ಜೀವವೈವಿದ್ಯ: ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತು 'ಚಾಕೊಲೇಟ್ ಕಪ್ಪೆ'

ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವು ನ್ಯೂ ಗಿನಿಯಾದ ದಟ್ಟ ಮಳೆಕಾಡುಗಳಲ್ಲಿ"ಚಾಕೊಲೇಟ್ ಕಪ್ಪೆ" ಎಂಬ ಹೊಸದಾದ ಮರಕಪ್ಪೆ ಪ್ರಭೇದವನ್ನು ಪತ್ತೆ ಮಾಡಿದೆ.

Published: 30th May 2021 04:30 PM  |   Last Updated: 30th May 2021 04:30 PM   |  A+A-


ಚಾಕೊಲೇಟ್ ಕಪ್ಪೆ

Posted By : Raghavendra Adiga
Source : Online Desk

ಮೆಲ್ಬೋರ್ನ್: ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವು ನ್ಯೂ ಗಿನಿಯಾದ ದಟ್ಟ ಮಳೆಕಾಡುಗಳಲ್ಲಿ"ಚಾಕೊಲೇಟ್ ಕಪ್ಪೆ" ಎಂಬ ಹೊಸದಾದ ಮರಕಪ್ಪೆ ಪ್ರಭೇದವನ್ನು ಪತ್ತೆ ಮಾಡಿದೆ.

ಮರಕಪ್ಪೆಗಳು  ಸಾಮಾನ್ಯವಾಗಿ ಹಸಿರು ಚರ್ಮದಿಂದ ಕೂಡಿರುತ್ತದೆ. ಆದರೆ ಈ ಹೊಸ ಪ್ರಭೇದದ ಕಪ್ಪೆ ಕಂದು ಬಣ್ಣದ ಚರ್ಮದಿಂದ ಕೂಡಿ ಚಾಕೋಲೇಟ್ ತರಹ ಕಾಣಿಸಿದೆ.ಸಂಶೋಧಕರು ಇದನ್ನು "ಚಾಕೊಲೇಟ್ ಕಪ್ಪೆ" ಎಂದು ಹೆಸರಿಸಿದ್ದಾರೆ - ಮತ್ತು ಅದೇ ಹೆಸರು ಖಾಯಂ ಆಗಿದೆ.

"Litoria mira ತಳಿಯ ಹತ್ತಿರದ ಸಂಬಂಧಿಯಾಗಿರುವ ಈ ಕಪ್ಪೆಆಸ್ಟ್ರೇಲಿಯಾದ ಹಸಿರು ಮರ ಕಪ್ಪೆಗಿಂತ ಭಿನ್ನವಾಗಿ  ಸುಂದರವಾದ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ" ಎಂದು ಪ್ಲಾನೆಟರಿ ಹೆಲ್ತ್ ಅಂಡ್ ಫುಡ್ ಸೆಕ್ಯುರಿಟಿ ಕೇಂದ್ರದ ಪಾಲ್ ಆಲಿವರ್ ಮತ್ತು ಆಸ್ಟ್ರೇಲಿಯನ್ ಜರ್ನಲ್ ಆಫ್ ನ್ಯೂರಾಲಜಿ ಜರ್ನಲ್ ನಲ್ಲಿ ವಿವರಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾಗಳು ಒಂದು ಕಾಲದಲ್ಲಿ ಭೂಮಿಯ ಸಂಪರ್ಕ ಹೊಂದಿದ್ದವು, ಆದರೆ  ಈಗ, ನ್ಯೂ ಗಿನಿಯಾವು ಮಳೆಕಾಡುಗಳಿಂದ ಆವೃತವಾಗಿದೆ. ಉತ್ತರ ಆಸ್ಟ್ರೇಲಿಯಾ ಮುಖ್ಯವಾಗಿ ಸವನ್ನಾ ದಿಂದ ಕೂಡಿದೆ.ಹಸಿರು ಮರ ಕಪ್ಪೆಗಳು  (Litoria caerulea)  ಉತ್ತರ ಮತ್ತು ಪೂರ್ವ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಾದ್ಯಂತ ಕಂಡುಬರುತ್ತವೆ. 

ಆಸ್ಟ್ರೇಲಿಯಾದ ವಿಜ್ಞಾನಿಗಳು 2016 ರಲ್ಲಿ ಈ ಜೀವಿಗಳ ಪೈಕಿ ಒಂದನ್ನು ಪತ್ತೆ ಮಾಡಿದ್ದರು. ಮತ್ತೀಗ ಈ ಪ್ರಭೇದ ನ್ಯೂಗಿನಿಯಾದಾದ್ಯಂತ ವ್ಯಾಪಕವಾಗಿ ಹರಡಬಹುದೆಂದು ಅವರು ಭಾವಿಸುತ್ತಾರೆ.
ಈ ಜಾತಿಯ ಕಪ್ಪೆಗೆ  ಅದರ ಚಾಕೊಲೇಟ್ ಬಣ್ಣದಿಂದ ಹೆಸರು ಬಂದಿದೆ. "ಕಪ್ಪೆ ಸಾಕಷ್ಟು ಬಿಸಿಯಾದ, ಜೌಗು ಪ್ರದೇಶಗಳಲ್ಲಿ ಇದ್ದು ಅಲ್ಲಿ ಮೊಸಳೆಗಳ ಸಂಖ್ಯೆ ಅತಿಯಾಗಿರುವ ಕಾರಣ ಸಂಶೋಧನೆಗೆ ಅಡ್ಡಿಯಾಗಿದೆ. " ಎಂದು ದಕ್ಷಿಣ ಆಸ್ಟ್ರೇಲಿಯಾದ ಮ್ಯೂಸಿಯಂನ ಕ ಸ್ಟೀವ್ ರಿಚರ್ಡ್ಸ್ ಹೇಳಿದ್ದಾರೆ.

ಕಪ್ಪೆಯು ಹ್ಯಾರಿ ಪಾಟರ್ ಸರಣಿಯಲ್ಲಿ ಕಂಡುಬರುವ ಮಾಂತ್ರಿಕ, ಮಂತ್ರಿಸಿದ ತಿಂಡಿಗಳಂತೆ ಕಾಣುತ್ತಿದ್ದರೂ, "ನಾವು ಈ ಹೊಸ Litoria ಕಪ್ಪೆ ಪ್ರಭೇದಕ್ಕೆ  Mira ಎಂದು ಹೆಸರಿಸಿದ್ದೇವೆ. ಇದರರ್ಥ ಲ್ಯಾಟಿನ್ ಭಾಷೆಯಲ್ಲಿ ಆಶ್ಚರ್ಯ ಅಥವಾ ವಿಚಿತ್ರವಾದದ್ದು, ಏಕೆಂದರೆ ನ್ಯೂ ಗಿನಿಯಾದ ದಟ್ಟ  ಮಳೆಕಾಡುಗಳಲ್ಲಿ ವಾಸಿಸುತ್ತಿರುವ ಆಸ್ಟ್ರೇಲಿಯಾದ  ಪ್ರಸಿದ್ಧ ಮತ್ತು ಸಾಮಾನ್ಯ ಹಸಿರು ಮರಕಪ್ಪೆಗಳ ಸಂಬಂಧಿ ಪ್ರಭೇದ ಪತ್ತೆಯಾಗಿರುವುದು  ಆಶ್ಚರ್ಯಕರವಾದ ಸಂಶೋಧನೆಯಾಗಿದೆ" ಆಲಿವರ್ ಹೇಳಿದರು.

"ಈ ಎರಡು ಪ್ರದೇಶಗಳ ನಡುವಿನ ಜೈವಿಕ ವಿನಿಮಯವನ್ನು ಪರಿಹರಿಸುವುದು ಮಳೆಕಾಡು ಮತ್ತು ಸವನ್ನಾ ಆವಾಸಸ್ಥಾನಗಳಲ್ಲಿ  ಹೇಗೆ ವಿಸ್ತರಿಸಿದೆ ಮತ್ತು ಸಂಕುಚಿತಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿರ್ಣಾಯಕವಾಗಿದೆ" "ನಮ್ಮ ಅಧ್ಯಯನದಲ್ಲಿ ಹೊಸ ಪ್ರಭೇದಗಳ ವ್ಯತ್ಯಾಸದ ಅಂದಾಜು Pliocene  (5.3 ರಿಂದ 2.6 ದಶಲಕ್ಷ ವರ್ಷಗಳ ಹಿಂದೆ) ಉತ್ತರ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದ ತಗ್ಗು ಪ್ರದೇಶದ ಉಷ್ಣವಲಯದ ಆವಾಸಸ್ಥಾನಗಳಲ್ಲಿ ಎರಡು ಪ್ರಭೇದಗಳ ನಡುವೆ ಇನ್ನೂ ಸಂಪರ್ಕವಿದೆ ಎಂದು ತೋರಿಸುತ್ತದೆ" ಎಂದು ಅವರು ಹೇಳಿದರು.


Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp