ಚಂದ್ರನ ಮೇಲ್ಮೈಯಾದ್ಯಂತ ನೀರು: ಚಂದ್ರಯಾನ-1 ರ ಕುರಿತು ನಾಸಾ ಅಧ್ಯಯನದಿಂದ ಬಹಿರಂಗ

ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ
ಚಂದ್ರನ ಮೇಲ್ಮೈಯಾದ್ಯಂತ ನೀರು : ಚಂದ್ರಯಾನ-1 ರ ಕುರಿತ ನಾಸಾ ಅಧ್ಯಯನದಿಂದ ಬಹಿರಂಗ
ಚಂದ್ರನ ಮೇಲ್ಮೈಯಾದ್ಯಂತ ನೀರು : ಚಂದ್ರಯಾನ-1 ರ ಕುರಿತ ನಾಸಾ ಅಧ್ಯಯನದಿಂದ ಬಹಿರಂಗ
ಮುಂಬೈ: ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ ವಿಶ್ಲೇಷಣೆ ಮೂಲಕ ತಿಳಿದುಬಂದಿದೆ.  
ಚಂದ್ರನ ಮೇಲ್ಮೈನಲ್ಲಿರುವ ನೀರಿನ ಅಂಶವನ್ನು ಸುಲಭವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವಾದರೂ ಒಟ್ಟಾರೆ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ನಾಸಾ ಹೇಳಿಕೆ ಬಿಡುಗಡೆ ಮಾಡಿದೆ. ಈ ಹಿಂದೆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನೀರಿರುವ ಸೂಚನೆ ಲಭಿಸಿದೆ ಎಂದು ಹೇಳಲಾಗಿತ್ತು. 
ಭೂಮಿಯ ಉಪಗ್ರಹ ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಕಳಿಸಲಾಗಿದ್ದ ನಾಸಾದ ಎಲ್ಆರ್ ಒದಲ್ಲಿದ್ದ ಉಪಕರಣದಿಂದ ಈ ಅಂಶವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಚಂದ್ರಯಾನ-1 ಕ್ಕೆ ಬಳಸಿಕೊಳ್ಳಲಾಗಿದ್ದ ಚಂದ್ರನ ಖನಿಜ ಮಾಪಕದಿಂದ ಪಡೆಯಲಾಗಿದ್ದ ಡಾಟಾವನ್ನು ಟೆಂಪರೇಚರ್ ಮಾಡೆಲ್ ಗೆ  ಅನ್ವಯಿಸಲಾಗಿದ್ದು, ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಹೊಸ ಮಾಹಿತಿಯೊಂದು ಲಭ್ಯವಾಗಿದೆ. 
ಈ ಹೊಸ ಸಂಶೋಧನೆ ಚಂದ್ರನಲ್ಲಿ ನೀರಿನ ಮೂಲವನ್ನು ಕಂಡುಕೊಳ್ಳಲು ಹಾಗೂ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com