ಭಾರತೀಯ ಮೂಲದ ವಿದ್ಯಾರ್ಥಿನಿಗೆ ನಾಸಾದ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟ ಗೌರವ!

ಭಾರತೀಯ ಮೂಲದ 17 ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ.
ವನೀಜಾ ರೂಪಾನಿ
ವನೀಜಾ ರೂಪಾನಿ

ವಾಷಿಂಗ್ಟನ್: ಭಾರತೀಯ ಮೂಲದ 17 ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ. 

ಅಮೆರಿಕದ ಅಲಬಾಮಾದ ನಾರ್ತ್‌ಪೋರ್ಟ್‌ನ ಪ್ರೌಢ ಶಾಲಾಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವನೀಜಾ ರೂಪಾನಿ, ನಾಸಾದ "ನೇಮ್ ದಿ ರೋವರ್" ಸ್ಪರ್ಧೆಯಲ್ಲಿ ತನ್ನ ಪ್ರಬಂಧವನ್ನು ಸಲ್ಲಿಸಿದ್ದರು. ಇದೀಗ ನಾಸಾ ರೂಪಾನಿ ಸೂಚಿಸಿದ್ದ ಹೆಸರನ್ನೇ ಇಟ್ಟಿದೆ. 

ಮತ್ತೊಂದು ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ನಾಸಾದ ಮಾರ್ಸ್ ಹೆಲಿಕಾಪ್ಟರ್ ಪಾತ್ರವಾಗಲಿದ್ದು ಇದಕ್ಕೆ ರೂಪಾನಿ ಸೂಚಿಸಿದ ಇಂಜಿನ್ಯೂಯಿಟಿ ಎಂದು ಹೆಸರಿಟ್ಟಿದೆ. 

"ನಮ್ಮ ಮಾರ್ಸ್ ಹೆಲಿಕಾಪ್ಟರ್ ಹೊಸ ಹೆಸರನ್ನು ಹೊಂದಿದೆ! ನೋಡಿ: ಇಂಜಿನ್ಯೂಯಿಟಿ. ವಿದ್ಯಾರ್ಥಿ ವನೀಜಾ ರೂಪಾನಿ ನಮ್ಮ" ನೇಮ್ ದಿ ರೋವರ್ "ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ಟ್ವೀಟ್ ಮಾಡಿದೆ. 

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 2020ರಲ್ಲಿ ಮಂಗಳಗ್ರಹಕ್ಕೆ ಮೊದಲ ಹೆಲಿಕಾಪ್ಟರ್ ಕಳುಹಿಸುವ ಯೋಜನೆ ರೂಪಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com