ನೀವು ಫೇಸ್ ಬುಕ್ ಬಳಸದಿದ್ದರೂ ನಿಮ್ಮ ಮಾಹಿತಿ ಫೇಸ್ ಬುಕ್ ಗೆ ತಿಳಿಯುತ್ತೆ: ವರದಿ

ನೀವು ಫೇಸ್ ಬುಕ್ ಬಳಕೆದಾರರಾಗಿದ್ದರೂ, ಅಲ್ಲದಿದ್ದರೂ ನೀವು ಆಂಡ್ರಾಯ್ಡ್ ಫೋನ್ ಬಳಸಿದರೆಂದರೆ ಫೆಸ್ ಬುಕ್ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎನ್ನುವ ಆತಂಕಕಾರಿ ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ನೀವು ಫೇಸ್ ಬುಕ್ ಬಳಕೆದಾರರಾಗಿದ್ದರೂ, ಅಲ್ಲದಿದ್ದರೂ ನೀವು ಆಂಡ್ರಾಯ್ಡ್ ಫೋನ್ ಬಳಸಿದರೆಂದರೆ ಫೆಸ್ ಬುಕ್ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎನ್ನುವ ಆತಂಕಕಾರಿ ಮಾಹಿತಿ ಹೈದರಾಬಾದ್ ನಲ್ಲಿ  ಭಾನುವಾರ ಬಿಡುಗಡೆಯಾದ ಒಂದು ಅಧ್ಯಯನದಿಂದ ಬಹಿರಂಗವಾಗಿದೆ.
ಅಧ್ಯಯನ ವರದಿಯ ಪ್ರಕಾರ ಆಂಡ್ರಾಯ್ಡ್ ಶೇರ್ ಡೇಟಾದಲ್ಲಿನ ಅಪ್ಲಿಕೇಷನ್ ಮೂಲಕ ಒಟ್ಟು ಅಪ್ಲಿಕೇಶನ್ ಗಳ ಪೈಕಿ ಶೇ. 61ರಷ್ಟು ಅಪ್ಲಿಕೇಷನ್ ಗಳು ಫೇಸ್ಬುಕ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್ ಮುಖಾತರ ಫೆಸ್ ಬುಕ್ ಗೆ ಮಾಹಿತಿ ರವಾನಿಸುತ್ತದೆ."ಇದು ಜನರು ಫೇಸ್ ಬುಕ್ ಖಾತೆ ಹೊಂದಿದ್ದಾರೋ, ಇಲ್ಲವೋ, ಫೇಸ್ ಬುಕ್ ಬಳಕೆದಾರರು ಲಾಗ್ ಇನ್ ಇದ್ದಾಓಅಥವಾ ಇಲ್ಲವೋ  ಎನ್ನುವುದನ್ನು ಅವಲಂಬಿಸಿರುವುದಿಲ್ಲ.
ಈ ಅಪ್ಲಿಕೇಷನ್ ಗಳು ಫೇಸ್ ಬುಕ್ ನೊಡನೆ ಹಂಚಿಕೊಂಡಿದ್ದ ಡೇಟಾಗಳ ವಿವರ ಕೆಲವೊಮ್ಮೆ ಅತ್ಯಂತ ಸೂಕ್ಷ್ಮವಾಗಿರುವ ಮಾಹಿತಿಯನ್ನೂ ಹೊಂದಿವೆ ಎಂದು ಹೇಳಲಾಗಿದ್ದು  ವಿವಿಧ-ಅಪ್ಲಿಕೇಶನ್ಗಳ ದತ್ತಾಂಶವು ಜನರ ಚಟುವಟಿಕೆಗಳ ನಿಕಟ ವರದಿ, ಅವರ ಅಭಿರುಚಿ,  ಮತ್ತು ಇನ್ನಿತರ ಮಾಹಿತಿಯನ್ನೂ ಒಳಗೊಂಡಿರಬಹುದು.
ಉದಾಹರಣೆಗೆ "ಕಾಬಾ ಕನೆಕ್ಟ್" (ಮುಸ್ಲಿಂ ಪ್ರಾರ್ಥನಾ ಅಪ್ಲಿಕೇಶನ್), ಪಿರಿಯಡ್ ಟ್ರ್ಯಾಕರ್ ಕ್ಲೂ, ಇಂಡೀಡ್, ಮೈ ಟಾಕಿಂಗ್ ಟಾಮ್ಅಪ್ಲಿಕೇಷನ್ ಗಳು ಫೇಸ್ ಬುಕ್ ನೊಡನೆ ಮಾಹಿತಿ ಹಂಚಿಕೊಳ್ಳುತ್ತವೆ. ಈ ಅಪ್ಲಿಕೇಷನ್ ಬಳಕೆದಾರರ ಕುರಿತಂತೆ ಮಾಹಿತಿ ಈ ರೀತಿ ಇರಲಿದೆ- ಸಂಭವನೀಯ ಸ್ತ್ರೀ ಆಗಿರುತ್ತಾರೆ, ಈತ ಮುಸ್ಲೀಂ ಆಗಿರಬಹುದು, ಈತ ಉದ್ಯೋಗ ಅನ್ವೇಷಕನ್ನಿದ್ದಾನೆ, ಈತ ಮಗುವಿನ ಪೋಷಕನಿದ್ದಾನೆ.
ಇದಿಷ್ಟಕ್ಕೇ ಮುಗಿಯುವುದಿಲ್ಲ. ಈ ಮಾಹಿತಿಯನ್ನು ಗೂಗಲ್ ಜಾಹೀರಾತು ಐಡಿ (ಆಡ್ ಐಡಿ)ನೊಂದಿಗೆ ಹಂಚಿಕೊಳ್ಳಲಿಕ್ಕೆ ಸಹ ಈ ಅಪ್ಲಿಕೇಷನ್ ನೆರವಾಗಿದೆ.ಗೂಗಲ್ ಜಾಹೀರಾತು ಐದ್ಡಿ ಮುಖಾಂತರ ವಿವಿಧ ಅಪ್ಲಿಕೇಶನ್ಗಳು ಮತ್ತು ವೆಬ್ ಬ್ರೌಸಿಂಗ್ಬಳಕೆದಾರರ ನಡವಳಿಕೆಯ ಬಗ್ಗೆ ಡೇಟಾವನ್ನು ಟೋಟಲ್ ಪ್ರೊಫೈ ಗೆ ಲಿಂಕ್ ಮಾಡಲು ಜಾಹೀರಾತುದಾರರನ್ನು ಅನುಮತಿಸುತ್ತವೆ. 
ಆಗಸ್ಟ್ ಹಾಗೂ ಡಿಸೆಂಬರ್ ನಡುವೆ ನಡೆಸಿದ ಸಂಶೋಧನೆಗಳಿಂದ ಈ ಅಧ್ಯಯನ ವರದಿ ತಯಾರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com