ಗೂಗಲ್ ನಿಂದ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನ

ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಗೂಗಲ್ ಸಂಸ್ಥೆ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿದೆ.
ಗೂಗಲ್ ನಿಂದ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನ
ನವದೆಹಲಿ: ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಗೂಗಲ್ ಸಂಸ್ಥೆ ಭಾರತದ 4 ಎನ್ ಜಿಒ ಗಳಿಗೆ 8.4 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿದೆ. 
ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ನೆರವು ನೀಡುವುದಕ್ಕೆ ಗೂಗಲ್ ಸಂಸ್ಥೆ ಜಾಗತಿಕವಾಗಿ 50 ಮಿಲಿಯನ್ ಡಾಲರ್ ನ್ನು ಅನುದಾನವಾಗಿ ನೀಡುತ್ತಿದ್ದು, 4 ಎನ್ ಜಿಒ ಗಳಿಗೆ ನೀಡಲಾಗಿರುವ 8.4 ಮಿಲಿಯನ್ ಡಾಲರ್ ಇದರ ಭಾಗವೇ ಆಗಿದೆ. ಲರ್ನಿಂಗ್ ಈಕ್ವಾಲಿಟಿ, ಮಿಲಿಯನ್ ಸ್ಪಾರ್ಕ್ಸ್ ಫೌಂಡೇಷನ್, ಪ್ರಥಮ್ ಬುಕ್ಸ್ ಸ್ಟೋರಿ ವೀವರ್, ಪ್ರಥಮ್ ಎಜುಕೇಷನ್ ಫೌಂಡೇಶನ್ ಗೂಗಲ್ ನಿಂದ ಅನುದಾನ ಪಡೆದಿರುವ ಸಂಸ್ಥೆಗಳಾಗಿವೆ. 
ಅತ್ಯಂತ ಭರವಸೆಯ ಲಾಭರಹಿತ ಎನ್ ಜಿಒ ಗಳನ್ನು ಗುರುತಿಸಿ ಅವುಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ನೆರವು ನೀಡುವುದು ಗೂಗಲ್ ನ ಉದ್ದೇಶವಾಗಿದೆ ಎಂದು ಗೂಗಲ್ ನ ದಕ್ಷಿಣ ಏಷ್ಯಾ ಹಾಗೂ ಭಾರತದ ಉಪಾಧ್ಯಕ್ಷ ರಾಜನ್ ಆನಂದನ್ ಹೇಳಿದ್ದಾರೆ. 
2016 ರ ಶೈಕ್ಷಣಿಕ ವರದಿಯ ಪ್ರಕಾರ, ಶಿಕ್ಷಕರ ಪ್ರೋತ್ಸಾಹ ಹಾಗೂ ತರಬೇತಿಯ ನಡುವೆ ಅಂತರ ಹೆಚ್ಚಿರುವುದರ ಪರಿಣಾಮವಾಗಿ ಕಲಿಕಾ ಫಲಿತಾಂಶ ಕುಸಿಯುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಂತರವನ್ನು ನಿವಾರಿಸಲು, ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಎನ್ ಜಿಒ ಗಳಿಗೆ ನೆರವು ನೀಡಲಾಗುತ್ತಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com