ಇಸ್ರೋ ಮೈಲಿಗಲ್ಲು: ಬಹು ನಿರೀಕ್ಷಿತ ಜಿಎಸ್‏ಎಲ್‏ವಿ ಮಾರ್ಕ್ 3 ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗುತ್ತಿದ್ದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಸೋಮವಾರ ಸಂಜೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ
ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗುತ್ತಿದ್ದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಸೋಮವಾರ ಸಂಜೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ನೌಕೆಯನ್ನುಸ ಇಂದು ಸಂಜೆ 5.28ರ ವೇಳೆಯಲ್ಲಿ ಉಡಾವಣೆ ಮಾಡಲಾಗಿದ್ದು, ನೌಕೆಯು ಜಿಸ್ಯಾಟ್-19  ಉಪಗ್ರಹವನ್ನು ಹೊತ್ತು ಸಾಗಿದೆ.

ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕನಸಿನ ಯೋಜನೆಯಾಗಿರುವ ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ಈ ಬೃಹತ್ ನೌಕೆ ಅನುವು ಮಾಡಿಕೊಡಲಿದ್ದು, ಇದೇ ಕಾರಣಕ್ಕೆ ಇಂದಿನ ಉಡಾವಣೆ ಪ್ರಾಮುಖ್ಯತೆ  ಪಡೆದಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಈ ಬೃಹತ್ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಭಿವೃದ್ಧಿಪಡಿಸಿದ್ದು, ಇದು ಈ ವರೆಗೆ ಇಸ್ರೋ ಅಭಿವೃದ್ಧಿ ಪಡಿಸಿದ ರಾಕೆಟ್ ಗಳಲ್ಲೇ ಅತ್ಯಂತ ತೂಕದ  ಮತ್ತು ಬೃಹತ್ ರಾಕೆಟ್‌ ಎಂಬ ಖ್ಯಾತಿಗೆ ಒಳಗಾಗಿದೆ.

ನೌಕೆಯ ಯಶಸ್ವಿಯೊಂದಿಗೆ ಭಾರತ ಬೃಹತ್ ಉಡಾವಣಾ ನೌಕೆಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಸೇರಿದ್ದು, ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಬಳಿಕ ಭಾರತ ಕೂಡ ಪಟ್ಟಿಗೆ  ಸೇರ್ಪಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com