ನೋಕಿಯಾದ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ನೋಕಿಯಾ-6 ಬಿಡುಗಡೆ!

ಮೊಬೈಲ್ ಮಾರುಕಟ್ಟೆಯ ಒಂದು ಕಾಲದ ಅನಭಿಶಕ್ತ ದೊರೆಯಂತಿದ್ದ ನೋಕಿಯಾ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವಸಾಧಿಸಲು ಯತ್ನಿಸುತ್ತಿದ್ದು, ತನ್ನ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ನೋಕಿಯಾ-6 ಅನ್ನು ಬಿಡುಗಡೆ ಮಾಡಿದೆ.
ನೋಕಿಯಾ-6
ನೋಕಿಯಾ-6

ನವದೆಹಲಿ: ಮೊಬೈಲ್ ಮಾರುಕಟ್ಟೆಯ ಒಂದು ಕಾಲದ ಅನಭಿಶಕ್ತ ದೊರೆಯಂತಿದ್ದ ನೋಕಿಯಾ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವಸಾಧಿಸಲು ಯತ್ನಿಸುತ್ತಿದ್ದು, ತನ್ನ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ನೋಕಿಯಾ-6 ಅನ್ನು ಬಿಡುಗಡೆ ಮಾಡಿದೆ.

ಈ ಹಿಂದೆಯೇ ನೋಕಿಯಾ ಸಂಸ್ಥೆ ಆ್ಯಂಡ್ರಾಯ್ಡ್ ಫೋನ್ ತಯಾರಿಕೆ ಕುರಿತು ಮಾಹಿತಿ ನೀಡಿತ್ತಾದರೂ, ಅದರ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ಅನ್ನು ಇದೀಗ ಬಿಡುಗಡೆ ಮಾಡಿದೆ. ನೋಕಿಯಾ ಬ್ರಾಂಡ್ ನ ಮಾಲೀಕತ್ವ ಹಕ್ಕು  ಹೊಂದಿರುವ ಹೆಚ್ ಎಂಡಿ ಗ್ಲೋಬಲ್ ಸಂಸ್ಥೆ ನೋಕಿಯಾ-6 ಹೆಸರಿನ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಇರುವ ಸ್ಮಾರ್ಟ್ ಫೋನ್ ಗಳಲ್ಲೇ ಇದು  ಅತ್ಯಾಧುನಿಕ ಫೋನ್ ಆಗಿರಲಿದ್ದು, ಆ್ಯಂಡ್ರಾಯ್ಡ್ ನ ನೂತನ ಆವೃತ್ತಿ 7.0 ನುಗಾಟ್‌ ಅನ್ನು ಹೊಂದಿದೆ.

ಅಂತೆಯೇ 5.5 ಇಂಚಿನ ಹೆಚ್ ಡಿ ಡಿಸ್‌'ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನಾಪ್‌'ಡ್ರಾಗನ್‌ 430 ಎಸ್‌'ಒಸಿ ಪ್ರೊಸೆಸರ್‌ ಹೊಂದಿದ್ದು, 4ಜಿಬಿ ರ್ಯಾಮ್‌ ಹೊಂದಿದೆ. ಅಂತೆಯೇ 64 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದ್ದು, 3000  ಎಮ್‌ಎಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.  ನೋಕಿಯಾ 6 ಡ್ಯುವಲ್ ಸಿಮ್‌ ಫೋನ್‌ ಆಗಿದ್ದು, 16 ಮೆಗಾಪಿಕ್ಸಲ್‌'ನ ಹಿಂಬದಿ ಕ್ಯಾಮೆರಾ, 8 ಮೆಗಾಪಿಕ್ಸಲ್‌ನ ಮುಂಭಾಗದ ಕ್ಯಾಮೆರಾ ಹೊಂದಿದೆ.

ಈ ಬಹು ನಿರೀಕ್ಷಿತ ಮೊಬೈಲ್ ಪ್ರಸ್ತುತ ಚೀನದಲ್ಲಿ ಮಾತ್ರ ಲಭ್ಯವಿರಲಿದ್ದು, ಇತರೆ ದೇಶದ ಮಾರುಕಟ್ಟೆಗಳಲ್ಲಿ ಫೋನ್ ಪರಿಚಯಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಫೋನ್ ನ ಬೆಲೆ  ಬೆಲೆ 16,750 ರು. ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com