗೆ 18 ವರ್ಷದ ಕೆಳಗಿನ ಮಕ್ಕಳು ಆನ್ಲೈನ್ ಗೇಮಿಂಗ್ ನಲ್ಲಿ ಪಾಲ್ಗೊಳ್ಳುವಂತಿಲ್ಲ. 
ಹಾಗೆಯೇ ಅಪ್ರಾಪ್ತರು ಎಷ್ಟು ಸಮಯದ ಕಾಲದವರೆಗೆ ನಿರಂತರವಾಗಿ ಗೇಮಿಂಗ್ ನಲ್ಲಿ ಭಾಗಿಯಾಗಬಹದು ಎಂಬುದಕ್ಕೂ ನಿರ್ಬಂಧ ಹೇರಲಾಗುತ್ತದೆ. ಗೇಮಿಂಗ್ ನಲ್ಲಿ ತೊಡಗಿಕೊಳ್ಳುವುದಕ್ಕೂ ಮೊದಲು ಅಪ್ರಾಪ್ತರು ಗುರುತಿನ ಚೀಟಿ ನೀಡಬೇಕಾಗುತ್ತದೆ. 
ಇದರ ಬಗ್ಗೆ ಯುವಕರು ಚೈನಾದ ಸಾಮಾಜಿಕ ಜಾಲತಾಣ ವಿಯ್ಬೋನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಇದೆ ಮೊದಲೇನಲ್ಲ. ಯುವ ಆಟಗಾಗರು ಹೆಚ್ಚಿನ ಸಮಯ ಆನ್ಲೈನ್ ಗೇಮ್ ಗಳಲ್ಲಿ ಸಮಯ ಕಳೆದರೆ ಅವರಿಂದ ಅಂಕಗಳನ್ನು ಕಸಿದುಕೊಳ್ಳುವಂತೆ ಗೇಮ್ ಆಪರೇಟರ್ ಗಳಿಗೆ 2007 ರಲ್ಲಿ ಸೂಚಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com