ಅಕ್ಷರ ಸಂಖ್ಯೆಯನ್ನು ದ್ವಿಗುಣಗೊಳಿಸಿದ ಟ್ವಿಟ್ಟರ್, ವಿವರವಾದ ಸಂದೇಶಗಳಿಗೂ ಸಿಗಲಿದೆ ಅವಕಾಶ

ಸೆಲೆಬ್ರಿಟಿಗಳ ಅತ್ಯಂತ ಪ್ರಿಯವಾದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ದ್ವಿಗುಣಗೊಳಿಸಿದೆ. ಗ್ರಾಹಕರು ಸಂದೇಶ ರಚಿಸಬೇಕಾದಾಗ ಇದುವರೆಗಿದ್ದ 140ರ ಅಕ್ಷರ ಮಿತಿಯನ್ನು....
ಟ್ವಿಟ್ಟರ್
ಟ್ವಿಟ್ಟರ್
ಸ್ಯಾನ್ ಫ್ರಾನ್ಸಿಸ್ಕೋ: ಸೆಲೆಬ್ರಿಟಿಗಳ ಅತ್ಯಂತ ಪ್ರಿಯವಾದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ದ್ವಿಗುಣಗೊಳಿಸಿದೆ. ಗ್ರಾಹಕರು ಸಂದೇಶ ರಚಿಸಬೇಕಾದಾಗ ಇದುವರೆಗಿದ್ದ 140ರ ಅಕ್ಷರ ಮಿತಿಯನ್ನು 280ಕ್ಕೆ ವಿಸ್ತರಿಸಿದೆ. ಇದರಿಂದಾಗಿ  ಜಗತ್ತಿನಾದ್ಯಂತದ ಗ್ರಾಹಕರು ಟ್ವಿಟ್ಟರ್ ನಲ್ಲಿ ಇನ್ನೂ ವಿಸ್ತಾರದ ಸಂದೇಶ ಕಳಿಸಬಹುದಾಗಿದೆ.
ಇಂದಿನಿಂದಲೇ ಟ್ವಿಟ್ಟರ್ ನ ಈ ನೂತನ ಸೌಲಭ್ಯ ಎಲ್ಲೆಡೆ ಸಿಗಲಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಜಪಾನ್, ಚೀನಾ ಹಾಗೂ ಕೊರಿಯಾ ಭಾಷೆಗಳಿಗೆ ಈ ಸೇವೆ ಸಿಗುವುದಿಲ್ಲ. ಅವರುಗಳು ಈ ಹಿಂದಿನಂತೆ 140 ಪದಗಳ ಮಿತಿಯನ್ನೇ ಮುಂದುವರಿಯಬೇಕೆಂದು ಸಂಸ್ಥೆ ಸೂಚನೆಯಲ್ಲಿ ತಿಳಿಸಿದೆ.
ಟ್ವಿಟ್ಟರ್ ನಲ್ಲಿ ಅಕ್ಷರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸಂಸ್ಥೆ ಕಳೆದ ಸಪ್ಟೆಂಬರ್ ನಲ್ಲಿಯೇ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com