ಹೆಚ್ ಎಎಲ್ ನಿರ್ಮಿತ ಲಘು ಯುದ್ಧ ವಿಮಾನ 'ತೇಜಸ್ Mk1A' ಯಶಸ್ವಿ ಹಾರಾಟ

ಹೆಚ್ಎಎಲ್ ನಿರ್ಮಿತ ತೇಜಸ್ Mk1A ಸರಣಿಯ ಮೊದಲ ವಿಮಾನ ಎಲ್ಎ 5033 ಗುರುವಾರ ಯಶಸ್ವಿಯಾಗಿ ಹಾರಾಟ ನಡೆಸಿತು ಎಂದು ಸಾರ್ವಜನಿಕ ವಲಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ತಿಳಿಸಿದೆ.
ತೇಜಸ್ Mk1A ಹಾರಾಟ
ತೇಜಸ್ Mk1A ಹಾರಾಟ

ಬೆಂಗಳೂರು: ಹೆಚ್ಎಎಲ್ ನಿರ್ಮಿತ ತೇಜಸ್ Mk1A ಸರಣಿಯ ಮೊದಲ ವಿಮಾನ ಎಲ್ಎ 5033 ಗುರುವಾರ ಯಶಸ್ವಿಯಾಗಿ ಹಾರಾಟ ನಡೆಸಿತು ಎಂದು ಸಾರ್ವಜನಿಕ ವಲಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ತಿಳಿಸಿದೆ.

ತೇಜಸ್ Mk1A ವಿಮಾನ 18 ನಿಮಿಷ ಯಶಸ್ವಿ ಹಾರಾಟ ನಡೆಸಿದ್ದು, ಈ ವಿಮಾನವನ್ನು ಮುಖ್ಯ ಪರಿಕ್ಷಾರ್ಥ ಪೈಲಟ್ ಗ್ರೂಪ್ ಕ್ಯಾಪ್ಟನ್ ಕೆ ಕೆ ವೇಣುಗೋಪಾಲ್ (ನಿವೃತ್ತ) ಚಾಲನೆ ಮಾಡಿದರು ಎಂದು ಕಂಪನಿ ಹೇಳಿದೆ.

ತೇಜಸ್ Mk1A ಹಾರಾಟ
'ತೇಜಸ್' ಲಘು ಯುದ್ಧ ವಿಮಾನವನ್ನು ಭಾರತೀಯ ವಾಯಪಡೆಗೆ ಹಸ್ತಾಂತರಿಸಿದ ಹೆಚ್ ಎಎಲ್!

ಜಾಗತಿಕ ಭೌಗೋಳಿಕ ರಾಜಕೀಯ ಪರಿಸರದಲ್ಲಿ ಪ್ರಮುಖ ಪೂರೈಕೆ ಸರಪಳಿ ಸವಾಲುಗಳ ನಡುವೆ ಫೆಬ್ರವರಿ 2021 ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಏಕಕಾಲೀನ ವಿನ್ಯಾಸ ಮತ್ತು ಅಭಿವೃದ್ಧಿಯೊಂದಿಗೆ HAL ಈ ಮಹತ್ವದ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೆಚ್ ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ ಬಿ ಅನಂತಕೃಷ್ಣನ್ ಹೇಳಿದ್ದಾರೆ.

ಈ ಯಶಸ್ಸಿಗೆ ಕೊಡುಗೆ ನೀಡಿದ ರಕ್ಷಣಾ ಸಚಿವಾಲಯ, ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಸಂಬಂಧಿತ ಖಾಸಗಿ ಸಂಸ್ಥೆಗಳಿಗೆ ಹೆಚ್ ಎಎಲ್ ಕೃತಜ್ಞತೆ ಸಲ್ಲಿಸಿದ್ದು, ಭಾರತೀಯ ವಾಯುಪಡೆಗೆ ತೇಜಸ್ Mk1A ಶೀಘ್ರ ಸೇರ್ಪಡೆಯನ್ನು ದೇಶ ಎದುರು ನೋಡಬಹುದು ಎಂದು ಹೇಳಿದೆ. ತೇಜಸ್ Mk1A ಸುಧಾರಿತ ಎಲೆಕ್ಟ್ರಾನಿಕ್ ರಾಡಾರ್, ಯುದ್ಧ ಮತ್ತು ಸಂವಹನ ವ್ಯವಸ್ಥೆಗಳು, ಹೆಚ್ಚುವರಿ ಯುದ್ಧ ಸಾಮರ್ಥ್ಯ ಮತ್ತು ಸುಧಾರಿತ ನಿರ್ವಹಣಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ. ನವೆಂಬರ್ 8, 2023 ರಂದು CSIR-ನ್ಯಾಷನಲ್ ಏರೋಸ್ಪೇಸ್ ಲ್ಯಾ ಬೋರೇಟರೀಸ್ (CSIR-NAL) ನೊಂದಿಗೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದಕ್ಕೆ ಹೆಚ್ ಎಎಲ್ ಸಹಿ ಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com