
ಭಾರತೀಯ ಅಮೆರಿಕನ್ ಗಗನಯಾತ್ರಿ ರಾಜಾ ಚಾರಿ
ವಾಷಿಂಗ್ ಟನ್: ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸ್ಪೇಸ್ X ಮಿಷನ್ ಗೆ ಭಾರತೀಯ ಮೂಲದ ಅಮೆರಿಕದ ವಾಯುಪಡೆಯ ಕರ್ನಲ್ ರಾಜ ಚಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ ಚಾರಿ ಸ್ಪೇಸ್ X ಮಿಷನ್ ನ ಕಮಾಂಡರ್ ಆಗಿ ಕಾರ್ಯನಿರ್ವಹಣೆ ಮಾಡಲಿದ್ದು, ನಾಸಾದ ಟಾಮ್ ಮಾರ್ಷ್ಬರ್ನ್ ಪೈಲಟ್ ಆಗಿ, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಥಿಯಾಸ್ ಮೌರರ್ ಮಿಷನ್ ಸ್ಪೆಷಲಿಸ್ಟ್ ಆಗಿ ಮೂವರು ಸಿಬ್ಬಂದಿಗಳನ್ನೊಳಗೊಂಡ ಸ್ಪೇಸ್ X ಮಿಷನ್ ನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆ ಮುಂದಿನ ವರ್ಷ ನೆರವೇರಲಿದೆ.
Excited and honored to be training with @astro_matthias and @AstroMarshburn in prep for a trip to the @Space_Station https://t.co/cHnWTmDAG9
— Raja Chari (@Astro_Raja) December 14, 2020
ನಾಲ್ಕನೇ ಸಿಬ್ಬಂದಿಯನ್ನು ನಂತರದ ದಿನಗಳಲ್ಲಿ ಸೇರಿಸಲಾಗುವುದು ಎಂದು ನಾಸ ತಿಳಿಸಿದೆ.
ತಮ್ಮ ಆಯ್ಕೆಯ ಬಗ್ಗೆ ಟ್ವೀಟ್ ಮಾಡಿರುವ ಚಾರಿ, ಬಾಹ್ಯಾಕಾಶ ಯಾನಕ್ಕಾಗಿ ತರಬೇತಿ ಪಡೆಯುವುದಕ್ಕೆ ಅತ್ಯಂತ ಉತ್ಸಾಹಿಯಾಗಿದ್ದೇನೆ ಎಂದು ಹೇಳಿದ್ದಾರೆ. ರಾಜಾ ಚಾರಿಯ ತಂದೆ ಶ್ರೀನಿವಾಸ್ ಚಾರಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಹೈದರಾಬಾದ್ ನಿಂದ ಅಮೆರಿಕಾಗೆ ಆಗಮಿಸಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು.