ಭಾರತದ ಫೇಸ್ಬುಕ್ ಬಳಕೆದಾರರಲ್ಲಿ ನಾಲ್ವರಲ್ಲಿ ಒಬ್ಬರಷ್ಟೇ ಮಹಿಳೆ

ಜಾಗತಿಕವಾಗಿ ಸಾಮಾಜಿಕ ಜಾಲತಾಣವನ್ನು ಬಳಸುವವರಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿದರೆ, ಭಾರತದಲ್ಲಿ ಮಾತ್ರ ಫೇಸ್ಬುಕ್ ಮಹಿಳಾ ಬಳಕೆದಾರರ ಅನುಪಾತ ಕೇವಲ 24% ಎನ್ನುತ್ತದೆ ನೂತನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಜಾಗತಿಕವಾಗಿ ಸಾಮಾಜಿಕ ಜಾಲತಾಣವನ್ನು ಬಳಸುವವರಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿದರೆ, ಭಾರತದಲ್ಲಿ ಮಾತ್ರ ಫೇಸ್ಬುಕ್ ಮಹಿಳಾ ಬಳಕೆದಾರರ ಅನುಪಾತ ಕೇವಲ 24% ಎನ್ನುತ್ತದೆ ನೂತನ ವರದಿಯೊಂದು. 
"ಏಶಿಯಾ ಫೆಸಿಪಿಕ್ ಪ್ರಾಂತ್ಯದಲ್ಲಿ ಮಹಿಳಾ ಫೇಸ್ಬುಕ್ ಬಳಕೆದಾರರ ಅನುಪಾತ 38% ಇದ್ದರೆ ಇದು ಭಾರತದಲ್ಲಿ ಕೇವಲ 24%" ಎಂದು ಬ್ರಿಟನ್ ಮೂಲದ ಸಂಸ್ಥೆ 'ವಿ ಆರ್ ಸೋಶಿಯಲ್' ತಿಳಿಸಿದೆ. 
"ಬಾಂಗ್ಲಾದಲ್ಲಿ ಈ ಅನುಪಾತ 23% ಮತ್ತು ಪಾಕಿಸಾನದಲ್ಲಿ ಇದು ಇನ್ನು ಕಡಿಮೆಯಿದ್ದು 22% ಇದೆ" ಎಂದು ವರದಿ ಹೇಳಿದೆ. 
ನ್ಯೂಜಿಲ್ಯಾಂಡ್ ನಲ್ಲಿ ಮಹಿಳಾ ಫೇಸ್ಬುಕ್ ಬಳಕೆದಾರರ ಅನುಪಾತ ಶೇಕಡಾ 59 ಇದ್ದು, ಆ ಭಾಗದ ಇತರ ದೇಶಗಳಾದ ಆಸ್ಟ್ರೇಲಿಯಾ, ಮಂಗೋಲಿಯಾ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಕೂಡ ಮಹಿಳೆಯರು ಪುರುಷರನ್ನು ಹಿಂದಿಕ್ಕಿದ್ದಾರೆ. 
"ದಕ್ಷಿಣ ಏಷಿಯಾದಲ್ಲಿ ಮಹಿಳೆಯರ ಅನುಪಾತ ಕಡಿಮೆ ಇರುವುದು ಪುರುಷರ ಮತ್ತು ಮಹಿಳೆಯ ನಡುವೆ ಇರುವ ಅಸಮಾನತೆ ಕೂಡ ಕಾರಣ ಇರಬಹುದು" ಎಂದು ವರದಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com