ಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್: ರಣೋತ್ಸಾಹ ರೀತಿಯಲ್ಲಿ ಸಜ್ಜಾದ ಇಸ್ರೋ!

ಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್ ಕಳುಹಿಸಲು ರಣೋತ್ಸಾಹ ರೀತಿಯಲ್ಲಿ ಇಸ್ರೋ ನಿಯಂತ್ರಣ ಕೇಂದ್ರ ಸಜ್ಜಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಳ್ಳುವ ರೀತಿಯಲ್ಲೇ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸಿದ್ಧವಾಗಿದೆ.
ಇಸ್ರೋ
ಇಸ್ರೋ

ಬೆಂಗಳೂರು: ಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್ ಕಳುಹಿಸಲು ರಣೋತ್ಸಾಹ ರೀತಿಯಲ್ಲಿ ಇಸ್ರೋ ನಿಯಂತ್ರಣ ಕೇಂದ್ರ ಸಜ್ಜಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಳ್ಳುವ ರೀತಿಯಲ್ಲೇ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸಿದ್ಧವಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ  ಸುಮಾರು 500 ವಿಜ್ಞಾನಿಗಳು ಹಗಲು ರಾತ್ರಿ ಏನ್ನದೇ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಇಸ್ರೋದ ಈ ಚಾರಿತ್ರಿಕ ಸಾಹಸಕ್ಕೆ ಸಾಕ್ಷಿಯಾಗಲಿದ್ದಾರೆ. ನಿಯಂತ್ರಣ ಕೇಂದ್ರದ ಸಿದ್ಧತೆಯ ಪೋಟೋಗಳನ್ನು ಇಸ್ರೋ ಹಂಚಿಕೊಂಡಿದೆ.


ಬೆಳಗಿನ ಜಾವ 1-30ರ ಸುಮಾರಿನಲ್ಲಿ ಚಂದ್ರನ ಮೇಲೆ ಇಳಿಯಲಿರುವ ವಿಕ್ರಮ್ ಲ್ಯಾಂಡರ್ ನ ಒಡಲಿನಿಂದ  ಪ್ರಜ್ಞಾನ್ ರೋವರ್ ಕೆಳಗಿಳಿಯಲಿದೆ. ನಂತರ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ಹೆಜ್ಜೆ ಹಾಕಲಿದೆ. ಬೆಂಗಳೂರಿನ ನಿಯಂತ್ರಣ ಕೇಂದ್ರದಿಂದಲೇ ವಿಕ್ರಮ್ ಲ್ಯಾಂಡರ್  ಹಾಗೂ ಪ್ರಜ್ಞಾನ್ ರೋವರ್ ಕಾರ್ಯಾಚರಣೆಯನ್ನು ನಿಯಂತ್ರಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com