ಕಂಪ್ಯೂಟರ್ ಆಯ್ತು ಈಗ ಮೊಬೈಲ್ ಫೋನ್ ಗಳ ಮೇಲೆ "ಜ್ಯೂಡಿ" ಮಾಲ್ ವೇರ್ ದಾಳಿ!

ಜ್ಯೂಡಿ ಎಂಬ ಮಾಲ್ ವೇರ್ ವಿಶ್ವಾದ್ಯಂತ ಲಕ್ಷಾಂತರ ಸ್ಮಾರ್ಟ್ ಫೋನ್ ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್‌: ವಿಶ್ವಾದ್ಯಂತ ಲಕ್ಷಗಟ್ಟಲೆ ಕಂಪ್ಯೂಟರ್‌ ವ್ಯವಸ್ಥೆ ಮೇಲೆ ದಾಳಿ ಮಾಡುವ ಮೂಲಕ "ರಾನ್ಸಮ್‌ ವೇರ್‌' ಜನರ ನಿದ್ದೆಗೆಡಿಸಿತ್ತು. ಇದೀಗ ಅಂತಹುದೇ ಮತ್ತೊಂದು ಮಾಲ್ ವೇರ್ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಮೇಲೆ  ದಾಳಿ ಮಾಡಿದೆ ಎಂದು ಹೇಳಲಾಗುತ್ತಿದ್ದು, ಜ್ಯೂಡಿ ಎಂಬ ಮಾಲ್ ವೇರ್ ವಿಶ್ವಾದ್ಯಂತ ಲಕ್ಷಾಂತರ ಸ್ಮಾರ್ಟ್ ಫೋನ್ ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

ಆ್ಯಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ ಫೋನ್‌ಗಳ ಮೇಲೆ ಈ ಜ್ಯೂಡಿ ವೈರಸ್‌ ದಾಳಿ ಭೀತಿ ಆರಂಭವಾಗಿದ್ದು, ಮೂಲಗಳ ಪ್ರಕಾರ ಈಗಾಗಲೇ ವಿಶ್ವಾದ್ಯಂತ ಸುಮಾರು 3.6 ಕೋಟಿ ಸ್ಮಾರ್ಟ್‌ಫೋನ್‌ಗಳಿಗೆ ಈ  ವೈರಸ್‌ ಅಟ್ಯಾಕ್‌ ಆಗಿದೆ ಎಂದು ಹೇಳಲಾಗುತ್ತಿದೆ.

"ಜ್ಯೂಡಿ ಮಾಲ್‌ ವೇರ್‌' ಎಂಹ ಹೆಸರಿನ ಈ ವೈರಸ್‌ ಆ್ಯಂಡ್ರಾಯ್ಡ್ ನ ಅಧಿಕೃತ ಅಪ್ಲಿಕೇಶನ್‌ ನ ತಾಣ "ಗೂಗಲ್‌ ಪ್ಲೇ' ಸ್ಟೋರ್ ನ ಸುಮಾರು 40ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಮೇಲೆ ದಾಳಿ ಮಾಡಿದೆ. ಈ ಆ್ಯಪ್‌ ಗಳನ್ನು ನಾವು  ಡೌನ್‌ಲೋಡ್‌ ಮಾಡಿದ್ದೇ ಆದರೆ ನಮ್ಮ ಸ್ಮಾರ್ಟ್‌ ಫೋನ್‌ ಗಳು ಕೂಡ ವೈರಸ್‌ ಗೆ ತುತ್ತಾಗುತ್ತವೆ ಎಂದು ಹೇಳಲಾಗುತ್ತಿದೆ. ಈ ಜ್ಯೂಡಿ ಮಾಲ್‌ ವೇರ್‌ ಗಳು ಜಾಹೀರಾತುಗಳಿಗಾಗಿ ನಕಲಿ ಕ್ಲಿಕ್‌ ಗಳನ್ನು ಒತ್ತಿ ಬಿಡುತ್ತವೆ ಎಂದು  ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ವಿಶ್ವಾದ್ಯಂತ 85 ಲಕ್ಷದಿಂದ ಸುಮಾರು 3.6 ಕೋಟಿ ಆ್ಯಂಡ್ರಾಯ್ಡ್ ಮೊಬೈಲ್‌ ಗ‌ಳು ಜ್ಯೂಡಿ ಮಾಲ್‌ವೇರ್‌ ದಾಳಿಗೆ ತುತ್ತಾಗಿವೆ ಎಂದು ಹೇಳಲಾಗುತ್ತಿದ್ದು, ಕೊರಿಯಾದ ಕಿನಿವಿನಿ ಹೆಸರಿನ ಕಂಪೆನಿ (ಎನಿಸ್ಟುಡಿಯೋ ಕಾರ್ಪ್‌  ಹೆಸರಲ್ಲಿ ಆ್ಯಪ್‌ ಗಳನ್ನು ಹೊಂದಿದೆ) ಯೊಂದು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ ಗಳಲ್ಲೇ ಈ ಮಾಲ್‌ ವೇರ್‌ ಸಮಸ್ಯೆ ಕಾಣಿಸಿಕೊಂಡಿದೆ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com