ನಮ್ಮ ಸೌರವ್ಯೂಹದ ಸಮೀಪದಲ್ಲೇ 7 "ಭೂಮಿ" ಪತ್ತೆ, 3 "ವಾಸಯೋಗ್ಯ": ನಾಸಾ

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ.
ಕಲಾವಿದನ ಕುಂಚದಲ್ಲಿ ಅರಳಿದ ನೂತನ ಭೂಮಿ (ಸಂಗ್ರಹ ಚಿತ್ರ)
ಕಲಾವಿದನ ಕುಂಚದಲ್ಲಿ ಅರಳಿದ ನೂತನ ಭೂಮಿ (ಸಂಗ್ರಹ ಚಿತ್ರ)

ಕೇಪ್ ಕಾರ್ನಿವಲ್: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು  ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ.

ನಾಸಾದ ಮೂಲಗಳ ಪ್ರಕಾರ ನಮ್ಮ ಸೌರವ್ಯೂಹದ ಅತ್ಯಂತ ಸಮೀಪದಲ್ಲೇ ಮತ್ತೊಂದು ಸೌರವ್ಯೂಹ ಪತ್ತೆಯಾಗಿದ್ದು, ಇಲ್ಲಿ ಭೂಮಿಯನ್ನು ಹೋಲುವ ಏಳು ಗ್ರಹಗಳು ಪತ್ತೆಯಾಗಿವೆಯಂತೆ. ಅಲ್ಲದೆ ಈ ಏಳೂ ಗ್ರಹಗಳು  ಜೀವಿಗಳು ವಾಸಿಸಲು ಯೋಗ್ಯವಾಗಿದ್ದು, ಈ ಪೈಕಿ 3 ಗ್ರಹಗಳಲ್ಲಿ ಬೃಹತ್ ನೀರಿನ ಮೂಲವಿದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಇನ್ನು ಈ ನೂತನ ಸೌರವ್ಯೂಹ ಭೂಮಿಯಿಂದ ಸುಮಾರು 40 ಜ್ಯೋತಿರ್ ವರ್ಷಗಳಷ್ಟು  ದೂರದಲ್ಲಿದ್ದು, ನಮ್ಮ ಸೌರವ್ಯೂಹದ ಮಾದರಿಯಲ್ಲಿಯೇ ಬೃಹತ್ ನಕ್ಷತ್ರದ ಸುತ್ತ ಈ ಗ್ರಹಗಳು ತಿರುಗುತ್ತಿವೆಯಂತೆ.

ಅಲ್ಲದೆ ಈ ಗ್ರಹಗಳ ಪೈಕಿ ಮೂರು ಗ್ರಹಗಳು TRAPPIST-1 ಎಂಬ ಬೃಹತ್ ನಕ್ಷತ್ರದತ್ತ ತನ್ನ ಕಕ್ಷೆಯಲ್ಲಿ ತಿರುಗುತ್ತಿದ್ದು, ಭೂಮಿಯಂತೆಯೇ ತಮ್ಮ ಸುತ್ತ ತಿರುಗುತ್ತಿವೆ. ಇದೇ ಕಾರಣಕ್ಕೆ ಈ ಗ್ರಹಗಳಲ್ಲೇ ಭಾರಿ ಪ್ರಮಾಣದ  ನೀರಿನ ಮೂಲವಿರುವ ಕುರಿತು ವಿಜ್ಞಾನಿಗಳು ಶಂಕಿಸಿದ್ದಾರೆ. ಇನ್ನು ಭೂಮಿಯನ್ನು ಹೋಲುವ 7 ಗ್ರಹಗಳನ್ನು ಹೊಂದಿರುವ ನಕ್ಷತ್ರಕ್ಕೆ ವಿಜ್ಞಾನಿಗಳು TRAPPIST-1 ಎಂದು ನಾಮಕರಣ ಮಾಡಿದ್ದು, ಈ ವರೆಗಿನ  ಸಂಶೋಧನೆಗಳಲ್ಲೇ ಭೂಮಿಯ ವಾತಾವರಣಕ್ಕೆ ತೀರಾ ಹತ್ತಿರವಾಗಿರುವ ಗ್ರಹ ಮತ್ತು ಸೌರಮಂಡಲ ಎಂದರೆ ಇದೇ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನಿ ಹಾಗೂ ಗಗನಯಾತ್ರಿ ಅಮೌರಿ ಟ್ರೈಯಾಡ್ ಅವರು, "ಈ ವರೆಗೂ ಭೂಮಿಗೆ ಪರ್ಯಾಯವಾಗಿ ಇರುವ ಗ್ರಹದ ಕುರಿತು ನಡೆದ  ಸಂಶೋಧನೆಗಳಲ್ಲೇ TRAPPIST-1 ಸಂಶೋಧನೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಸೌರಮಂಡಲದ ಸಮೀಪದಲ್ಲೇ ಇರುವ ಮತ್ತು 7 ಗ್ರಹಗಳು ಭೂಮಿಯನ್ನು ಹೋಲುವ ಬೃಹತ್ ಜಾಲವನ್ನು ಶೋಧಿಸಲಾಗಿದೆ.  ಮತ್ತೊಂದು ಪ್ರಮುಖ ವಿಚಾರವೆಂದರೆ ಈ 7 ಗ್ರಹಗಳ ಪೈಕಿ 3 ಗ್ರಹಗಳು ನಿಖರವಾಗಿ ಭೂಮಿಯನ್ನೇ ಹೋಲುತ್ತಿವೆ. ಅಲ್ಲದೆ ಅಲ್ಲಿ ಬೃಹತ್ ನೀರಿನ ಸೆಲೆ ಇರುವ ಕುರಿತು ಆಶಾಭಾವನೆ ವ್ಯಕ್ತವಾಗುತ್ತಿದೆ" ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ.

ನಾಸಾದ ಈ ಬೃಹತ್ ಸಂಶೋಧನೆ ಇದೀಗ ದಶಕಗಳ ಹಿಂದೆ ಆರಂಭವಾದ ಪರ್ಯಾಯ ಭೂಮಿ ಸಂಶೋಧನೆಗೆ ಮತ್ತೊಂದು ಮಹತ್ತರ ತಿರುವು ನೀಡಿದ್ದು, ಇದೀಗ ವಿಶ್ವದ ಎಲ್ಲ ವಿಜ್ಞಾನಿಗಳು ಈ ನೂತನ ಸೌರವ್ಯೂಹದತ್ತ  ಕುತೂಹಲದಿಂದ ನೋಡುತ್ತಿದ್ದಾರೆ.

Take a 360° tour of TRAPPIST-1d, one of the Earth-sized plants in the newly discovered system ~40 light-years away: https://t.co/5mMKpRPcoc pic.twitter.com/RRuPiOleOe

— NASA (@NASA) February 22, 2017

Need a recap of today’s TRAPPIST-1 announcement? Learn about these 7 Earth-sized planets orbiting a single star here https://t.co/R9xd5Dytlp pic.twitter.com/qWrE4R3flv

— NASA (@NASA) February 22, 2017

Take a trip 40 light-years away to one of the seven Earth-sized planets in the TRAPPIST-1 system.

Download poster: https://t.co/t8N2ZsMXWV pic.twitter.com/CMiNUSGppi

— NASA (@NASA) February 23, 2017

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com