ವಾಟ್ಸಪ್ ನಲ್ಲಿ ರೆಸಲ್ಯೂಷನ್, ಕ್ವಾಲಿಟಿ ಡ್ರಾಪ್ ಆಗದ ರೀತಿ ಫೋಟೋ ಕಳಿಸುವುದು ಹೇಗೆ ಗೊತ್ತಾ?

ಭಾರತದ ವಿವಿಧ ಬಗೆಯ ಇನ್ ಸ್ಟಂಟ್ ಮೆಸೇಜಿಂಗ್ ಆ್ಯಪ್ ಗಳಲ್ಲಿ ವಾಟ್ಸಪ್ ಕ್ಕೆ ಅಗ್ರಸ್ಥಾನ... ಆದರೆ ಇಂತಹ ಅಗ್ರಮಾನ್ಯ ಆ್ಯಪ್ ನಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಗತ್ತಿನ ವಿವಿಧ ಖ್ಯಾತ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ ಕೂಡ ಒಂದು.. ಭಾರತದ ವಿವಿಧ ಬಗೆಯ ಇನ್ ಸ್ಟಂಟ್ ಮೆಸೇಜಿಂಗ್ ಆ್ಯಪ್ ಗಳಲ್ಲಿ ವಾಟ್ಸಪ್ ಕ್ಕೆ ಅಗ್ರಸ್ಥಾನ... ಆದರೆ ಇಂತಹ ಅಗ್ರಮಾನ್ಯ ಆ್ಯಪ್ ನಲ್ಲಿ  ಅತ್ಯುತ್ತಮ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಇದಕ್ಕೆ ಉತ್ತರ..ಹೌದು ವಾಟ್ಸಪ್ ಮೂಲಕವೂ ಅತ್ಯುತ್ತಮ ಗುಣಮಟ್ಟದ ಅಂದರೆ ಮೂಲ ವಿಡಿಯೋ ಮತ್ತು ಚಿತ್ರಗಳನ್ನು ಸೆಂಡ್ ಮಾಡಬಹುದಾಗಿದೆ. ವಾಟ್ಸಾಪ್‌ ನಲ್ಲಿ ಸಾಮಾನ್ಯವಾಗಿ ನಾವು ಯಾವುದಾದರೂ ಇಮೇಜ್‌ಗಳನ್ನು  ಅಥವಾ ವಿಡಿಯೋಗಳನ್ನು ಕಳುಹಿಸಿಕೊಂಡರೆ ಆಟೋಮ್ಯಾಟಿಕ್ ಆಗಿ ಅವುಗಳ ಕ್ವಾಲಿಟಿ ಅಥವಾ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಲಕ್ಷಾಂತರ ಬಳಕೆದಾರರ ಕೊರಗು.. ಆದರೆ ವಾಟ್ಸಪ್ ನಲ್ಲಿ ಇದಕ್ಕೆ ಪರಿಹಾರವಿದ್ದು, ಕೆಲ  ಬುದ್ದಿವಂತ ನಡೆಗಳ ಮೂಲಕ ವಾಟ್ಸಪ್ ಮೂಲಕವೂ ನಾವು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಅಥವಾ ಹಂಚಿಕೆ ಮಾಡಿಕೊಳ್ಳಬಹುದು.
ವಾಟ್ಸಪ್ ನಲ್ಲಿ ಫೋಟೋ ಮತ್ತು ವಿಡಿಯೋ ರವಾನೆ ಮಾಡುವಾಗ ಕೆಳಗೆ ಕೊಟ್ಟಿರುವ ಈ ಸಣ್ಣ ಟಿಪ್ಸ್ ಪಾಲಿಸಿದರೆ ವಿಡಿಯೋ ಮತ್ತು ಫೋಟೋಗಳ ಗುಣಮಟ್ಟ ಸ್ವಲ್ಪವೂ ಕಡಿಮೆಯಾಗದೆ  ಮೂಲ ಫೈಲ್ ಹೇಗಿದೆಯೋ ಹಾಗೇಯೇ  ರವಾನೆಯಾಗುತ್ತದೆ.
1. ವಾಟ್ಸಪ್ ಆಪನ್ನು ಓಪನ್ ಮಾಡಿ ಅದರಲ್ಲಿ ಚಾಟ್ ವಿಂಡೋದಲ್ಲಿ ಮೆಸೇಜ್ ಟೈಪ್ ಮಾಡುವ ಬಾಕ್ಸ್‌ನಲ್ಲಿ ಪಕ್ಕದಲ್ಲೇ ಇರುವ ಅಟ್ಯಾಚ್‍ ಮೆಂಟ್ ಬಟನ್ ಪ್ರೆಸ್ ಮಾಡಬೇಕು.
2. ಅಟ್ಯಾಚ್‌ ಮೆಂಟ್ ಬಟನ್ ಅನ್ನು ಪ್ರೆಸ್ ಮಾಡಿದ ಮೇಲೆ ಬರುವ ಪಾಪಪ್ ವಿಂಡೋದಲ್ಲಿ ಗ್ಯಾಲರಿ ಅಲ್ಲದೆ ಡಾಕ್ಯುಮೆಂಟ್ ಎಂಬ ಆಯ್ಕೆಯನ್ನು ಒತ್ತಬೇಕು. 
3. ಬಳಿಕ ಬರುವ ಮತ್ತೊಂದು ವಿಂಡೋದಲ್ಲಿ ಬ್ರೌಸ್ ಅದರ್ ಡಾಕ್ಸ್ ಎಂಬ ಮತ್ತೊಂದು ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
4. ಬ್ರೌಸ್ ಅದರ್ ಡಾಕ್ಸ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡ ಕೂಡಲೆ ಫೈಲ್ ಮ್ಯಾನೇಜರ್ ಓಪನ್ ಆಗುತ್ತದೆ. ಅದರಲ್ಲಿ ನೀವು ಕಳುಹಿಸಬೇಕಾದ ಇಮೇಜ್‌ ಅಥವಾ ವಿಡಿಯೋಗಳನ್ನು ಯಾವ ಫೋಲ್ಡರ್ ನಲ್ಲಿ ಇವೆಯೋ  ಸೆಲೆಕ್ಟ್ ಮಾಡಿಕ್ಕೊಳ್ಳಬೇಕು. ಅವುಗಳಲ್ಲಿ ಇರುವ ಇಮೇಜ್‍ಗಳನ್ನು ಸೆಲೆಕ್ಟ್ ಮಾಡಬೇಕು.
5. ಆ ಬಳಿಕ ಓಕೆ ಬಟನ್ ಪ್ರೆಸ್ ಮಾಡಿದ ಕೂಡಲೆ ಆ ಇಮೇಜ್ ಡಾಕ್ಯುಮೆಂಟ್ ರೂಪದಲ್ಲಿ ವಾಟ್ಸಪ್‍ನಲ್ಲಿ ಅಪ್ ಲೋಡ್ ಆಗುತ್ತವೆ. ಬಳಿಕ ಸೆಂಡ್ ಬಟನ್ ಪ್ರೆಸ್ ಮಾಡಿದರೆ ಸಾಕು. ನೀವು ಕಳುಹಿಸುವ ಇಮೇಜ್‌ ಗಳು ಅಥವಾ  ವಿಡಿಯೋಗಳು ಡಾಕ್ಯುಮೆಂಟ್ ಫಾರ್ಮಾಟ್‌ ನಲ್ಲಿ ಹೊರಗಿನ ವ್ಯಕ್ತಿಗೆ ತಲುಪುತ್ತವೆ. ಆ ರೀತಿ ರವಾನೆಯಾಗುವ ಇಮೇಜ್‌ ಅಥವಾ ವಿಡಿಯೋಗಳ ಕ್ವಾಲಿಟಿ ಸ್ವಲ್ಪವೂ ಕಡಿಮೆಯಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com