ಕೊನೆಗೂ ಬಿಡುಗಡೆಯಾಯ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಫೀಚರ್ಸ್ ಏನೇನು ಗೊತ್ತಾ?

ಭಾರತೀಯ ಸ್ಮಾರ್ಟ್ ಫೋನ್ ಲೋಕದ ಬಹು ನಿರೀಕ್ಷಿತ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಕೊನೆಗೂ ಬಿಡುಗಡೆಯಾಗಿದ್ದು, ಗ್ರಾಹಕರ ಕುತೂಹಲ ಕೆರಳಿಸಿದ್ದ ಈ ಫೋನ್ ಒಂದಷ್ಟು ಮಾಹಿತಿ ಇಲ್ಲಿದೆ.
ಸ್ಯಾಮ್ ಸಂಗ್ ನೋಟ್ 9
ಸ್ಯಾಮ್ ಸಂಗ್ ನೋಟ್ 9
ನವದೆಹಲಿ: ಭಾರತೀಯ ಸ್ಮಾರ್ಟ್ ಫೋನ್ ಲೋಕದ ಬಹು ನಿರೀಕ್ಷಿತ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಕೊನೆಗೂ ಬಿಡುಗಡೆಯಾಗಿದ್ದು, ಗ್ರಾಹಕರ ಕುತೂಹಲ ಕೆರಳಿಸಿದ್ದ ಈ ಫೋನ್ ಒಂದಷ್ಟು ಮಾಹಿತಿ ಇಲ್ಲಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಅತ್ಯಂತ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಫೋನ್ ಗಳಲ್ಲಿ ಒಂದಾಗಿದ್ದು, ನಿನ್ನೆ ನ್ಯೂಯಾರ್ಕ್ ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಯಾಗಿದೆ. ಸ್ಯಾಮ್ ಸಂಗ್ ಮೂಲಗಳ ಪ್ರಕಾರ ಆಗಸ್ಟ್ 15ರಿಂದ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಭಾರತದಲ್ಲಿ ಆಗಸ್ಟ್ 24ರಿಂದ ಲಭ್ಯವಾಗುವ ಸಾಧ್ಯತೆ ಇದೆ. ಅಂತೆಯೇ ಮತ್ತೊಂದು ಮೂಲಗಳ ಪ್ರಕಾರ ಸ್ಯಾಮ್ ಸಂಗ್ ಸಂಸ್ಥೆಯ ಅತೀ ದೊಡ್ಡ ಮಾರುಕಟ್ಟೆ ಭಾರತವಾಗಿದ್ದು, ಇದೇ ಕಾರಣಕ್ಕೆ ಜಾಗತಿಕವಾಗಿ ಬಿಡುಗಡೆಯಾಗುವ ಒಂದು ವಾರ ಮೊದಲೇ ಭಾರತದಲ್ಲಿ ಬಿಡುಗಡೆ ಮಾಜಲು ನಿರ್ಧರಿಸಲಾಗಿದೆಯಂತೆ. ಒಂದು ವೇಳೆ ಅದೇ ನಿಜವಾದರೆ ಭಾರತದಲ್ಲಿ ಆಗಸ್ಟ್ 16ರಿಂದ ಲಭ್ಯವಾಗುವ ಸಾಧ್ಯತೆ ಇದೆ.
ವೈಶಿಷ್ಟ್ಯತೆಗಳೇನು?
ಇನ್ನು ಪೋನ್ ನ ತಾಂತ್ರಿಕ ವಿಚಾರಕ್ಕೆ ಬರುವುದಾದರೆ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಅತೀ ದೊಡ್ಡ ಅಂದರೆ 6.4 ಇಂಚಿನ ಸ್ಕ್ರೀನ್ ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣಿಯಲ್ಲೇ ಇದು ಅತೀ ದೊಡ್ಡ ಸ್ಕ್ರೀನ್ ಹೊಂದಿರುವ ಫೋನ್ ಆಗಿದೆ ಎಂಬ ಖ್ಯಾತಿಯೂ ಇದಕ್ಕಿದೆ. ನೋಟ್ 9 ಕ್ವಾಡ್ ಹೆಚ್ ಡಿ ಪ್ಲಸ್ (1440x2960 ಪಿಕ್ಸೆಲ್) ಸೂಪರ್ ಅಮೋಲ್ಡ್ ಇನ್ಫಿನಿಟಿ ಡಿಸ್ ಪ್ಲೇ ಹೊಂದಿದೆ. ಎಸ್ ಪೆನ್ ಸವಲತ್ತು ಇದರ ಮತ್ತೊಂದು ಸಕಾರಾತ್ಮಕ ಅಂಶವಾಗಿದ್ದು, ಸುಧೀರ್ಘ ಸಮಯ ಬಳಕೆಗೆ ಅನುಕೂಲವಾಗುವಂತೆ ಅತೀ ದೊಡ್ಡ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು, 4000 ಎಂಎಹೆಚ್ ಸಾಮರ್ಥ್ಯವನ್ನು ಈ ಬ್ಯಾಟರಿ ಹೊಂದಿದೆ. ಈ ಮಾದರಿಯ ಅಂದರೆ ಇಷ್ಟು ದೊಡ್ಡ ಪ್ರಮಾಣದ ಡಿಸ್ ಪ್ಲೇ ಹೊಂದಿರುವ ಪೋನ್ ಗಳಿಗೆ ಹೋಲಿಕೆ ಮಾಡಿದರೆ ಇದರ ತೂಕ ಕೂಡ ಕಡಿಮೆ ಇದ್ದು, ಸುಮಾರು 200 ಗ್ರಾಂ ತೂಕವಿದೆ. ಗ್ಯಾಲಕ್ಸಿ ಎಸ್9 ಡುಯೋ ನಂತೆ, ನೋಟ್ 9 ಫೋನ್ ಯುಎಸ್ ವೇರಿಯಂಟ್ ನಲ್ಲಿರುವ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಹೊಂದಿರಲಿದ್ದು, ಇತರೆ ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಫೋನ್ ಗಳಲ್ಲಿ Exynos 98-10 ಸಾಕೆಟ್ ಇರಲಿದೆ. ಸ್ಯಾಮ್ ಸಂಸ್ಥೆ ಹೇಳಿಕೊಂಡಿರುವಂತೆ ನೋಟ್ 9 ಅತ್ಯಂತ ಪವರ್ ಫುಲ್ ಚಿಪ್ ಸೆಟ್ ಹೊಂದಿದೆ. ಇದು ವೇಗವಾಗಿ ಮತ್ತು ಕರಾರುವಕ್ಕಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.
ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ನೋಟ್ 9 ಬ್ಯಾಕ್ ಕ್ಯಾಮೆರಾಗಳು 12 ಮೆಗಾ ಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದು, ಬ್ಯಾಕ್ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಲೈಜೇಷನ್ ಹೊಂದಿದೆ. ಇದಲ್ಲದೆ ಆಟೋ ಫೋಕಸ್ ಸೆನ್ಸಾರ್ ಹೊಂದಿದ್ದು, ಕ್ಯಾಮೆರಾ ಕನಿಷ್ಠ 2ಎಕ್ಸ್, ನಿಂದ ಗರಿಷ್ಠ 10ಎಕ್ಸ್ ಜೂಮ್ ಸಾಮರ್ಥ್ಯವನ್ನು ಹೊಂದಿದೆ. ಫ್ರೆಂಟ್ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದು, ಸೆಲ್ಫಿ ಫೋಟೋಗಳಿಗೆ ನೆರವಾಗುವಂತೆ ಇದರಲ್ಲೂ ಆಟೋ ಫೋಕಸ್ ಸೆನ್ಸಾರ್ ಅಳವಡಿಸಲಾಗಿದೆ. 
ಉಳಿದಂತೆ ಹೈ ಎಂಡ್ ವೈಪೈ ಸಂಪರ್ಕಕ್ಕಾಗಿ ಡ್ಯುಯಲ್ ಬ್ಯಾಂಡ್ ವೈಫೈ 802.11ಎಸಿ, ಬ್ಲೂಟೂಥ್ ವರ್ಷನ್ 5.0, ಟೈಪ್ ಸಿ ಯುಎಸ್ ಬಿ, 3.5 ಎಂಎಂ ಹೆಡ್ ಫೋನ್ ಜ್ಯಾಕ್, ಗಿಗಾಬೈಟ್ ಎಲ್ ಟಿಇ, ವೈರ್ ಲೆಸ್ ಚಾರ್ಚರ್ ಹೊಂದಿದೆ. ಅಂತೆಯೇ ನೋಟ್ 9 ಆ್ಯಂಡ್ರಾಯ್ಡ್ 8.1 ಒರಿಯೋ ಒಎಸ್ ಹೊಂದಿದೆ. ಹೆಚ್ ಡಿಎಂಐ ಅಡಾಪ್ಟರ್ ಅನ್ನು ಕಂಪ್ಯೂಟರ್ ಮಾನಿಟರ್ ಅನ್ನು ನೋಟ್ 9 ಗೆ ಕನೆಕ್ಟ್ ಮಾಡಿ ದೊಡ್ಡ ಪರದೆಯಲ್ಲಿ ನಿಮ್ಮ ಫೋನ್ ನಿಯಂತ್ರಿಸುವ ಸವಲತ್ತೂ ಕೂಡ ಇದೆ. 
ನೋಟ್ 9 1.7ಗಿಗಾ ಹರ್ಟ್ಜ್ ಒಕ್ಟಾಕೋರ್ ಪ್ರೊಸೆಸರ್ ಹೊಂದಿದ್ದು, 6ಜಿಬಿ ರ್ಯಾಮ್ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ 128 ಜಿಬಿ ಹೆಚ್ಚುವರಿ ಮೆಮೋರಿ ಸಾಮರ್ಥ್ಯವನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com