ಖಗೋಳ ವಿಸ್ಮಯ: ಆಗಸದಲ್ಲಿಂದು ಮಂಗಳ ಗ್ರಹಣ!

ಖಗೋಳದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಳೆ ನಡೆಯಲಿರುವುದು ಸೂರ್ಯಗ್ರಹಣವೂ ಅಲ್ಲ, ಚಂದ್ರಗ್ರಹಣವೂ ಅಲ್ಲ, ಬದಲಾಗಿ ಮಂಗಳನ ಮೇಲೆ ಚಂದ್ರನ ನೆರಳು ಬೀಳುವ ಮೂಲಕ ಉಂಟಾಗುವ ಮಂಗಳ ಗ್ರಹಣ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಉಡುಪಿ: ಖಗೋಳದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಹಲವು. ಅವುಗಳ ಪೈಕಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಳೆ ನಡೆಯಲಿರುವುದು ಸೂರ್ಯಗ್ರಹಣವೂ ಅಲ್ಲ, ಚಂದ್ರಗ್ರಹಣವೂ ಅಲ್ಲ, ಬದಲಾಗಿ ಮಂಗಳನ ಮೇಲೆ ಚಂದ್ರನ ನೆರಳು ಬೀಳುವ ಮೂಲಕ ಉಂಟಾಗುವ ಮಂಗಳ ಗ್ರಹಣ.

ಇಂದು ಸಂಜೆ 5 ಗಂಟೆಯಿಂದ ಅಕಾಶದಲ್ಲಿ ಮಂಗಳ ಗ್ರಹಣ ಸಂಭವಿಸಲಿದೆ. ಕಳೆದ ಕೆಲವು ತಿಂಗಳುಗಳಿಂದ ಈ ವಿದ್ಯಾಮಾನ ಸಂಭವಿಸುತ್ತಿದ್ದರೂ, ಭಾರತೀಯರಿಗೆ ಅದನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇಂದು ಆ ಅವಕಾಶ ಲಭ್ಯವಾಗಲಿದೆ ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಮಾಹಿತಿ ನತೀಡಿದ್ದಾರೆ. 

ಸಂಜೆ 5ರ ಸುಮಾರಿಗೆ ಅಕಾಶವನ್ನು ಗಮನಿಸಿದರೆ, ಚಂದ್ರನಿಗೆ ಬಹಳ ಹತ್ತಿರದಲ್ಲಿ ಹೊಳೆಯುವ ಒಂದು ಸಣ್ಣ ಚುಕ್ತಿಯಂತೆ ಮಂಗಳಗ್ರಹ ಅಥವಾ ಕೆಂಪು ಗ್ರಹ ಕಾಣುತ್ತದೆ. 

ನಂತರ ಕೆಲವೇ ನಿಮಿಷಘಳಲ್ಲಿ ಈ ಗ್ರಹ ಅಲ್ಲಿಂದ ಮಾಯವಾಗಲಿದೆ. ಅಂದರೆ ಮಂಗಳಗ್ರಹ ಮತ್ತು ಭೂಮಿಯ ನಡುವೆ ಬರಲಿದ್ದು, ಸುಮಾರು 1.30 ಗಂಟೆಗಳ ಕಾಲ ಮಂಗಳ ಗ್ರಹ ಚಂದ್ರನ ಹಿಂದೆ ಮರೆಯಾಗುತ್ತದೆ. ಇದೇ ಮಂಗಳ ಗ್ರಹಣವಾಗಿದೆ. 

ಕಳೆದ ಕೆಲವು ತಿಂಗಳುಗಳಲ್ಲಿ ಮಂಗಳವು ಚಂದ್ರನ ಹಿಂದೆ ಮರೆಯಾಗುವ ವಿದ್ಯಾಮಾನ ನಡೆಯುತ್ತಿದೆ. ಆದರೆ, ಅದು ಭೂಮಿಯ ಕೆಲವೇ ಭಾಗಗಳಲ್ಲಿ ಗೋಚರಿಸುತ್ತಿದೆ. ಈ ತಿಂಗಳು ಭಾರತದಲ್ಲಿ ಗೋಚರಿಸುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಜೆ 5.08ರ ಸುಮಾರಿಗೆ ಮಂಗಳ ಗ್ರಹಣವು ಕಾಣಿಸುತ್ತದೆ. ಸಂಜೆ 6.55ರ ಸುಮಾರಿಗೆ ಮಂಗಳ ಗ್ರಹವು ಚಂದ್ರನ ಇನ್ನೊಂದು ಭಾಗದಿಂದ ಹೊರಗೆ ಬಂದು ಗ್ರಹಣವು ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com