ಫೇಸ್ ಬುಕ್ ಮೆಸೆಂಜರ್ ಗೆ ಶೀಘ್ರ "ಡಿಸ್ಲೈಕ್" ಬಟನ್ ಸೇರ್ಪಡೆ!

ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೆಸೆಂಜರ್ ಆ್ಯಪ್ ಗೆ ಮತ್ತೊಂದು ವಿಶೇಷ ಪ್ರತಿಕ್ರಿಯೆಯ ಆಯ್ಕೆ ನೀಡುತ್ತಿದ್ದು, ಮೆಸ್ಸೆಂಜರ್ ನಲ್ಲಿ ಶೀಘ್ರದಲ್ಲೇ ಡಿಸ್ ಲೈಕ್ ಬಟನ್ ಅಳವಡಿಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೆಸೆಂಜರ್ ಆ್ಯಪ್ ಗೆ ಮತ್ತೊಂದು ವಿಶೇಷ ಪ್ರತಿಕ್ರಿಯೆಯ ಆಯ್ಕೆ ನೀಡುತ್ತಿದ್ದು, ಮೆಸ್ಸೆಂಜರ್ ನಲ್ಲಿ ಶೀಘ್ರದಲ್ಲೇ ಡಿಸ್ ಲೈಕ್ ಬಟನ್ ಅಳವಡಿಸುವುದಾಗಿ ಹೇಳಿದೆ.

ಖಾಸಗಿ ತಂತ್ರಜ್ಞಾನ ವೆಬ್ ಸೈಟ್ ವೊಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಫೇಸ್  ಬುಕ್ ಪೋಸ್ಟ್ ಗಳಲ್ಲಿರುವಂತೆಯೇ ಫೇಸ್ ಬುಕ್ ಮೆಸ್ಸೆಂಜರ್ ನಲ್ಲೂ ಡಿಸ್ ಲೈಕ್ ಪ್ರತಿಕ್ರಿಯೆ ಅಳವಡಿಸುವ ಕುರಿತು ಫೇಸ್ ಬುಕ್ ಸಂಸ್ಥೆ  ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ವರದಿ ಮಾಡಿದೆ. ಮೆಸ್ಸೆಂಜರ್ ಥಮ್ಸ್ ಡೌನ್ ಪ್ರತಿಕ್ರಿಯೆಯನ್ನು ಡಿಸ್ ಲೈಕ್ ಪ್ರತಿಕ್ರಿಯೆಯಾಗಿ ಬಳಕೆ ಮಾಡಲು ಫೇಸ್ ಬುಕ್ ನಿರ್ಧರಿಸಿದ್ದು, ಈಗಾಗಲೇ ಈ ಬಗ್ಗೆ ತಾಂತ್ರಿಕ ಕಾರ್ಯಗಳು  ಚಾಲನೆಯಾಗಿದೆ ಎಂದು ಹೇಳಲಾಗುತ್ತಿದೆ.

"ಈಗಾಗಲೇ ತನ್ನ ಸಾಕಷ್ಟು ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರ ಮನಸೂರೆಗೊಂಡಿರುವ ಫೇಸ್ ಬುಕ್ ಮತ್ತಷ್ಟು ಬಳಕೆದಾರ ಸ್ನೇಹಿಯಾಗಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಎಮೋಜಿಗಳ ಮೂಲಕ ಸಾಕಷ್ಟು  ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಫೇಸ್ ಬುಕ್ ಅದೇ ಯಶಸ್ಸನ್ನು ಫೇಸ್ ಬುಕ್ ಮೆಸೆಂಜರ್ ನಲ್ಲೂ ಪಡೆಯಲು ಹವಣಿಸುತ್ತಿದೆ. ಇದೇ ಕಾರಣಕ್ಕೆ ಮೆಸೆಂಜರ್ ನಲ್ಲಿ ಡಿಸ್ ಲೈಕ್ ಆಯ್ಕೆ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಎಲ್ಲ  ಬಳಕೆದಾರರು ಮೆಸೆಂಜರ್ ನಲ್ಲಿ "ಡಿಸ್ ಲೈಕ್" ಅಥವಾ "ಥಮ್ಸ್ ಡೌನ್" ಆಯ್ಕೆ ಚಾಲ್ತಿಗೆ ಬರಲಿದೆ.

ಫೇಸ್ ಬುಕ್ ಖ್ಯಾತ ಪ್ರತಿಕ್ರಿಯೆ ಎಮೋಜಿಗಳು ಬಿಡುಗಡೆಯಾಗಿ ಕಳೆದ ಫೆಬ್ರವರಿಗೆ ಒಂದು ವರ್ಷ ಪೂರ್ಣಗೊಂಡಿತ್ತು. ಈ ವರೆಗೂ ಸುಮಾರು 300 ಬಿಲಿಯನ್ ಪ್ರತಿಕ್ರಿಯೆಗಳು ಫೇಸ್ ಬುಕ್ ಪೋಸ್ಟ್ ನಲ್ಲಿ ದಾಖಲಾಗಿದ್ದು, ಲವ್  ಪ್ರತಿಕ್ರಿಯೆಯ ಹಾರ್ಟ್ ಸಿಂಬಲ್ ಅತೀ ಹೆಚ್ಚು ಬಳಕೆಯಾಗಿತ್ತು. ಸುಮಾರು 1.79 ಬಿಲಿಯನ್ ಬಳಕೆದಾರರು ಲವ್ ಪ್ರತಿಕ್ರಿಯೆಯನ್ನು ಬಳಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com