ಭಾರತದ ಮೊದಲ ಆದಿತ್ಯ ಎಲ್ 1 ಮಿಷನ್ ನಿಂದ ಮತ್ತೊಂದು ಶುಭ ಸುದ್ದಿ; ಇಸ್ರೋಗೆ ದೊಡ್ಡ ಗೆಲುವು!
ಚಂದ್ರಯಾನ-3 ಮಿಷನ್ ಯಶಸ್ಸಿನ ನಂತರ, ಇಸ್ರೋ ಇಂದು ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ-ಎಲ್ 1 ಬಗ್ಗೆ ಒಳ್ಳೆಯ ಸುದ್ದಿ ನೀಡಿದೆ. ಇದೀಗ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯ ಪ್ರಭಾವ ವಲಯದಿಂದ ಯಶಸ್ವಿಯಾಗಿ ಹೊರಚಿಮ್ಮಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
Published: 01st October 2023 01:57 AM | Last Updated: 01st October 2023 01:58 AM | A+A A-

ಆದಿತ್ಯ ಎಲ್ 1
ಚಂದ್ರಯಾನ-3 ಮಿಷನ್ ಯಶಸ್ಸಿನ ನಂತರ, ಇಸ್ರೋ ಇಂದು ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ-ಎಲ್ 1 ಬಗ್ಗೆ ಒಳ್ಳೆಯ ಸುದ್ದಿ ನೀಡಿದೆ. ಇದೀಗ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯ ಪ್ರಭಾವ ವಲಯದಿಂದ ಯಶಸ್ವಿಯಾಗಿ ಹೊರಚಿಮ್ಮಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಇದುವರೆಗೆ ಆದಿತ್ಯ-ಎಲ್1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಿದೆ.
ಇಸ್ರೋ 'X' ನಲ್ಲಿ ಟ್ವೀಟ್ ಮಾಡಿದ್ದು ಆದಿತ್ಯ-L1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿದೆ. ಇದು ಈಗ ಸೂರ್ಯ-ಭೂಮಿಯ ಲಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತಿದೆ. ಇಸ್ರೋ ಭೂಮಿಯ ಪ್ರಭಾವದ ಗೋಳದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಮೊದಲ ಬಾರಿಗೆ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ಕಳುಹಿಸಿತ್ತು.
ಆದಿತ್ಯ-ಎಲ್ 1 ಸೌರ ಮಿಷನ್ ಬಾಹ್ಯಾಕಾಶ ನೌಕೆಯು ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಸಹಾಯ ಮಾಡುವ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದೆ ಎಂದು ಇಸ್ರೋ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು. ಎಲ್1 ಸುತ್ತ ಸಂಗ್ರಹಿಸಿದ ಮಾಹಿತಿಯು ಸೌರ ಮಾರುತದ ಮೂಲ ಮತ್ತು ಬಾಹ್ಯಾಕಾಶ ಹವಾಮಾನ ವಿದ್ಯಮಾನಗಳ ಅನಿಸೊಟ್ರೋಪಿಯ ಒಳನೋಟವನ್ನು ನೀಡುತ್ತದೆ ಎಂದು ಅದು ಹೇಳಿದೆ. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ನಿಂದ ಆದಿತ್ಯ-ಎಲ್1 ಉಡಾವಣೆಯನ್ನು ಸೆಪ್ಟೆಂಬರ್ 2ರಂದು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಸೂರ್ಯನನ್ನು ಅಧ್ಯಯನ ಮಾಡಲು ಒಟ್ಟು ಏಳು ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತಿದೆ.
ಇದನ್ನೂ ಓದಿ: ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್-1: ಸೂರ್ಯಯಾನ ಯಾತ್ರೆ ಆರಂಭ
ಇವುಗಳಲ್ಲಿನ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತವೆ. ಉಳಿದ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರದ ಇನ್-ಸಿಟು ನಿಯತಾಂಕಗಳನ್ನು ಅಳೆಯುತ್ತವೆ. ಆದಿತ್ಯ L1 ಎರಡು ಮುಖ್ಯ ಪೇಲೋಡ್‌ಗಳನ್ನು ಹೊಂದಿದೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಫಿ (VELC) ಮತ್ತು ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT). ಲ್ಯಾಗ್ರೇಂಜ್ ಪಾಯಿಂಟ್ ತಲುಪಿದ ನಂತರ, VELC ಪೇಲೋಡ್ ಪ್ರತಿದಿನ 1,440 ಚಿತ್ರಗಳನ್ನು ರವಾನಿಸುತ್ತದೆ. ಆದ್ದರಿಂದ, ಈ ಪೇಲೋಡ್ ಅನ್ನು ಆದಿತ್ಯ-L1 ರ ಅತ್ಯಂತ ಪ್ರಮುಖ ಪೇಲೋಡ್ ಎಂದು ಪರಿಗಣಿಸಲಾಗಿದೆ. ಆದಿತ್ಯ-L1 ಅನ್ನು ಲಗ್ರಾಂಜಿಯನ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಇದು ಅದೇ ಸಾಪೇಕ್ಷ ಸ್ಥಾನದಲ್ಲಿ ಸೂರ್ಯನ ಸುತ್ತ ಸುತ್ತುತ್ತದೆ ಮತ್ತು ಆದ್ದರಿಂದ ನಿರಂತರವಾಗಿ ಸೂರ್ಯನನ್ನು ವೀಕ್ಷಿಸಬಹುದು.
Aditya-L1 Mission:
— ISRO (@isro) September 30, 2023
The spacecraft has travelled beyond a distance of 9.2 lakh kilometres from Earth, successfully escaping the sphere of Earth's influence. It is now navigating its path towards the Sun-Earth Lagrange Point 1 (L1).
This is the second time in succession that…