ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸ್ಥಗಿತದ ನಡುವೆಯೇ ಮಾಲಿನ್ಯ ನಿಯಂತ್ರಕ ಸಾಧನ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ

ಕಾಶ್ಮೀರದಲ್ಲಿ ತಿಂಗಳುಗಟ್ಟಲೆ  ಇಂಟರ್ ನೆಟ್ ಸೇವೆ ಸ್ಥಗಿತವಾಗಿ ಹೋದರೂ ಸಹ ಈ ಶಾಲಾ ಬಾಲಕನಿಗೆ ಅದೊಂದು ಬಹುದೊಡ್ಡ ಸಮಸ್ಯೆಯಾಗಲಿಲ್ಲ. ಆತ ಬೆಂಗಳೂರಿನಲ್ಲಿದ್ದೇ ತನ್ನ ಊರಾದ ಕಾಶ್ಮೀರವನ್ನು ಹೊಗೆ ಮುಕ್ತವಾನ್ನಾಗಿಸಲು ಯಶಸ್ವಿಯಾಗಿದ್ದಾನೆ. 
ಬೆಂಗಳೂರಿನ  107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಕಾಶ್ಮೀರಿ ವಿದ್ಯಾರ್ಥಿ ನುಮೈರ್ ಮುಜಾಫರ್
ಬೆಂಗಳೂರಿನ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಕಾಶ್ಮೀರಿ ವಿದ್ಯಾರ್ಥಿ ನುಮೈರ್ ಮುಜಾಫರ್
Updated on

ಬೆಂಗಳೂರು: ಕಾಶ್ಮೀರದಲ್ಲಿ ತಿಂಗಳುಗಟ್ಟಲೆ  ಇಂಟರ್ ನೆಟ್ ಸೇವೆ ಸ್ಥಗಿತವಾಗಿ ಹೋದರೂ ಸಹ ಈ ಶಾಲಾ ಬಾಲಕನಿಗೆ ಅದೊಂದು ಬಹುದೊಡ್ಡ ಸಮಸ್ಯೆಯಾಗಲಿಲ್ಲ. ಆತ ಬೆಂಗಳೂರಿನಲ್ಲಿದ್ದೇ ತನ್ನ ಊರಾದ ಕಾಶ್ಮೀರವನ್ನು ಹೊಗೆ ಮುಕ್ತವಾನ್ನಾಗಿಸಲು ಯಶಸ್ವಿಯಾಗಿದ್ದಾನೆ.

ಶ್ರೀನಗರದ ಬರ್ನ್ ಹಾಲ್ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ನುಮೈರ್ ಮುಜಾಫರ್ ಎಂಬ ಬಾಲಕನೇ ಈ ವಿಶೇಷ ಸಾಧನೆ ಮಾಡಿದವನಾಗಿದ್ದು ಈತ ಈತ ತನ್ನ ಈ ಚಿಕ್ಕ ವಯಸ್ಸಿನಲ್ಲಿಯೇ ಕಾರ್ಬೊನಿಕ್ ಸ್ಮೋಕ್ ಆಡ್ಸರ್ಬರ್ ಅಂತಹಾ ಮಹತ್ವದ ಸಾಧನವನ್ನು ಅಭಿವೃದ್ದಿಪಡಿಸಿದ್ದಾನೆ. ಈ ಸಾಧನವನ್ನು ಬಳಸಿಕೊಂಡು ವಾಯುಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಮತ್ತು ಭಾರತದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಮಹತ್ವದಪಾತ್ರ ವಹಿಸಲಿದೆ.

"ನನ್ನ ಯೋಜನೆ  ಪ್ರತಿಯೊಬ್ಬರಿಗೂ ಶುದ್ಧ ಗಾಳಿ" ಎಂಬ ತತ್ವವನ್ನು ಆಧರಿಸಿದೆ "ಎಂದು ನುಮೈರ್ ಬೆಂಗಳೂರಿನಲ್ಲಿ ನಡೆದ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಂಗವಾಗಿ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ತಮ್ಮ ಮಾದರಿಯನ್ನು ಪ್ರದರ್ಶಿಸಿ ಹೇಳಿದ್ದಾರೆ. ಸರಳವಾಗಿ ಕಾರ್ಯನಿರ್ವಹಿಸುವ ಈ ಸಾಧನ  ಗಾಳಿಯನ್ನು ಕನಿಷ್ಠ ವೆಚ್ಚದಲ್ಲಿ ಸ್ವಚ್ಚಗೊಳಿಸಲು ಉಪಯೋಗವಾಗಲಿದೆ.

ಇಂಗಾಲದ ಹೊರಸೂಸುವಿಕೆ ತಪ್ಪಿಸಿ  ಮಾಲಿನ್ಯ ನಿಯಂತ್ರಣ ಸಾಧನವಿದಾಗಿದ್ದು ಕಡಿಮೆ ಸಾಂದ್ರತೆಯಪ್ರದೇಶಗಳಲ್ಲಿ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮಾಲಿನ್ಯಕಾರಕಗಳು ಸಕ್ರಿಯ ಇಂಗಾಲದ ಮೂಲಕ ಹರಿಯುತ್ತವೆ, ಅವುಗಳನ್ನುಈ ಸಾಧನದ ಮೂಲಕ ತಡೆಯಲು ಸಾಧ್ಯವಿದೆ.

ಸಿಲಿಂಡರಾಕಾರದ ರಚನೆಯು ಎಕ್ಶ್ಯಾಸ್ಟ್ ಫ್ಯಾನ್  ಅನ್ನು ಹೊಂದಿರುತ್ತದೆ, ಅಲ್ಲಿ ಚಿಮಣಿಗಳಿಂದ ಕಲುಷಿತ ಗಾಳಿಯು ಪ್ರವೇಶಿಸುತ್ತದೆ. ಗಾಳಿಯು ಸಕ್ರಿಯ ಇಂಗಾಲದಿಂದ ತುಂಬಿದ ಪ್ರದೇಶದಿಂದ ಹಾದು ಹೋಗುವಾಗ ಗಾಳಿಯನ್ನು ಶುದ್ದೀಕರಿಸುತ್ತದೆಈ ಮಾದರಿಯನ್ನು ಆರಂಭದಲ್ಲಿ ಕಾಶ್ಮೀರದ ಮನೆಗಳಿಗೆ ಬಳಕೆ ಮಾಡುವುದಕ್ಕೆ ಉದ್ದೇಶಿಸಲಾಗಿತ್ತು.ಅಲ್ಲಿ ಹಮಾಮ್ ಅಥವಾ  ಕಲ್ಲಿನ ಕೊಠಡಿಗಳು ಸಾಮಾನ್ಯವಾಗಿದ್ದು ಹೊರಗಿನ ಶೀತಗಾಳಿಗಳಿಂದ ಉರುವಲು ಸುಡುವ ಮೂಲಕ ಬೆಚ್ಚಗಿರಿಸಲು ಇದನ್ನು ಬಳಸಬಹುದಾಗಿದೆ ಎಂದು ನುಮೈರ್ ಅವರ ಮಾರ್ಗದರ್ಶಕ ಬಶರತ್ ಹುಸೇನ್ ಹೇಳಿದರು.ಆದರೆ ದೊಡ್ಡ ಕಾರ್ಖಾನೆಯಲ್ಲಿಯೂಸಹ ಈ ಸಾಧನಗಳ ಬಳಕೆ ಮೂಲಕ  ಹೆಚ್ಚಿನ ಪ್ರಮಾಣದ ಇಂಗಾಲದ ಅಂಶವನ್ನುಹೊರಹಾಕಲು ಸಾಧ್ಯವಾಗಲಿದೆ ಎಂದು ಮುಂದೆ ಅರಿವಿಗೆ ಬಂದಿದೆ. 

ಕಣಿವೆಯಲ್ಲಿ ಹೆಚ್ಚುತ್ತಿರುವ ಹಮಾಮ್‌ಗಳೊಡನೆ ಮೋಡದೊಡನೆ ಹೆಚ್ಚು ಹೆಚ್ಚು ಹೊಗೆಯ ಪದರಗಳು ಸೇರ್ಪಡೆಗೊಳ್ಳುತ್ತದೆ.ಭಾರತದಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಈ ಮಾದರಿಯು ಒಂದು ಮಹತ್ವದ ಸಾಧನವಾಗಬಹುದುಎಂದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಅವರ ತಾಯಿ ಹೇಳಿದ್ದಾರೆ.

370 ನೇ ವಿಧಿ ರದ್ದಾಗಿ  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ದಿನ ಆಗಸ್ಟ್ 5 ರಿಂದ ವಿದ್ಯಾರ್ಥಿ ಸಮುದಾಯದ ಕಷ್ಟಗಳನ್ನು ಹೇಳಿದ  ನುಮೈರ್, ಜಮ್ಮು ಮತ್ತು ಕಾಶ್ಮೀರದ ಮೇಲೆ  ‘ಡೆಡ್ಲಾಕ್’ಹೇರಲಾಗಿದ್ದು ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಿದ್ದರಿಂದಹೆಚ್ಚಿನ ಸಮಸ್ಯೆಗೆ ಸಿಕ್ಕಿದವರು ವಿದ್ಯಾರ್ಥಿಗಳು  ಎಂದು ಆತ ಹೇಳೀದ್ದಾನೆ.

ಕಾಶ್ಮೀರದಲ್ಲಿ ಶೈಕ್ಷಣಿಕ ಸಮಸ್ಯೆ ಸಂಭವಿಸಿದಾಗ  ಪಠ್ಯಕ್ರಮದಲ್ಲಿ ಯಾವುದೇ ವಿನಾಯಿತಿ ಇಲ್ಲದೆ  ಎಲ್ಲಾ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕೆಂದು ಹಠಾತ್ ಕರೆ ನೀಡಲಾಯಿತು.ಇಂಟರ್ನೆಟ್ ಸ್ಥಗಿತಗೊಳಿಸುವುದರೊಂದಿಗೆ, ಅವನು ತನ್ನ ಸಂಬಂಧಿಕರ ಮನೆಯಲ್ಲಿದ್ದಾಗ ಆತ ತನ್ನ ಪ್ರಿಬೋರ್ಡ್ ಬಗ್ಗೆ ಸಹ ತಿಳಿದಿರಲಿಲ್ಲ ಇದೀಗ ವಿದ್ಯಾರ್ಹಿಯ ಭವಿಷ್ಯ ಉಜ್ವಲವಾಗಿದೆ ಎಂದು  ಬಶರತ್ ನಂಬಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com