ಭಯೋತ್ಪಾದನೆ ನಿಗ್ರಹಕ್ಕೆ ಫೇಸ್ ಬುಕ್ ನಿಂದ ಕೃತಕ ಬುದ್ಧಿಮತ್ತೆ ಬಳಕೆ

ಭಯೋತ್ಪಾದನೆ ತಡೆಗೆ ಫೇಸ್ ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಲು ಪ್ರಾರಂಭಿಸಿದೆ.
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ: ಭಯೋತ್ಪಾದನೆ ತಡೆಗೆ ಫೇಸ್ ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಲು ಪ್ರಾರಂಭಿಸಿದ್ದು, ಭಯೋತ್ಪಾದನೆಯನ್ನು ತಡೆಯುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಫೇಸ್ ಬುಕ್ ಹೇಳಿದೆ. 
ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಭಯೋತ್ಪಾದನೆಗೆ ಸಂಬಂಧಿಸಿದ ಅಂಶಳನ್ನು ತೆಗೆದುಹಾಕುವ ರೀತಿಯ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಅಂಶಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವುದಕ್ಕೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಲು ಪ್ರಾರಂಭಿಸಿರುವುದು ಇತ್ತೀಚೆಗಷ್ಟೇ ಆದರೂ ಸಹ ಕೃತಕ ಬುದ್ಧಿಮತೆ ಬಳಕೆಯ ವಿಧಾನವನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ಸಂಸ್ಥೆ ಹೇಳಿದೆ. 
ಇಮೇಜ್-ಮ್ಯಾಚಿಂಗ್ ವಿಧಾನದ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳನ್ನು ತೆಗೆದು ಹಾಕಲಿದೆ, ಬಳಕೆದಾರರು ಭಯೋತ್ಪಾದಕರ ಫೋಟೊ ಅಥವಾ ವಿಡಿಯೋಗಳನ್ನು ಪ್ರಚಾರ ಮಾಡಲು ಯತ್ನಿಸಿದರೆ ಅದು ಪ್ರಚಲಿತದಲ್ಲಿರುವ ಭಯೋತ್ಪಾದಕರ ಚಿತ್ರಗಳಿಗೆ ಹೋಲಿಕೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ, ಒಮ್ಮೆ ಉಗ್ರವಾದವನ್ನು ಪ್ರಚೋದಿಸುವ ವಿಡಿಯೋ ಫೋಟೊವನ್ನು ತೆಗೆದುಹಾಕಿದರೆ ಮುಂದೆ ಅದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬಹುದು ಎಂದು ಫೇಸ್ ಬುಕ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com