2024ರಲ್ಲಿ ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ, ಬಿಳಿಯೇತರ ವ್ಯಕ್ತಿಯನ್ನು ಕಳಿಸಲಿರುವ ನಾಸಾ!

ಚಂದ್ರ ಹಾಗೂ ಮಂಗಳನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ತಯಾರಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ಕ್ಕೆ ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳಿಸುವ ಯೋಜನೆಯನ್ನು ರೂಪಿಸಿದೆ. 
ನಾಸಾ
ನಾಸಾ

ವಾಷಿಂಗ್ ಟನ್: ಚಂದ್ರ ಹಾಗೂ ಮಂಗಳನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ತಯಾರಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ಕ್ಕೆ ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಹಾಗೂ ಓರ್ವ ಬಿಳಿಯೇತರ ವ್ಯಕ್ತಿಯನ್ನು ಕಳಿಸುವ ಯೋಜನೆಯನ್ನು ರೂಪಿಸಿದೆ. 
 
ಇದಕ್ಕಾಗಿ ನಾಸಾ ಆರ್ಟೆಮಿಸ್-III ಪ್ರೋಗ್ರಾಂನ್ನು ರೂಪಿಸಿದ್ದು, 2024 ರಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ಜೋ ಬೈಡನ್-ಕಮಲಾ ಹ್ಯಾರಿಸ್ ಆಡಳಿತ ಸರ್ಕಾರದ 2022 ನೇ ಆರ್ಥಿಕ ವರ್ಷದ ಆದ್ಯತೆಗಳನ್ನು ಮಂಡಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 

"ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಊಹಿಸಲು, ಚಂದ್ರ, ಮಂಗಳನ ಮೇಲ್ಮೈ ನಲ್ಲಿ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಸಹಕಾರಿಯಾಗುವಂತೆ ಅನುದಾನ, ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೈಡನ್ ಆಡಳಿತ ಕೆಲಸ ಮಾಡುತ್ತಿದೆ" ಎಂದು ನಾಸಾ ಮುಖ್ಯಸ್ಥರು ತಿಳಿಸಿದ್ದಾರೆ.

ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಮಹಿಳೆ ಒಬ್ಬರು ಹೋಗುತ್ತಿದ್ದರೆ, ಬಿಳಿಯೇತರ ವ್ಯಕ್ತಿ ಸಹ ಇದೇ ಮೊದಲ ಬಾರಿಗೆ ಚಂದ್ರ ಮೇಲೆ ಇಳಿಯಲಿದ್ದಾರೆ. ನಾಸಾಗೆ ಈ ಯೋಜನೆಗಾಗಿ ಬೈಡನ್ ಆಡಳಿತ 24.7 ಬಿಲಿಯನ್ ಡಾಲರ್ ನಷ್ಟು ಅನುದಾನ ಲಭ್ಯವಾಗಲಿದೆ ಎಂದು ನಾಸಾ ಮುಖ್ಯಸ್ಥ ಸ್ಟೀವ್ ಜುರ್​​ಝ್ಯ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com