ಬ್ರಿಟನ್: ರೆಫರಲ್ ಜಾಹಿರಾತಿನಿಂದಲೇ ಗೂಗಲ್ ಗೆ ಮಿಲಿಯನ್ ಗಟ್ಟಲೆ ಹಣ!

ಬ್ರಿಟನ್ ನಲ್ಲಿ ಕೇವಲ ರೆಫರಲ್ ಜಾಹಿರಾತಿನಿಂದಲೇ ಗೂಗಲ್ ಗೆ ಮಿಲಿಯನ್ ಗಟ್ಟಲೆ ಹಣ ಹರಿದುಬರುತ್ತಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮೂಲಕ ತಿಳಿದುಬಂದಿದೆ.
ಗೂಗಲ್
ಗೂಗಲ್
ಲಂಡನ್: ಬ್ರಿಟನ್ ನಲ್ಲಿ ಕೇವಲ ರೆಫರಲ್ ಜಾಹಿರಾತಿನಿಂದಲೇ ಗೂಗಲ್ ಗೆ ಮಿಲಿಯನ್ ಗಟ್ಟಲೆ ಹಣ ಹರಿದುಬರುತ್ತಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮೂಲಕ ತಿಳಿದುಬಂದಿದೆ. 
ಜಾಹಿರಾತು ನೀಡುವವರ ವೆಬ್ ಸೈಟ್ ಗೆ ಪ್ರತಿಯೊಬ್ಬರು ಭೇಟಿ ನೀಡಿದಾಗಲೂ ರೆಫರಲ್ ಏಜೆಂಟ್ ಗಳಿಂದ 200 ಪೌಂಡ್ ಗಳಷ್ಟು ಶುಲ್ಕವನ್ನು ಗೂಗಲ್ ಪಡೆಯುತ್ತಿದೆ, ಈ ಮೂಲಕ ಮಿಲಿಯನ್ ಗಟ್ಟಲೆ ಹಣ ಗಳಿಸುತ್ತಿದೆ ಎಂದು ದಿ ಸಂಡೇ ಟೈಮ್ಸ್ ಹೇಳಿದೆ. 
ರೆಫರಲ್ ಏಜೆಂಟ್ ಗಳು ಉಚಿತ ಸಲಹಾ ಹೆಲ್ಪ್ ಲೈನ್ ಹೆಸರಿನಲ್ಲಿ ಜಾಹಿರಾತು ನೀಡುತ್ತಾರೆ, ಆದರೆ ಖಾಸಗಿ ಪುನರ್ವಸತಿ ಕ್ಲಿನಿಕ್ಗಳಿಗೆ ಹೊಸ ರೋಗಿಗಳನ್ನು ರೆಫರ್ ಮಾಡಿದಾಗಲೆಲ್ಲಾ 20,000 ಪೌಂಡ್ ಗಳನ್ನು ಕಮಿಷನ್ ರೂಪದಲ್ಲಿ ಪಡೆಯುತ್ತಾರೆ ಎಂದು ತಿಳಿದುಬಂದಿದೆ. 
ಗೂಗಲ್ ಸಂಸ್ಥೆ 2016 ರಲ್ಲಿ ಜಾಹಿರಾತುಗಳಿಂದಲೇ 59 ಬಿಲಿಯನ್ ಪೌಂಡ್ ಗಳಷ್ಟು ಹಣ ಗಳಿಸಿತ್ತು, ಅಮೆರಿಕಾದಲ್ಲಿ ರೆಫರಲ್ ಏಜೆಂಟ್ ಗಳಿಗೆ ಜಾಹಿರಾತು ನೀಡುವುದಕ್ಕೆ ನಿರ್ಬಂಧವಿದ್ದು, ಅದನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಆದರೆ ಬ್ರಿಟನ್ ನಲ್ಲಿ ಗೂಗಲ್ ಸಂಸ್ಥೆ ಅದೇ ರೆಫರಲ್ ಜಾಹಿರಾತುಗಳಿಂದ ಮಿಲಿಯನ್ ಗಟ್ಟಲೆ ಹಣ ಗಳಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com