ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಂದು ಭೂಮಿ ಸಮೀಪ ಹಾದು ಹೋಗಲಿದೆ 650 ಮೀಟರ್ ಗಾತ್ರದ ಕ್ಷುದ್ರ ಗ್ರಹ!

ಭೂಮಿಯ ಸಮೀಪದಲ್ಲೇ ಬುಧವಾರ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
Published on

ವಾಷಿಂಗ್ಟನ್: ಭೂಮಿಯ ಸಮೀಪದಲ್ಲೇ ಬುಧವಾರ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಸುಮಾರು 650 ಮೀಟರ್ ಗಾತ್ರದ ಈ ದೊಡ್ಡ ಕ್ಷುದ್ರಗ್ರಹ ಭೂಮಿ ಸಮೀಪ ಹಾದುಹೋಗಲಿದ್ದು, ಇದರಿಂದ ಭೂಮಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.  2014ರಲ್ಲಿ ಮೊದಲಿಗೆ ವಿಜ್ಞಾನಿಗಳ ಕಣ್ಣಿಗೆ  ಕಾಣಿಸಿಕೊಂಡಿದ್ದ ಈ ಕ್ಷುದ್ರಗ್ರಹ ಇದೀಗ ಭೂಮಿ ಸಪೀಪವೇ ಹಾದು ಹೋಗುತ್ತಿದೆ. ಇದಕ್ಕೆ ವಿಜ್ಞಾನಿಗಳು 2014 JO25 ಎಂದು ಹೆಸರಿಟ್ಟಿದ್ದು, ಸುಮಾರು 18 ಲಕ್ಷ ಕಿ.ಮೀ ದೂರದ ಸುರಕ್ಷಿತ ಅಂತರದಲ್ಲಿ ಭೂಮಿಯನ್ನು ಹಾದು ಹೋಗಲಿದೆ  ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಆದರೆ ಈ ಕ್ಷುದ್ರ ಗ್ರಹ ಎಷ್ಟು ಸಮೀಪ ಹಾದುಹೋಗಲಿದೆ ಎಂದರೆ ಮುಂದಿನ 480 ವರ್ಷಗಳ ಕಾಲ ಇಷ್ಟು ಸಮೀಪದಲ್ಲಿ ಯಾವುದೇ ಕ್ಷುದ್ರ ಗ್ರಹ ಹಾದುಹೋಗುವುದಿಲ್ಲ. ಇದಲ್ಲದೇ ಮುಂದಿನ 10 ವರ್ಷ ಇಷ್ಟು ದೊಡ್ಡ ಪ್ರಮಾಣದ  ಯಾವುದೇ ಕ್ಷುದ್ರ ಗ್ರಹವೂ ಭೂಮಿಗೆ ಸಮೀಪಕ್ಕೆ ಬರುತ್ತಿಲ್ಲ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕ್ಷುದ್ರ ಗ್ರಹವು ಸುಮಾರು 2 ಕಿಮೀಗಿಂತ ಹೆಚ್ಚು ಅಗಲವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿಯ ಬಳಿಕ ಈ ಕ್ಷುದ್ರಗ್ರಹ ಜುಪಿಟರ್ ನತ್ತ ತೆರಳಲಿದ್ದು, ಅಲ್ಲಿಂದ ಮತ್ತೆ ನಮ್ಮ ಸೌರವ್ಯೂಹದ ಕೇಂದ್ರದತ್ತ ಪಣಯ ಬೆಳೆಸಲಿದೆ. ಇದರ ಬಳಿಕ ಅಂದರೆ 2027ರವರೆಗೂ ಭೂಮಿಯ ಬಳಿ ಯಾವುದೇ ಕ್ಷುದ್ರಗ್ರಹ  ಬರುವುದಿಲ್ಲವಾದರೂ, 2027ರಲ್ಲಿ 800 ಮೀ ಗಾತ್ರದ ಕ್ಷುದ್ರಗ್ರಹ 199-AN10 ಭೂಮಿಗೆ 3,80,000 ಕಿ,ಮೀ ದೂರದಲ್ಲಿ ಹಾದುಹೋಗಲಿದೆ.

2014 JO25 ಹೆಸರಿನ ಕ್ಷುದ್ರ ಗ್ರಹ ಮಾದರಿಯಲ್ಲೇ 2003 BD44 ಮತ್ತು 1999 CU3 ಎಂಬ ಇನ್ನೆರಡು ಕ್ಷುದ್ರ ಗ್ರಹಗಳೂ ಭೂಮಿಯ ಸಂಮೀಪದಲ್ಲಿ ಸದ್ಯದಲ್ಲೇ ಹಾದು ಹೋಗಲಿವೆ. ಆದರೆ ಇದ್ಯಾವುದೂ 2014 JO25ನಷ್ಟು   ದೊಡ್ಡ ಗಾತ್ರದಲ್ಲಿ ಇಲ್ಲ ಎಂದು ನಾಸಾದ ಜೆಟ್ ಪ್ರೊಪಲ್ಷನ್ ವಿಜ್ಞಾನಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com