ವಿಶ್ವದ ಅತ್ಯಂತ ಬಲಶಾಲಿ ರಾಕೆಟ್ 'ಸ್ಪೇಸ್ ಎಕ್ಸ್' ನ ಫಾಲ್ಕನ್ ಯಶಸ್ವೀ ಉಡಾವಣೆ!

ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಯಶಸ್ವೀ ಉಡಾವಣೆಯಾಗಿದ್ದು, ಭವಿಷ್ಯದ ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತವಾದಂತಾಗಿದೆ.
ಫಾಲ್ಕನ್ ರಾಕೆಟ್ ಯಶಸ್ವೀ ಉಡಾವಣೆ
ಫಾಲ್ಕನ್ ರಾಕೆಟ್ ಯಶಸ್ವೀ ಉಡಾವಣೆ
ಫ್ಲೋರಿಡಾ: ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಯಶಸ್ವೀ ಉಡಾವಣೆಯಾಗಿದ್ದು, ಭವಿಷ್ಯದ ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತವಾದಂತಾಗಿದೆ.
ಅಮೆರಿಕದ ಖ್ಯಾತ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ 'ಸ್ಪೇಸ್ ಎಕ್ಸ್'ಗೆ ಜೀವ ತುಂಬಲಿರುವ ಫಾಲ್ಕನ್ ರಾಕೆಟ್ ಅನ್ನು ಇಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆ  ಮಾಡಲಾಯಿತು. ಈ ಕಾರ್ಯಾಚರಣೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆ ನೇರ ಪ್ರಸಾರ ಮಾಡಿದ್ದು, ನಿರೀಕ್ಷಿತ ಸಮಯಕ್ಕೆ ನಿಖರವಾಗಿ ರಾಕೆಟ್ ತಲುಪಿದೆ ಎಂದು ವಿಜ್ಞಾನಿಗಳು ತಿಳಸಿದ್ದಾರೆ. ರಾಕೆಟ್ ಗೆ ಅಳವಡಿಸಲಾಗಿದ್ದ ಪ್ರಬಲಶಾಲಿ 27 ಎಂಜಿನ್ ಗಳ 9 ಬೂಸ್ಟರ್ ಗಳು ಮೂರು ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ರಾಕೆಟ್ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ರವಾನೆ ಮಾಡಿತು.
ಬಾಹ್ಯಾಕಾಶಕ್ಕೆ ಸ್ಪೋರ್ಟ್ಸ್ ಕಾರು!
ಇನ್ನು ಫಾಲ್ಕನ್ ರಾಕೆಟ್ ತನ್ನೊಂದಿಗೆ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರನ್ನೂ ಕೂಡ ಬಾಹ್ಯಾಕಾಶಕ್ಕೆ ಹೊತ್ಯೊಯ್ದಿತ್ತು.ಡಮ್ಮಿ ಚಾಲಕ (ಬೊಂಬೆ)ನಿದ್ದ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಫಾಲ್ಕನ್ ರಾಕೆಟ್ ಹೊತ್ತೊಯ್ದು ಯಶಸ್ವಿಯಾಗಿ ಕಾರನ್ನು ಬಾಹ್ಯಾಕಾಶ ಕಕ್ಷೆಗೆ 
ಇನ್ನು ಫಾಲ್ಕನ್ ರಾಕೆಟ್ ನ ಎಂಜಿನ್ ಮೂರು ಎಂಜಿನ್ ಗಳ ಪೈಕಿ ಎರಡು ಎಂಜಿನ್ ಗಳ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಅಟ್ಲಾಂಟಿಕ್ ಸಾಗರದಲ್ಲಿರುವ ಸ್ಪೇಸ್ ಎಕ್ಸ್ ನ ನೌಕೆಯತ್ತ ಬರಬೇಕಿದ್ದ ಮೂರನೇ ಎಂಜಿನ್ ಇನ್ನಷ್ಟೇ  ಆಗಮಿಸಬೇಕಿದೆ.  ಇನ್ನು ವಿಜ್ಞಾನಿಗಳು ತಿಳಿಸಿರುವಂತೆ ಫಾಲ್ಕನ್ ರಾಕೆಟ್ ಪ್ರಸ್ತುತ ಉಡಾವಣೆಯಲ್ಲಿ ಹೊತ್ತು ಸಾಗಿದೆ ಭಾರಕ್ಕಿಂತ ದುಪ್ಪಟ್ಟು ಭಾರದ ಇಂಧನ ಮತ್ತು ಇತರೆ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ  ಎಂದು ಹೇಳಿದ್ದಾರೆ.
ಒಟ್ಟಾರೆ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ ಸ್ಪೇಸ್ ಎಕ್ಸ್ ಗೆ ಫಾಲ್ಕನ್ ರಾಕೆಟ್ ಯಶಸ್ವೀ ಉಡಾವಣೆ ಜೀವ ತುಂಬಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com