ಇಸ್ರೋದ  ಮೂನ್ ಮಿಷನ್ ತಂಡದಿಂದ ಚಂದ್ರಯಾನ 2 ಯೋಜನಾ ನಿರ್ದೇಶಕಿ ಹೊರಕ್ಕೆ

ಭಾರತದ  ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ  ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ  ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇ
ಎಂ. ವನಿತಾ
ಎಂ. ವನಿತಾ

ಬೆಂಗಳೂರು: ಭಾರತದ  ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ  ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ  ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇಶ ಹೊರಡಿಸಿದೆ. ಇದೇ ವೇಳೆ ಮೂನ್ ಮಿಷನ್ ಮುಖ್ಯಸ್ಥರಾಗಿ ರಿತು ಕರಿಧಾಲ್ ಮುಂದುವರಿಯಲಿದ್ದಾರೆ.

 ಚಂದ್ರಯಾನ2 ಚಂದ್ರನ ಮೊದಲ ಚಿತ್ರವನ್ನು ಕಳಿಸಿದ್ದು ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಚಿತ್ರವನ್ನು ಇಸ್ರೋ ಟ್ವೀಟ್ ಮಾಡಿದೆ.

"ಅತ್ಯುತ್ತಮ ವಿಜ್ಞಾನಿ ಮತ್ತು ಪ್ರಸ್ತುತ ಯೋಜನಾ ನಿರ್ದೇಶಕರಾದ ಎಂ.ವನಿತಾ ಅವರನ್ನು ಈ ಮೂಲಕ ಉಪನಿರ್ದೇಶಕರು, ಪೇಲೋಡ್ ಡೇಟಾ ಮ್ಯಾನೇಜ್ಮೆಂಟ್ ಆಂಡ್ ಸ್ಪೇಸ್ ಅಸ್ಟ್ರಾಲಜಿ ಏರಿಯಾ (ಪಿಡಿಎಂಎಸ್ಎ)  ಆಗಿ ನೇಮಕ ಮಾಡಲಾಗಿದೆ.ಪಿ ವೀರಮುತುವೇಲು ಅವರನ್ನು ಸ್ರೋ ಪ್ರಧಾನ ಕಚೇರಿಯಿಂದ ವರ್ಗಾಯಿಸಲಾಗಿದೆ ಮತ್ತು ಚಂದ್ರಯಾನ 3 ನಿಯೋಜಿತ ಯೋಜನಾ ನಿರ್ದೇಶಕ ಎಂದು ನೇಮಕ ಮಾಡಿದೆ" ನವೆಂಬರ್ 28 ರಂದು ಬಾಹ್ಯಾಕಾಶ ಸಂಸ್ಥೆ ಹೊರಡಿಸಿದ ಆದೇಶ ಹೇಳಿದೆ ಎಂದು ಆಂಗ್ಲ ಮಾದ್ಯಮವೊಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವ ನಿರ್ದಿಷ್ಟ ಕಾರಣಗಳನ್ನು ತಿಳಿಸಿಲ್ಲ.

ಚಂದ್ರಯಾನ 2 ಅಥವಾ 'ಬಾಹುಬಲಿ' ' ಎಂಬ ಅಡ್ಡಹೆಸರಿನ ಹೆವಿ-ಲಿಫ್ಟ್ ರಾಕೆಟ್ ಜುಲೈ 22 ರಂದು ಚಂದ್ರಯಾನ್ 2 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಸಾಗಿಸಿದೆ.ಬಾಹ್ಯಾಕಾಶ ನೌಕೆಯನ್ನು ಆರಂಭದಲ್ಲಿ ಜುಲೈ 15 ರಂದು ಉಡಾಯಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ತಾಂತ್ರಿಕದೋಷಗಳ ಕಾರಣ ದಿನಾಂಕವನ್ನು ಮುಂದೂಡಲಾಗಿತ್ತು. ತು. ಆಗಸ್ಟ್ 2 ರಂದು ಚಂದ್ರಯಾನ  2 ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಆದರೆ ಪ್ಟೆಂಬರ್ 7 ರಂದು ಚಂದ್ರಯಾನ 2 ವಿಕ್ರಮ್ ಲ್ಯಾಂಡರ್‌ನೊಂದಿಗಿನ ಸಂವಹನವನ್ನು ಇಸ್ರೋ ಕಳೆದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com