
ನವದೆಹಲಿ: ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಮತ್ತಷ್ಟು ಬಳಕೆದಾರ ಸ್ನೇಹಿಯಾಗುತ್ತಿದ್ದು, ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಂಡು ಮೊದಲು ವೀಕ್ಷಿಸಬಹುದಾಗಿದೆ.
ಈಗಾಗಲೇ ಸಾಕಷ್ಟು ಬಳಕೆದಾರ ಸ್ನೇಹಿ ಆಪ್ಶನ್ ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಖ್ಯಾತ ಮೆಸೆಜಿಂಗ್ ಆ್ಯಪ್ ಮತ್ತೊಂದು ನೂತನ ಆಯ್ಕೆ ಮತ್ತು ಅಪ್ ಡೇಟ್ ನೊಂದಿಗೆ ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ. ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಗಳನ್ನು ಚಾಟ್ ಪಟ್ಟಿಯಲ್ಲಿ ಪಿನ್ ಮಾಡಬಹುದಾಗಿದೆ. ಹೀಗಿ ಪಿನ್ ಮಾಡಿದ ಚಾಟ್ ಮೊದಲ ಸ್ಥಾನದಲ್ಲಿ ಗೋಚರವಾಗಲಿದೆ.
ಈಗಾಗಲೇ ಇಂತಹ ಆಯ್ಕೆ ಫೇಸ್ ಬುಕ್ ನಲ್ಲಿದ್ದು, ನಮಗೆ ಇಷ್ಟವಾದ ಪೋಸ್ಟ್ ಗಳನ್ನು ನಾವು ಫೇಸ್ ಬುಕ್ ನಲ್ಲಿ ಪಿನ್ ಟು ಟಾಪ್ ಆಯ್ಕೆ ಮಾಡುವ ಮೂಲಕ ಮೊದಲಿಗೆ ಕಾಣುವಂತೆ ಮಾಡಬಹುದಾಗಿದೆ. ಸುದ್ದಿ ಸಂಸ್ಥೆಗಳು ಹಾಗೂ ಖ್ಯಾತನಾಮರು ತಮ್ಮ ಪ್ರಮುಖ ಪೋಸ್ಟ್ ಗಳನ್ನು ಪಿನ್ ಮಾಡುವ ಮೂಲಕ ಅದು ಹೆಚ್ಚು ಜನರ ತಲುಪುತಿತ್ತು. ಇದೀಗ ಇದೇ ಮಾದರಿಯನ್ನು ವಾಟ್ಸಪ್ ಕೂಡ ತನ್ನ ಚಾಟ್ ಆಯ್ಕೆಗೆ ಸೇರಿಸುತ್ತಿದ್ದು, ನೂತನ ವಾಟ್ಸಪ್ ಬೇಟಾ ವರ್ಷನ್ ನ .17.162 ಅಥವಾ 2.17.163ರಲ್ಲಿ ಲಭ್ಯವಾಗಲಿದೆ.
ಇದಲ್ಲದೇ ಚಾಟ್ ಅನ್ನು ಡಿಲೀಟ್ ಮಾಡುವ ಅಥವಾ ಮ್ಯೂಟ್ ಮಾಡುವ ಮತ್ತು ಆರ್ಕೈವ್ ಗೆ ಸೇರಿಸುವ ಆಯ್ಕೆ ಕೂಡ ಮುಂದುವರೆಯಲಿದೆ.
Advertisement