ಸ್ಮಾರ್ಟ್ ಫೋನ್ ಬಳಸಿ ಫೇಕ್ ಉತ್ಪನ್ನ ಗುರುತಿಸುವ ತಂತ್ರಜ್ಞಾನ ಕಂಡುಹಿಡಿದ ಭಾರತೀಯ ಸಂಶೋಧಕರು

ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿ ಫೇಕ್ ಉತ್ಪನ್ನಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಭಾರತೀಯ ಸಂಶೋಧಕರು ಕಂಡುಹಿಡಿದಿದ್ದಾರೆ.
ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್
ನ್ಯೂಯಾರ್ಕ್: ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿ ಫೇಕ್ ಉತ್ಪನ್ನಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಭಾರತೀಯ ಸಂಶೋಧಕರು ಕಂಡುಹಿಡಿದಿದ್ದಾರೆ. 
ಕೃತಕ ಬುದ್ಧಿಮತ್ತೆಯ ಕ್ರಮಾವಳಿ (algorithms) ಸಹಾಯದಿಂದ ಸ್ಮಾರ್ಟ್ ಫೋನ್ ಆಪ್ ನಕಲಿ ಉತ್ಪನ್ನಗಳನ್ನು ಕಂಡುಹಿಡಿಯುವ ತಂತ್ರಜ್ಞಾನವನ್ನು ಭಾರತೀಯ ಸಂಶೋಧಕರು ಕಂಡುಹಿಡಿದಿದ್ದು, ಶೇ.98 ರಷ್ಟು ನಿಖರ ಫಲಿತಾಂಶ ನೀಡಲಿದೆ ಎಂದು ಹೇಳಿದ್ದಾರೆ. 
ಫ್ಯಾಬ್ರಿಕ್ಸ್, ಲೆದರ್, ಮಾತ್ರೆಗಳು, ಗೊಂಬೆಗಳು, ಶೂ ಸೇರಿದಂತೆ ಹಲವು ಉತ್ಪನ್ನಗಳ ನಕಲನ್ನು ಈ ಆಪ್ ಗುರುತು ಹಿಡಿಯುವ ಸಾಮರ್ಥ್ಯ ಹೊಂದಿದ್ದು, ಶೇ.98 ರಷ್ಟು ನಿಖರ ಫಲಿತಾಂಶ ನೀಡಲಿದೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಲಕ್ಷ್ಮಿನಾರಾಯಣ್ ಸುಬ್ರಹ್ಮಣಿಯನ್ ಹೇಳಿದ್ದಾರೆ. ಈ ವಿನೂತನ ವ್ಯವಸ್ಥೆಯನ್ನು ಕೆನಡಾದಲ್ಲಿ ನಡೆಯಲಿರುವ ನಾಲೆಡ್ಜ್ ಡಿಸ್ಕವರಿ ಹಾಗೂ ಡಾಟಾ ಮೈನಿಂಗ್ (ಕೆಡಿಡಿ) ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಆಶ್ಲೇಷ್ ಶರ್ಮ, ವಿದ್ಯುತ್ ಶ್ರೀನಿವಾಸನ್ ಹಾಗೂ ಸುಬ್ರಹ್ಮಣಿಯನ್ ಎಂಬುವವರು ಸ್ಥಾಪಿಸಿರುವ ಸ್ಟಾರ್ಟ್ ಅಪ್ ಈ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com