ಮೈಕ್ರೋಸ್ಯಾಟ್ -ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಪಿಎಸ್ ಎಲ್ ವಿ- ಸಿ44 ಯಶಸ್ವಿ

ವಿದ್ಯಾರ್ಥಿಗಳೇ ನಿರ್ಮಿಸಿರುವ ಪಿಎಸ್ ಎಲ್ ವಿ- ಸಿ44 ರಾಕೆಟ್ ಮೂಲಕ ಮೈಕ್ರೋಸ್ಯಾಟ್ - ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಪಿಎಸ್ ಎಲ್ ವಿ-ಸಿ44
ಪಿಎಸ್ ಎಲ್ ವಿ-ಸಿ44

ಶ್ರೀಹರಿಕೋಟಾ: ವಿದ್ಯಾರ್ಥಿಗಳೇ ನಿರ್ಮಿಸಿರುವ ಪಿಎಸ್ ಎಲ್ ವಿ- ಸಿ44 ರಾಕೆಟ್ ಮೂಲಕ  ಮೈಕ್ರೋಸ್ಯಾಟ್ - ಆರ್, ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಸತೀಶ್ ಧವನ್  ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ರಾತ್ರಿ 11-37 ರ ಸಂದರ್ಭದಲ್ಲಿ ನಭಕ್ಕೆ ಹಾರಿದ ಇಸ್ರೋ ನಿರ್ಮಿತ ಪಿಎಸ್ ಎಲ್ ವಿ- ಸಿ44 ಉಡ್ಡಯನ ವಾಹನ,ಇದೇ ಮೊದಲ ಬಾರಿಗೆ ಅತ್ಯಂತ ಎತ್ತರದ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದೆ. ಈ ಮೂಲಕ ಇಸ್ರೋ ಮತ್ತೊಂದು ಇತಿಹಾಸ ಬರೆದಿದೆ.
ನಭಕ್ಕೆ ಚಿಮ್ಮಿದ ನಾಲ್ಕು ಹಂತದ ಪಿಎಸ್ ಎಲ್ ವಿ- ಸಿ44   740 ಕೆಜಿ ತೂಕದ ಮೈಕ್ರೋಸ್ಯಾಟ್ -ಆರ್ ಉಪಗ್ರಹವನ್ನು 13 ನಿಮಿಷ ಮತ್ತು 30 ಸೆಕೆಂಡ್ ಗಳಲ್ಲಿ ಕಕ್ಷೆ ಸೇರಿಸಿತು. ಇದು ಕಕ್ಷೆ ಸೇರುತ್ತಿದ್ದಂತೆ ನಿಯಂತ್ರಣ ಸೆಂಟರ್ ನಲ್ಲಿದ್ದ ಇಸ್ರೋ ವಿಜ್ಞಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com