ಗೂಗಲ್ ನಿಂದ 4.5 ಮಿಲಿಯನ್ ವನ್ಯಜೀವಿಗಳ ಟ್ರ್ಯಾಕ್! 

ವನ್ಯಜೀವಿಗಳ ರಕ್ಷಣೆಗಾಗಿ ಗೂಗಲ್, ಕನ್ಸರ್ವೇಷನ್ ಇಂಟರ್ ನ್ಯಾಷನಲ್ ಸೇರಿದಂತೆ 7 ಸಂಸ್ಥೆಗಳು 4.5 ಮಿಲಿಯನ್ ವನ್ಯಜೀವಿಗಳನ್ನು ಟ್ರ್ಯಾಕ್ ಮಾಡಿದೆ. 

ಕ್ಯಾಮರಾ ಟ್ರ್ಯಾಪ್ ಗಳೆಂದೇ ಪ್ರಸಿದ್ಧವಾಗಿರುವ ಚಲನೆ-ಸಕ್ರಿಯ ಕ್ಯಾಮೆರಾಗಳ ಸಹಾಯದಿಂದ ಫೋಟೋಗಳನ್ನು ತೆಗೆಯಲಾಗಿದೆ. ಇದರಿಂದ ವನ್ಯಜೀವಿಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ಡೇಟಾ ಸಂಗ್ರಹವಾಗಲಿದೆ. ಸಂರಕ್ಷಣಾ ವಿಜ್ಞಾನಿಗಳು ಗೂಗಲ್ ಕ್ಲೌಡ್ ನಲ್ಲಿ ಈ ಫೋಟೋಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮ್ಯಾಪ್ ಗಳಲ್ಲಿ ವನ್ಯಜೀವಿಗಳ ಸಂಖ್ಯೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ. 

ಈ ಕ್ರಮದಿಂದಾಗಿ ವನ್ಯಜೀವಿಗಳು ಹಾಗೂ ಅವುಗಳ ಪರಿಸರವನ್ನು ಉಳಿಸುವುದಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಸಂಸ್ಥೆ ಹೇಳಿದೆ. ವಿಶ್ವದಲ್ಲೇ ಇದು ಅತ್ಯಂತ ದೊಡ್ಡ ಅತ್ಯಂತ ವೈವಿಧ್ಯಮಯ ಸಾರ್ವಜನಿಕ ಕ್ಯಾಮೆರಾ-ಟ್ರ್ಯಾಪ್ ಡೇಟಾಬೇಸ್ ಆಗಿರಲಿದೆ. 

ಮಾನವ ತಜ್ಞರಿಗಾದರೆ ಸರಾಸರಿ ಒಂದು ಗಂಟೆಗೆ 300, 1,000 ಇಮೇಜ್ ಗಳನ್ನು ವಿಶ್ಲೇಷಿಸುವ ಸಾಮರ್ಥ್ಯವಿರುತ್ತದೆ. ಆದರೆ ಕೃತಕ ಬುದ್ಧಿಮತ್ತೆ ಹೊಂದಿರುವ ಈ ವ್ಯವಸ್ಥೆಗೆ 3.6 ಮಿಲಿಯನ್ ಫೋಟೋಗಳನ್ನು ಪ್ರತಿ ಗಂಟೆಗೆ ವಿಶ್ಲೇಷಿಸುವ ಸಾಮರ್ಥ್ಯವಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com