ಖಗೋಳ ಕೌತುಕಕ್ಕೆ ಕ್ಷಣಗಣನೆ: ಡಿಸೆಂಬರ್ 13-14 ರಂದು ಉಲ್ಕೆಗಳ ದರ್ಶನ

ಹವ್ಯಾಸಿ ಖಗೋಳ ವಿಜ್ಞಾನಿಗಳೇ ನಿಮ್ಮೆ ಕ್ಯಾಲೆಂಡರ್ ನಲ್ಲಿ ಡಿಸೆಂಬರ್ 13 ಮತ್ತು 14ರನ್ನು ಗುರುತು ಮಾಡಿಟ್ಟುಕೊಳ್ಳಿ, ಅಂದು ಖಗೋಳ ಕೌತುಕದ ದರ್ಶನವಾಗಲಿದೆ.

Published: 12th December 2020 01:00 PM  |   Last Updated: 12th December 2020 01:27 PM   |  A+A-


Meteors

ಉಲ್ಕಾಪಾತ

Posted By : Srinivasamurthy VN
Source : The New Indian Express

ಬೆಂಗಳೂರು: ಹವ್ಯಾಸಿ ಖಗೋಳ ವಿಜ್ಞಾನಿಗಳೇ ನಿಮ್ಮೆ ಕ್ಯಾಲೆಂಡರ್ ನಲ್ಲಿ ಡಿಸೆಂಬರ್ 13 ಮತ್ತು 14ರನ್ನು ಗುರುತು ಮಾಡಿಟ್ಟುಕೊಳ್ಳಿ, ಅಂದು ಖಗೋಳ ಕೌತುಕದ ದರ್ಶನವಾಗಲಿದೆ.

ಹೌದು...ಇದೇ ಡಿಸೆಂಬರ್ 13 ಮತ್ತು 14ರಂದು ಆಗಸದಲ್ಲಿ ಉಲ್ಕಾಪಾತವಾಗಲಿದ್ದು, ಈ ಅಪರೂಪದ ಗಳಿಗೆಗಾಗಿ ದೇಶದ ಸಾವಿರಾರು ಖಗೋಳ ವಿಜ್ಞಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಕ್ಲಬ್‌ನ  ಸಂಯೋಜಕ ಅತುಲ್ ಭಟ್ ಅವರು, ಜೆಮಿನಿಡ್ಸ್ ಉಲ್ಕಾಪಾತವು ಇದೇ ಡಿಸೆಂಬರ್ 13 ಮತ್ತು 14ರ ನಡುವೆ ಗೋಚರವಾಗಲಿದೆ. ರಾತ್ರಿ ಸುಮಾರು 8.30ರ ಸುಮಾರಿಗೆ ಈ ಉಲ್ಕಾಪಾತ ಗೋಚರವಾಗಲಿದೆ. 

ಪ್ರತೀ ವರ್ಷದ ನಿರ್ಧಿಷ್ಟ ಸಮಯದಲ್ಲಿ ಈ ಉಲ್ಕಾಪಾತಗಳು ಭೂಮಿಗೆ ಸಮೀಪದಲ್ಲಿ ಹಾದುಹೋಗುತ್ತದೆ. ಧೂಮಕೇತುಗಳಲ್ಲದೆ ಕ್ಷುದ್ರಗ್ರಹಗಳ ಅವಶೇಷಗಳಿಂದ ಉಂಟಾಗುವ ಎರಡು ಉಲ್ಕಾಪಾತಗಳಲ್ಲಿ ಜೆಮಿನೈಡ್ಸ್ ಕೂಡ ಒಂದು, 3200 ಫೇಥಾನ್ ಎಂಬ ಕ್ಷುದ್ರಗ್ರಹವು ಭೂಮಿಯ  ಮೂಲಕ ಹಾದುಹೋಗಿ ಸೂರ್ಯನನ್ನು ಪರಿಭ್ರಮಿಸುತ್ತದೆ. 3200 ಫೇಥಾನ್ ರಾಕ್ ಕಾಮೆಟ್ (ಕಲ್ಲು) ಆಗಿದ್ದು, ಉಳಿದ ಎಲ್ಲಾ ಧೂಮಕೇತುಗಳು ಮಂಜುಗಡ್ಡೆಯಿಂದ ರಚನೆಯಾಗಲ್ಪಟ್ಟಿರುತ್ತದೆ.  3200 ಫೇಥಾನ್ ದೊಡ್ಡ ಪ್ರಮಾಣದ ಭಗ್ನಾವಶೇಷಗಳನ್ನು ಹೊಂದಿದ್ದು. ಈ ಉಲ್ಕಾಪಾತಗಳಲ್ಲಿ  ಜೆಮಿನೈಡ್ಸ್ ಅತೀ ದೊಡ್ಡದು ಎಂದು ಹೇಳಲಾಗಿದೆ. ಇದರಲ್ಲಿ ಪ್ರತೀಗಂಟೆಗೆ ಸರಿಸುಮಾರು 120 ಉಲ್ಕಾಪಾತಗಳು ಗೋಚರವಾಗಲಿವೆ. ಅಂದರೆ ಪ್ರತೀ 30 ಸೆಕೆಂಡ್ ಗೆ ಒಂದೊಂದು ಉಲ್ಕಾಪಾತ ಗೋಚರವಾಗಲಿದೆ.

ಸಲಹೆ
ಈ ವಿಶೇಷ ಉಲ್ಕಾಪಾತ ವೀಕ್ಷಣೆಗೆ ವಾಯುಮಾಲಿನ್ಯ ರಹಿತ ಪ್ರದೇಶಗಳು ಸೂಕ್ತ. ಮಾಲಿನ್ಯದಿಂದ ಕೂಡಿದ ಪ್ರದೇಶಗಳಲ್ಲಿ ಆಗಸ ಸ್ಪಷ್ಟವಾಗಿ ಗೋಚರಿಸುವುದಿಲ್ಲ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp