2018ಕ್ಕೆ ಚಂದ್ರನ ಅಂಗಳಕ್ಕೆ ಪ್ರವಾಸಿಗರ ರವಾನಿಸಲಿರುವ ಸ್ಪೇಸ್ ಎಕ್ಸ್!

2018ರ ಕೊನೆಯ ಭಾಗದಲ್ಲಿ ಚಂದ್ರನ ಅಂಗಳಕ್ಕೆ ಮಾನವರನ್ನು ರವಾನಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಸ್ಪೇಸ್ ಎಕ್ಸ್ ಹೇಳಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: 2018ರ ಕೊನೆಯ ಭಾಗದಲ್ಲಿ ಚಂದ್ರನ ಅಂಗಳಕ್ಕೆ ಮಾನವರನ್ನು ರವಾನಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಸ್ಪೇಸ್ ಎಕ್ಸ್ ಹೇಳಿಕೊಂಡಿದೆ.

ಈ ಬಗ್ಗೆ ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ ಎಲನ್ ಮಸ್ಕ್ ಅವರು ಮಾಧ್ಯಮಗಳಿಗೆ ಸೋಮವಾರ ಮಾಹಿತಿ ನೀಡಿದ್ದು, 2018ರ ಅಂತಿಮ ಭಾಗದಲ್ಲಿ ಇಬ್ಬರು ನಾಗರೀಕರನ್ನು ಚಂದ್ರನ ಅಂಗಳಕ್ಕೆ ರವಾನಿಸುತ್ತಿರುವ ಮಾಹಿತಿ ನೀಡಲು  ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಚಂದ್ರ ಪ್ರವಾಸಕ್ಕಾಗಿ ಇಬ್ಬರು ನಾಗರಿಕರು ಸ್ಪೇಸ್ ಎಕ್ಸ್ ಸಂಸ್ಥೆಯನ್ನು ಸಂಪರ್ಕಿಸಿದ್ದು, ಈಗಾಗಲೇ ಇದಕ್ಕಾಗಿ ಅಪಾರ ಮೊತ್ತದ ಹಣ ಕೂಡ ಪಾವತಿ ಮಾಡಿದ್ದಾರೆ ಎಂದು ಅಲನ್ ಮಸ್ಕ್  ಮಾಹಿತಿ ನೀಡಿದ್ದಾರೆ.

ಅಮೆರಿಕದ ಇತಿಹಾಸದಲ್ಲೇ 45 ವರ್ಷಗಳ ಬಳಿಕ ಮಾನವರು ಬಾಹ್ಯಾಕಾಶ ಯಾನ ಮಾಡುತ್ತಿದ್ದು, ಈ ಹಿಂದೆಂದಿಗಿಂತಲೂ ವೇಗವಾಗಿ ಸೌರವ್ಯೂಹದಲ್ಲಿ ಯಾನ ಮಾಡುವಂತಾಗಿದೆ. ಪ್ರಸ್ತುತ ಕಾರಣಾಂತರಗಳಿಂದ ಚಂದ್ರಯಾನ  ಕೈಗೊಳ್ಳುವ ಪ್ರವಾಸಿಗರ ಹೆಸರು ಹೇಳಲು ಸಾಧ್ಯವಾಗತ್ತಿಲ್ಲ. ಆದರೆ ಅವರು ಯಾನಕ್ಕಾಗಿ ಹಣ ಪಾವತಿ ಮಾಡಿದ್ದಾರೆ. ಈ ವರ್ಷಾಂತ್ಯದ ಬಳಿಕ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರಗಳು ನಡೆಯಲಿದೆ  ಎಂದು ಹೇಳಿದ್ದಾರೆ.

ಭಾರತೀಯ ಬಾಹ್ಯಾತಕಾಶ ಸಂಸ್ಥೆಯ ಚಂದ್ರಯಾನ ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಚಂದ್ರನಲ್ಲಿಗೆ ಮಾನವ ಸಹಿತ ವ್ಯೋಮ ನೌಕೆ ರವಾನಿಸುವ ಯೋಜನೆಗಳು ಗರಿಗೆದರಿದ್ದು, ವಿವಿಧ ದೇಶಗಳು ಈ ಯೋಜನೆಗಾಗಿ ಸಿದ್ಧತೆ  ನಡೆಸಿಕೊಂಡಿವೆ. ಈ ಹಿಂದೆ 1972ರಲ್ಲಿ ಅಮೆರಿಕ ತನ್ನ ಅಪೋಲೋ ನೌಕೆ ಮೂಲಕ ಚಂದ್ರನ ಅಂಗಳಕ್ಕೆ ಬಾಹ್ಯಾಕಾಶ ಯಾನಿಗಳನ್ನು ಕಳುಹಿಸಿತ್ತು. ಈಗ `ಸ್ಪೇಸ್ ಎಕ್ಸ್’ ಮತ್ತೆ ಚಂದ್ರಯಾನಕ್ಕೆ ಚಾಲನೆ ನೀಡುವುದಾಗಿ  ಹೇಳುತ್ತಿದ್ದು, ಸ್ಪೇಸ್ ಎಕ್ಸ್ ಗೆ ಅಮೆರಿಕದ `ಫೆಡರಲ್ ಏವಿಯೇಷನ್ ಅಡ್‍ಮಿನಿಸ್ಟ್ರೇಷನ್’ ಹಸಿರು ನಿಶಾನೆ ತೋರಿಸಿದೆ. ಅಲ್ಲದೆ ಈ ಯೋಜನೆ ಅಮೆರಿಕದ ಬ್ಯಾಹಾಕಾಶ ಸಂಸ್ಥೆ ನಾಸಾ ತಾಂತ್ರಿಕ ನೆರವು ನೀಡುತ್ತಿದ್ದು, ಗೂಗಲ್ ಸಂಸ್ಥೆ  ಕೂಡ ಕೈಜೋಡಿಸಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com