ಚಂದ್ರಯಾನ-3: ಪ್ರಮುಖ ಪರೀಕ್ಷೆ ಯಶಸ್ವಿ- ಇಸ್ರೋ

'ಚಂದ್ರಯಾನ-3'ರ ಪ್ರಮುಖ ಪರೀಕ್ಷೆಯೊಂದು ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ತಿಳಿಸಿದೆ.  
ಚಂದ್ರಯಾನ
ಚಂದ್ರಯಾನ

ಬೆಂಗಳೂರು: 'ಚಂದ್ರಯಾನ-3'ರ ಪ್ರಮುಖ ಪರೀಕ್ಷೆಯೊಂದು ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ತಿಳಿಸಿದೆ.  

ಲ್ಯಾಂಡರ್  ಜನವರಿ 31 ಮತ್ತು ಫೆಬ್ರವರಿ 2 ರ ನಡುವೆ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಯಶಸ್ವಿಯಾಗಿ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಇಂಟರ್‌ಫರೆನ್ಸ್/ಎಲೆಕ್ಟ್ರೋ-ಮ್ಯಾಗ್ನೆಟಿಕ್ ಕಾಂಪಾಟಿಬಿಲಿಟಿ (ಇಎಂಐ/ಇಎಂಸಿ) ಪರೀಕ್ಷೆಗೆ ಒಳಗಾಗಿದೆ. 

ಬಾಹ್ಯಾಕಾಶ ಪರಿಸರದಲ್ಲಿ ಉಪಗ್ರಹ ಉಪವ್ಯವಸ್ಥೆಗಳ ಕಾರ್ಯನಿರ್ವಹಣೆ ಮತ್ತು ನಿರೀಕ್ಷಿತ ವಿದ್ಯುತ್ಕಾಂತೀಯ ಮಟ್ಟಗಳೊಂದಿಗೆ ಅವುಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಉಪಗ್ರಹ ಕಾರ್ಯಾಚರಣೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಇಸ್ರೋ ಹೇಳಿದೆ.  ಉಪಗ್ರಹಗಳ ಸಾಕ್ಷಾತ್ಕಾರದಲ್ಲಿ ಈ ಪರೀಕ್ಷೆ ಪ್ರಮುಖ ಮೈಲಿಗಲ್ಲು ಎನ್ನಲಾಗಿದೆ. 

ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಚಂದ್ರಯಾನ-3 ಅಂತರಗ್ರಹ ಮಿಷನ್ ಪ್ರಮುಖವಾಗಿ  ಪ್ರೊಪಲ್ಷನ್, ಲ್ಯಾಂಡರ್ ಮತ್ತು ರೋವರ್  ಮಾಡ್ಯೂಲ್‌ಗಳನ್ನು ಹೊಂದಿದೆ. ಇದೇ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ -3 ಉಡಾವಣೆ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com