2018 ರಿಂದ ಗೂಗಲ್ ಕ್ರೋಮ್ ನಲ್ಲಿ ರೀಡೈರೆಕ್ಟ್ ಜಾಹೀರಾತುಗಳ ಹಾವಳಿ ಇರುವುದಿಲ್ಲ!

ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ.
ಗೂಗಲ್
ಗೂಗಲ್
ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ. 
ಕ್ರೋಮ್ ನ ಪೋಪ್ ಅಪ್ ಬ್ಲಾಕರ್ ಹಾಗೂ ಆಟೋ ಪ್ಲೇ ಪ್ರೊಟೆಕ್ಷನ್ ನಂತೆಯೇ, ಹೊಸ ಪ್ರೊಟೆಕ್ಷನ್ ಟೂಲ್ ಗಳನ್ನು ಕ್ರೋಮ್ ಜಾರಿಗೆ ತರಲು ಉದ್ದೇಶಿಸಿದ್ದು, ಬಳಕೆದಾರರಿಗೆ ಎಲ್ಲಾ ರೀತಿಯ ರಕ್ಷಣೆ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರಿಗೆ ಕಿರಿಕಿರಿಯನ್ನುಂಟುಮಾಡುವ ರೀಡೈರೆಕ್ಟ್ ಜಾಹೀರಾತುಗಳನ್ನು ತಡೆಗಟ್ಟಲು ಕ್ರೋಮ್ ಈ ಕ್ರಮ ಕೈಗೊಂಡಿದ್ದು, ಕೆಲವೊಮ್ಮೆ ಏಕಾಏಕಿಯಾಗಿ ಕಾರಣವೇ ಇಲ್ಲದೇ ಹೊಸ ಪೇಜ್ ಗೆ ಕೊಂಡೊಯ್ಯುತ್ತದೆ ಎಂದು ಗೂಗಲ್ ಗೆ ಫೀಡ್ ಬ್ಯಾಕ್ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲು ಗೂಗಲ್ ಕ್ರೋಮ್ ಮುಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com