ಮಂಗಳನಲ್ಲಿ ಸಿಕ್ಕಿದೆ ಭೂಮಿ ಮೇಲೆ ಜೀವಿಗಳ ಉಗಮದ ಸುಳಿವು

ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ವಿಜ್ಞಾನಿಗಳು ಕಳುಹಿಸಿರುವ 'ಮಾರ್ಸ್‌ ರಿಕಾನಿಸನ್ಸ್‌ ಆರ್ಬಿಟರ್‌'(ಎಂಆರ್ ಎ) .........
ಮಂಗಳ ಗ್ರಹ
ಮಂಗಳ ಗ್ರಹ
ವಾಷಿಂಗ್ಟನ್‌: ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ವಿಜ್ಞಾನಿಗಳು ಕಳುಹಿಸಿರುವ 'ಮಾರ್ಸ್‌ ರಿಕಾನಿಸನ್ಸ್‌ ಆರ್ಬಿಟರ್‌'(ಎಂಆರ್ ಎ) ನೌಕೆಯು ಭೂಮಿಯ ಮೇಲೆ ಜೀವಿಗಳ ಉಗಮ ಹೇಗೆ ನಡೆಯಿತು ಎನ್ನುವುದರ ಕುರಿತು ಸುಳಿವು ನೀಡಿದೆ.
ಮಂಗಳ ಗ್ರಹದ ದಕ್ಷಿಣ ಭಾಗದಲ್ಲಿರುವ ಪುರಾತನ ಸಮುದ್ರ ಈಗ ಬತ್ತಿ ಹೋಗಿದ್ದು ಅದರ ತಳದಲ್ಲಿ ಜಲೋಷ್ಣೀಯ ಪದಾರ್ಥಗಳ ಸಂಗ್ರಹವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಮಂಗಳ ಗ್ರಹದ ಗರ್ಭದಿಂದ ಜ್ವಾಲಾಮುಖಿಗಳು ಮೇಲ್ಭಾಗಕ್ಕೆ ಉಕ್ಕಿ ಹರಿದ ಸಮಯದಲ್ಲಿ  ಅಲ್ಲಿದ್ದ ನೀರು ಬಿಸಿಯಾಗಿದೆ. ನಂತರದ ದಿನಗಳಲ್ಲಿ ನೀರು ಆವಿಯಾಗಿದ್ದರೂ ಸಹ  ಜಲೋಷ್ಣೀಯ ಪದಾರ್ಥಗಳು ಹಾಗೆಯೇ ಉಳಿದಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
''ಮಂಗಳ ಗ್ರಹದಲ್ಲಿ ಜೀವಸಂಕುಲ ಇರುವ ಬಗ್ಗೆ ಯಾವುದೇ ಪುರಾವೆ ಇದುವರೆಗೂ ಸಿಕ್ಕಿಲ್ಲ ಆದರೂ, ಭೂಮಿಯ ಮೇಲೆ ಜೀವ ಸಂಕುಲ ಉಗಮ ಆಗುವ ಸಮಯದಲ್ಲಿ ಎಂತಹ ವಾತಾವರಣ ಇದ್ದಿತ್ತು ಎನ್ನಲು ಇದರಿಂದ ಪುರಾವೆ ದೊರೆತಂತಾಗಿದೆ,'' ಎಂದು ನಾಸಾದ ವಿಜ್ಞಾನಿ ಪೌಲ್‌ ನೈಲ್ಸ್‌ ಹೇಳಿದ್ದಾರೆ.
''ಮಂಗಳನ ಲ್ಲಿದ್ದ ನೀರಿನ ತಳಭಾಗದಲ್ಲಿ ಸಜೀವ ಜ್ವಾಲಾಮುಖಿಗಳ ಚಟುವಟಿಕೆಯು, ಅದೇ ಸಂದರ್ಭದಲ್ಲಿ ಭೂಮಿಯ ಮೇಲೆ ಜೀವ ಉಗಮವಾಗುತ್ತಿದ್ದಾಗ ಇದ್ದ ವಾತಾವರಣಕ್ಕೆ ಸಾಕಷ್ಟು ಸಾಮ್ಯವಾಗಿದೆ,'' ಸಂಶೋಧಕ ನೈಲ್ಸ್‌ ಹೇಳುತ್ತಾರೆ.
ಈಗ ಮಂಗಳ ಗ್ರಹದ ಮೇಲೆ ನೀರಿನ ಕುರುಹು ಇಲ್ಲ, ಜ್ವಾಲಾಮುಖಿ ಚಟುವಟಿಕೆಯೂ ಇಲ್ಲ. ಆದರೆ, 3.7 ಶತಕೋಟಿ ವರ್ಷಗಳ ಹಿಂದೆ ಕೆಂಪು ಗ್ರಹದ ಸಮುದ್ರದ ತಳಭಾಗದಲ್ಲಿ ನೀರು ಬಿಸಿಯಾಗಿತ್ತು. ಸರಿಯಾಗಿ ಅದೇ ಸಂದರ್ಭದಲ್ಲೂ ಭೂಮಿಯ ಮೇಲಿನ ಸಮುದ್ರಗಳ ತಳಭಾಗದಲ್ಲೂ ಇದೇ ರೀತಿಯ ವಾತಾವರಣ ಇತ್ತು. ಈ ವಾತಾವರಣದಲ್ಲಿ ಭೂಮಿಯ ಮೇಲೆ ಜೀವ ಸಂಕುಲ ಉಗಮವಾಯಿತು ಎಂದು ಸಂಶೋಧಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com