ಭಾರತದಲ್ಲಿ ಸೈಬರ್ ಅಭದ್ರತೆ ಪ್ರಕರಣಗಳ ಏರಿಕೆ: ಅಧ್ಯಯನ ವರದಿ

ಭಾರತದಲ್ಲಿ ಸೈಬರ್ ಭದ್ರತೆ ವಿಷಯವಾಗಿ ಆತಂಕಗಳಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ದಾಳಿ ಪ್ರಕರಣಗಳು ಈ ಆತಂಕವನ್ನು ಹೆಚ್ಚುತ್ತಿದೆ.
ಭಾರತದಲ್ಲಿ ಸೈಬರ್ ಅಭದ್ರತೆ ಪ್ರಕರಣಗಳ ಏರಿಕೆ: ಅಧ್ಯಯನ ವರದಿ
ಭಾರತದಲ್ಲಿ ಸೈಬರ್ ಅಭದ್ರತೆ ಪ್ರಕರಣಗಳ ಏರಿಕೆ: ಅಧ್ಯಯನ ವರದಿ
ನವದೆಹಲಿ: ಭಾರತದಲ್ಲಿ ಸೈಬರ್ ಭದ್ರತೆ ವಿಷಯವಾಗಿ ಆತಂಕಗಳಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ದಾಳಿ ಪ್ರಕರಣಗಳು ಈ ಆತಂಕವನ್ನು ಹೆಚ್ಚುತ್ತಿದೆ. ಈ ಬಗ್ಗೆ ಅಸೋಚಾಮ್-ಪಿಡಬ್ಲ್ಯೂಸಿ ಸಂಸ್ಥೆ ಅಧ್ಯಯನ ನಡೆಸಿದ್ದು, ದೇಶದಲ್ಲಿ ಸೈಬರ್ ದಾಳಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ. 
2016 ರ ಅಕ್ಟೋಬರ್ ತಿಂಗಳ ವರೆಗೂ ಸೈಬರ್ ಅಭದ್ರತೆ ಕಾಡಿರುವ ಸುಮಾರು 39,730 ಪ್ರಕರಣಗಳು ಬೆಳಕಿಗೆ ಬಂದಿದೆ. 2014 ರಲ್ಲಿ 44,679 ಪ್ರಕರಣಗಳು ಹಾಗೂ 49,455 ಪ್ರಕರಣಗಳು 2015 ರಲ್ಲಿ ದಾಖಲಾಗಿದ್ದರೆ, 2016 ರಲ್ಲಿ ಕೇವಲ 10 ತಿಂಗಳುಗಳಲ್ಲೇ 39,730 ಪ್ರಕರಣಗಳು ಬೆಳಕಿಗೆ ಬಂದಿವೆ. 
ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಇಂತಹ ಸೈಬರ್ ಅಭದ್ರತೆ ಪ್ರಕರಣಗಳು ಎದುರಾಗುವುದು ಅಪರೂಪವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ನಗದು ರಹಿತ ವಹಿವಾಟು ಯೋಜನೆಯನ್ನು ಉಲ್ಲೇಖಿಸಿರುವ ಅಸೋಚಾಮ್ ವರದಿ, 500-1000 ರೂ ಮುಖಬೆಲೆಯ ನೋಟುಗಳ ಅಮಾನ್ಯದ ನಿರ್ಧಾರದ ನಂತರ ಭಾರತದಲ್ಲಿ ಡಿಜಿಟಲ್ ಪಾವತಿಗೆ ಮಹತ್ವ ಹೆಚ್ಚಿದೆ, ಡಿಜಿಟಲ್ ಪಾವತಿಗೆ ಬೇಡಿಕೆ ಹೆಚ್ಚಿದಂತೆ ಸೈಬರ್ ಭದ್ರತೆಯೂ ಪ್ರಮುಖವಾದ ವಿಷಯವಾಗಿರಲಿದೆ ಎಂದು ಅಧ್ಯಯನ ವರದಿ ಹೇಳಿದೆ. 
ಬ್ಯಾಂಕ್ ಖಾತೆಗಳ ಮೇಲೆ ಸೈಬರ್ ದಾಳಿ ನಡೆಯುತ್ತಿರುವ ಪ್ರಕರಣಗಳು ಕಳೆದ 5 ವರ್ಷಗಳಲ್ಲಿ ಹೆಚ್ಚಿವೆ. 2016 ರ ಅಕ್ಟೋಬರ್ ನಲ್ಲಿ ಎಟಿಎಂ ಕಾರ್ಡ್ ಗಳನ್ನು ಹ್ಯಾಕ್ ಮಾಡಿದ್ದರ ಪರಿಣಾಮವಾಗಿ 3.2 ಮಿಲಿಯನ್ ಡೆಬಿಟ್ ಕಾರ್ಡ್ ಮೇಲೆ ಪರಿಣಾಮ ಉಂಟಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com